ಈಗಿನ ಸಂದರ್ಭಗಳಲ್ಲಿ ಒಬ್ಬ ನಟಿ ಜೊತೆ ನಟಿಸಿದರೆ ಮತ್ತೇ ಆಕೆ ಜೊತೆ ನಟಿಸಲು ತುಂಬಾ ಜನ ನಟರು ಒಪ್ಪಿಕೊಳ್ಳುವುದಿಲ್ಲ, ಹೀಗಿರುವಾಗ ಒಬ್ಬ ಹೀರೋಯಿನ್ ಜೊತೆ 130 ಚಿತ್ರಗಳಲ್ಲಿ ನಟಿಸಿರುವ ನಟ ಯಾರು ಗೊತ್ತಾ.?
ಪ್ರೇಮ್ ನಸೀರ್, ಮಲಯಾಳಂ ಚಿತ್ರರಂಗದ ಎವ್ರಿಗ್ರೀನ್ ನಟ, ಇವರು ಈಗ ಇಲ್ಲದಿದ್ದರೂ, ಅವರು ಮಾಡಿರುವ 3 ದಾಖಲೆಗಳನ್ನು ಯಾರು ಮುರಿಯಲು ಸಾದ್ಯವಿಲ್ಲ ಬಿಡಿ, ಅವರು ಮಾಡಿರುವ ಅಷ್ಟು ದೊಡ್ಡ ದಾಖಲೆಗಳು ಯಾವುವು ಗೊತ್ತಾ.?
ಪ್ರೇಮ್ ನಸೀರ್ ಹೀರೋ ಆಗಿ ನಟಿಸಿರುವ ಚಿತ್ರಗಳ ಸಂಖ್ಯೆ 725, ಹೀರೋ ಆಗಿ ಇಷ್ಟು ಚಿತ್ರಗಳನ್ನು ಪ್ರಪಂಚದ ಯಾವ ನಟ ಕೂಡ ನಟಿಸಿಲ್ಲ, ಇವರ 3 ಗಿನ್ನೆಸ್ ದಾಖಲೆಗಳಲ್ಲಿ ಇದೂ ಕೂಡ ಒಂದು.
ನಟಿ ಶೀಲಾ ಜೊತೆ 130 ಚಿತ್ರಗಳಲ್ಲಿ ನಟಿಸಿದ್ದಾರೆ ಪ್ರೇಮ್ ನಸೀರ್, ಇದೂ ಕೂಡ ಗಿನ್ನೆಸ್ ದಾಖಲೆಯಾಗಿದೆ, ಈ ದಾಖಲೆ ಮುರಿಯಲು ಸಾದ್ಯವೇ.? ಮೂರನೇ ದಾಖಲೆ ಏನು ಗೊತ್ತಾ.?
ಪ್ರೇಮ್ ನಸೀರ್ ಅವರು ಒಂದೇ ವರ್ಷದಲ್ಲಿ 40 ಚಿತ್ರಗಳಲ್ಲಿ ನಟಿಸಿದ್ದು, 40 ಚಿತ್ರಗಳಲ್ಲಿ 80 ನಟಿಯರು ನಟಿಸಿದ್ದಾರೆ. ಅಂದ್ರೆ, ಒಂದೇ ವರ್ಷದಲ್ಲಿ 80 ನಟಿಯರ ಜೊತೆ ನಟಿಸಿರುವ ನಟ ಇವರೊಬ್ಬರೇ, ಇದು 3 ನೇ ಗಿನ್ನೆಸ್ ರೆಕಾರ್ಡ್ ಆಗಿದೆ.
ದಕ್ಷಿಣ ಭಾರತದಲ್ಲಿ ಮಲಯಾಳಂ ಚಿತ್ರರಂಗ ತುಂಬಾ ಚಿಕ್ಕದು, ಆದರೂ ಸಹ ಪ್ರೇಮ್ ನಸೀರ್ ಅವರು 3 ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ ಅಂದ್ರೆ ಯಾವ ಪದದಲ್ಲಿ ವರ್ಣಿಸಬೇಕೋ ಗೊತ್ತಿಲ್ಲ, ನೀವೇ ಒಂದು ಪದವನ್ನು ಈ ಅದ್ಭುತ ನಟನಿಗೆ ಕೊಡಿ.