ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಸೆಲೂನ್ ಮುಂದೆ ಸಿಕ್ಕಿಬಿದ್ದ ನಟಿ!

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ಎಲಿ ಅವ್ರಾಮ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿಯಿದೆ. ಮಾರ್ಚ್ 5ರಂದು ಹಾರ್ದಿಕ್ ಪಾಂಡ್ಯರನ್ನು ಎಲಿ ತಮ್ಮ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದರು. ಈಗ ಮತ್ತೆ ಇಬ್ಬರೂ ಸಲೂನ್ ಒಂದರ ಹೊರಗೆ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ.

ಬಾಂದ್ರಾದ ಸಲೂನ್ ಒಂದರ ಮುಂದೆ ಪಾಂಡ್ಯ ಹಾಗೂ ಎಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕ್ಯಾಮರಾ ನೋಡ್ತಿದ್ದಂತೆ ಎಲಿ ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಡಿಸೆಂಬರ್ 27ರಂದು ಪಾಂಡ್ಯ ಸಹೋದರನ ಮದುವೆ ಸಮಾರಂಭದಲ್ಲೂ ಎಲಿ ಭಾಗಿಯಾಗಿದ್ದಳು.
ಹಾರ್ದಿಕ್ ಪಾಂಡ್ಯ ಹಾಗೂ ನಟಿಯರ ಹೆಸರು ಒಟ್ಟಿಗೆ ಕೇಳಿ ಬಂದಿರೋದು ಇದೇ ಮೊದಲಲ್ಲ. ಟ್ವೀಟರ್ ವಿಚಾರದಲ್ಲಿ ಹಾರ್ದಿಕ್ ಹಾಗೂ ಪರಿಣಿತಿ ಚೋಪ್ರಾ ಚರ್ಚೆಗೆ ಬಂದಿದ್ದರು. ನಂತ್ರ ಮಾಡೆಲ್ ಲಿಸಾ ಶರ್ಮಾ ಜೊತೆ ಪಾಂಡ್ಯ ಹೆಸರು ಸೇರಿತ್ತು. ಇದನ್ನು ಕುಟುಂಬಸ್ಥರು ನಿರಾಕರಿಸಿದ್ದರು.

Leave a Reply