ಕನ್ನಡ ಸಿನಿಮಾದ ಆಡಿಷನ್ ನಲ್ಲಿ ರಿಜೆಕ್ಟ್ ಆದ ಕನ್ನಡದ ಹುಡುಗಿ ಈಗ ದಕ್ಷಿಣ ಭಾರತದ ಟಾಪ್ ಓನ್ ನಟಿ

ಕೆಲವೊಮ್ಮೆ ಜೀವನದಲ್ಲಿ ವಿಚಿತ್ರಗಳು, ವಿದಿ ಆಟಗಳು ನಡೆಯುತ್ತವೆ. ಕಂಪ್ಯೂಟರ್ ಅಪ್ಪ್ಲಿಕೇಶನ್ಸ್ ನಲ್ಲಿ ಡಿಗ್ರಿ ಮಾಡಿದ ಹುಡುಗಿ ನಟಿಯಾಗಬೇಕೆಂದು ಫೋಟೋ ಶೂಟ್ ಮಾಡಿಸುತ್ತಾಳೆ. ಹಾಗೆ, ಆ ಫೋಟೋಗಳನ್ನು ನಿರ್ಮಾಪಕರಿಗೆ ಕೊಟ್ಟಾಗ ಅವರ ರಿಯಾಕ್ಷನ್ ಏನು?

ನಾವು ಮಾತಾಡುತ್ತಿರುವುದು ಕನ್ನಡದ ಹುಡುಗಿ ಹಾಗು ದಕ್ಷಿಣ ಭಾರತದ ಟಾಪ್ ನಟಿ ಅನುಷ್ಕಾ ಶೆಟ್ಟಿ ಬಗ್ಗೆ, ಹೌದು, ಚಿತ್ರರಂಗದ ಅವಕಾಶಕ್ಕಾಗಿ ಫೋಟೋಶೂಟ್ ಮಾಡಿದ ಅನುಷ್ಕಾ ಅವರು ಅವಕಾಶ ಕೋರಿ ಫೋಟೋಗಳನ್ನು ನಿರ್ಮಾಪಕರಿಗೆ ಕಳುಹಿಸಿದರು.

ಫೋಟೋ ನೋಡಿದ ನಿರ್ಮಾಪಕರು, ‘ಈ ಹುಡುಗೀನಾ? ಅದೂ ಹೀರೋಯಿನ್ ರೋಲ್ ಗೆ? ಬೇಡ ಬೇಡ’ ಎಂದು ಅನುಷ್ಕಾ ಫೋಟೋವನ್ನು ರಿಜೆಕ್ಟ್ ಮಾಡುತ್ತಾರೆ. ಅದರಲ್ಲಿ ಕನ್ನಡದ ಹಾಗು ಇತರ ಭಾಷೆಯ ನಿರ್ಮಾಪಕರು ಇದ್ದಾರೆ. ಅಷ್ಟೇ ಅಲ್ಲದೆ..

ಕನ್ನಡದ ಸಿನಿಮಾಗಳಿಗೆ ಆಡಿಷನ್ ನಡೆಯುತ್ತಿದ್ದಾಗ ಅನುಷ್ಕಾ ಅವರು ಭಾಗವಹಿಸುತ್ತಾರೆ. ಆದ್ರೆ, ಎರಡನೆಯ ಸುತ್ತಿಗೂ ಆಯ್ಕೆ ಆಗುವುದಿಲ್ಲ. ಇದರಿಂದ ಬೇಸತ್ತ ಅನುಷ್ಕಾ ಅವರು ಸಿನಿಮಾ ಆಡಿಷನ್ ನಲ್ಲಿ ಭಾಗವಹಿಸುವುದನ್ನೇ ಬಿಟ್ಟಿದ್ದರು.

ನಂತರ ಯೋಗ ಕಲಿತು, ಬೆಂಗಳೂರಿನ ಯೋಗ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಯೋಗ ಕಲಿಯಲು ಬಂದ ತೆಲುಗು ನಟ ನಾಗಾರ್ಜುನ್ ಮಗ ನಾಗಚೈತನ್ಯ, ಅನುಷ್ಕಾರನ್ನು ನೋಡಿ ತನ್ನ ತಂದೆಯ ‘ಸೂಪರ್’ ಸಿನೆಮಾಗೆ ರೆಫರ್ ಮಾಡುತ್ತಾರೆ.

ಅಲ್ಲಿಂದ ಹಿಂತಿರುಗಿ ನೋಡದ ಅನುಷ್ಕಾ, ದಕ್ಷಿಣ ಭಾರತದ ಟಾಪ್ ಒನ್ ನಟಿಯಾಗಿ ಬೆಳೆದರು. ಆದ್ರೆ, ಇಲ್ಲಿಯವರೆಗೂ ಕನ್ನಡದ ಚಿತ್ರದಲ್ಲಿ ಮಾತ್ರ ನಟಿಸಲು ಮನಸ್ಸು ಮಾಡಲಿಲ್ಲ. ಕನ್ನಡ ಚಿತ್ರರಂಗ ನನ್ನನ್ನು ರಿಜೆಕ್ಟ್ ಮಾಡಿತ್ತು ಅನ್ನೋ ಕೋಪ ಅವರಲ್ಲಿ ಇದಿಯೋ ಏನೋ ಗೊತ್ತಿಲ್ಲ.

Leave a Reply