ಚ್ಯುಯಿಂಗ್ ಗಮ್ ತಿನ್ನುತ್ತೀರಾ? ಹಾಗಿದ್ದರೆ ಇದನ್ನು ಓದಿ

ಚ್ಯುಯಿಂಗ್ ಗಮ್ ತಿನ್ನುತ್ತೀರಾ? ಹಾಗಿದ್ದರೆ ಇದನ್ನು ಓದಿ

ಕೆಲವರಿಗೆ ಸದಾ ಬಾಯಿಗೆ ಚ್ಯುಯಿಂಗ್ ಹಾಕಿ ಜಗಿಯುತ್ತಾ ಇರುವುದು ಚಟ. ಇದು ನಿಜವಾಗಿ ನಮ್ಮ ಆರೋಗ್ಯಕ್ಕೆ ಮಾಡುವ ಹಾನಿ ಏನು?
ದವಡೆ ನೋವು ಚ್ಯುಯಿಂಗ್ ಗಮ್ ಜಗಿಯುವುದರಿಂದ ದವಡೆಗೆ ವ್ಯಾಯಾಮ ಸಿಗುತ್ತದೆ ಎಂಬ ತಪ್ಪು ಕಲ್ಪನೆ ನಮಗಿದೆ. ಆದರೆ ಇದು ತಪ್ಪು. ಇದು ನಮ್ಮ ದವಡೆಗೆ ಹೆಚ್ಚಿನ ಕೆಲಸ ನೀಡಿ ನೋವಾಗುವಂತೆ ಮಾಡುತ್ತದೆ. ಹೊಟ್ಟೆ ನೋವು ಚ್ಯುಯಿಂಗ್ ಗಮ್ ಜಗಿಯುವುದರಿಂದ ನಮ್ಮ ಆಹಾರ ನಾಳದ ಮೂಲಕ ಅಗತ್ಯಕ್ಕಿಂತ ಹೆಚ್ಚು ಗಾಳಿ ಒಳ ಸೇರುತ್ತದೆ. ಇದು ಹೊಟ್ಟೆ ನೋವಿಗೆ ಕಾರಣವಾಗಬಹುದು.
ಕೃತಕ ಸಿಹಿ ಚ್ಯುಯಿಂಗ್ ಗಮ್ ನಲ್ಲಿರುವ ಕೃತಕ ಸಿಹಿ ನಮ್ಮ ಆರೋಗ್ಯಕ್ಕೆ ಸುತರಾಂ ಒಳ್ಳೆಯದಲ್ಲ. ಕೃತಕ ಸಿಹಿ ನಮ್ಮ ಆರೋಗ್ಯಕ್ಕೆ ಹಲವು ರೀತಿಯಿಂದ ಮಾರಕವಾಗಬಹುದು. ತಲೆನೋವು ತುಂಬಾ ಸಮಯದವರೆಗೆ ಚ್ಯುಯಿಂಗ್ ಗಮ್ ಜಗಿಯುತ್ತಿದ್ದರೆ ತಲೆನೋವು ಗ್ಯಾರಂಟಿ. ನಮ್ಮ ಮೆದುಳಿಗೆ ಸಂಪರ್ಕ ಹೊಂದಿರುವ ಮಾಂಸ ಖಮಡಗಳು ಹೆಚ್ಚು ಹೊತ್ತು ಜಗಿಯುವುದರಿಂದ ಬಿಗಿಯಾಗುವ ಸಂಭವವಿದೆ. ಹೀಗಾಗಿ ತಲೆನೋವು ಬರಬಹುದು ಎನ್ನಲಾಗಿದೆ.

WhatsApp Group Join Now
Telegram Group Join Now

* * * * * * * * * *

Leave a Reply