ಚಿತ್ರರಂಗದಲ್ಲಿ 2 ದಶಕ ಪೂರೈಸಿದ ಸುದೀಪ್‌.. ಕಿಚ್ಚನ 22 ವರ್ಷಗಳ ಜರ್ನಿ ಹೇಗಿತ್ತು ಗೊತ್ತಾ..?

ಸ್ಯಾಂಡಲ್‌ವುಡ್‌, ಕಾಲಿವುಡ್‌, ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷಗಳು ತುಂಬಿವೆ.

ಹೌದು, ಸುಮಾರು ಎರಡು ದಶಕಗಳಿಂದ ನಿರಂತರವಾಗಿ ಅಭಿಮಾನಿಗಳನ್ನು ರಂಜಿಸುತ್ತಿರುವ ಸುದೀಪ್‌‌, ಕೋಟ್ಯಾಂತರ ಹೃದಯಗಳ ಚಕ್ರವರ್ತಿಯಾಗಿ ನೆಲೆಸಿದ್ದಾರೆ. ಹೀಗೆ ಅಭಿನಯ ಚಕ್ರವರ್ತಿ ಎನ್ನುವ ಪಟ್ಟ ತನ್ನದಾಗಿಸಿಕೊಂಡಿರುವ ಕಿಚ್ಚ ಸುದೀಪ್‌, ಈಗ ಕನ್ನಡದ ಟಾಪ್‌ ನಟರಲ್ಲೊಬ್ಬರು.

ತಮ್ಮ ಸಿನಿಮಾ ಕರಿಯರ್‌ಗೆ 22 ವರ್ಷಗಳ ತುಂಬಿರುವ ಹಿನ್ನೆಲೆಯಲ್ಲಿ ಪತ್ರವೊಂದನ್ನು ಬರೆದು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ ಸುದೀಪ್‌. ಈ ಪತ್ರದಲ್ಲಿ ಅವರ ಮೊದಲ ಚಿತ್ರ, ಆ ಚಿತ್ರದಲ್ಲಿ ಹಿರಿಯ ನಟ ಅಂಬರೀಷ್‌ ಜೊತೆ ನಟನೆ, ಪ್ರಾರಂಭದಲ್ಲಿ ಹಲವು ಟೇಕ್ಸ್‌ಗಳನ್ನು ತೆಗೆದುಕೊಳ್ಳುತ್ತಿದ್ದಿದ್ದು ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಫುಲ್ ಡೀಟೇಲ್ಸ್
Twenty two years of Cinema. https://t.co/diZcH76Nj4

— Kichcha Sudeepa (@KicchaSudeep)

Leave a Reply