ಮಹಾಲಕ್ಷ್ಮೀ, ಒಂದು ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್, ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರೂ ಒಬ್ಬರು, ಡಾ.ರಾಜ್ ರಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿರುವ ಈ ನಟಿಯ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ.
ಕನ್ನಡದ ಟಾಪ್ ನಟನ (ಆತ ನಿರ್ದೇಶಕ ಹಾಗು ನಿರ್ಮಾಪಕ ಕೂಡ) ಜೊತೆ ಮಹಾಲಕ್ಷ್ಮೀ ಸ್ನೇಹ ಬೆಳೆಯಿತು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ತುಂಬಾ ಘಾಡವಾದ ಪ್ರೀತಿಯಲ್ಲಿ ಮುಳುಗಿದ್ದರು, ಎಷ್ಟರ ಮಟ್ಟಿಗೆ ಅಂದ್ರೆ, ಇಬ್ಬರನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನೋ ಹಾಗೆ.
ಇವರ ಪ್ರೀತಿಯ ವಿಷಯ ನಟನ ಮನೆಯಲ್ಲಿ ಗೊತ್ತಾಯಿತು, ಇದು ಮನೆಯಲ್ಲಿ ಕೋಲಾಹಲ ಸೃಷ್ಟಿಸಿತು. ಮಹಾಲಕ್ಷ್ಮೀಯನ್ನು ಮದುವೆಯಾಗುವುದು ನಟನ ಮನೆಯವರಿಗೆ ಇಷ್ಟ ಇರಲಿಲ್ಲ, ದಿಡೀರ್ ಅಂತ ಒಂದು ಹುಡುಗಿಯನ್ನು ನೋಡಿ ನಟನಿಗೆ ಮದುವೆ ಮಾಡಿದರು ಮನೆಯವರು.
ಅಲ್ಲಿಗೆ ಮಹಾಲಕ್ಷ್ಮೀ ಪ್ರೀತಿ ಮುರಿದುಬಿತ್ತು. ಈ ನಟಿ ತುಂಬಾ ಸ್ವಾಭಿಮಾನದ ಒಳ್ಳೆಯ ಹುಡುಗಿ, ಪ್ರೀತಿ ಫೇಲ್ಯೂರ್ ಆಗಿದ್ದೇ ತಡ, ಪೀಕ್ ನಲ್ಲಿದ್ದ ಟೈಮ್ ನಲ್ಲೇ ಚಿತ್ರರಂಗವನ್ನು ತೊರೆದರು ನಟಿ ಮಹಾಲಕ್ಷ್ಮೀ. ಕೊನೆಗೂ ಮನೆಯವರು ಈ ನಟಿಗೆ ಮಾಡುವೆ ಮಾಡಿದರು.
ಹಲವಾರು ಕಾರಣಗಳಿಂದ ಮೊದಲನೆಯ ಪತಿಗೆ ವಿಚ್ಛೇದನ ಕೊಟ್ಟರು ಮಹಾಲಕ್ಷ್ಮೀ, ಹಾಗೆ ಎರಡನೆಯ ಮದುವೆ ಕೂಡ ತುಂಬಾ ಕಾಲ ಉಳಿಯಲಿಲ್ಲ. ಮೂರನೇ ಮದುವೇನೂ ಮುರಿದು ಬಿದ್ದಾಗ ಮಹಾಲಕ್ಷ್ಮೀಗೆ ಮಾನಸಿಕ ಖಿನ್ನತೆ ಕಾಡಿತು.
ಪ್ರೀತಿ, ಸಾಂಸಾರಿಕ ಜೀವನದಿಂದ ನೊಂದು ಬೆಂದ ಮಹಾಲಕ್ಷ್ಮೀ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ಎಲ್ಲವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿ, ಚೆನ್ನೈ ನ ಒಂದು ಚರ್ಚ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರೀತಿ ಆಕೆಯ ಜೀವನವನ್ನೇ ನಾಶ ಮಾಡಿತು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ