ಎಚ್ಚರ.! ಮೂತ್ರ ನೊರೆ ನೊರೆಯಿಂದ ಕೂಡಿದ್ದರೆ.! | ಆರೋಗ್ಯ ಮಾಹಿತಿ

ಮೂತ್ರ ವಿಸರ್ಜನೆ ಮಾಡುವಾಗ ಅದರ ಬಣ್ಣ ಹಾಗೂ ವಾಸನೆಯ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಮೂತ್ರದ ಬಣ್ಣ ಸ್ವಚ್ಛ ನೀರಿನಂತೆ ಇದ್ದರೆ, ನಿಮ್ಮ ಆರೋಗ್ಯವೂ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಅದೇ ಮೂತ್ರದ ಬಣ್ಣ ಗಾಢ, ವಾಸನೆ ಮತ್ತು ಗುಳ್ಳೆಗಳಿಂದ ಕೂಡಿದ್ದರೆ, ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುವುದು.

ಮೂತ್ರವಿಸರ್ಜನೆ ಮಾಡುವಾಗ ನಾವು ಹೆಚ್ಚು ಶಕ್ತಿಯನ್ನು ಬಳಸಿ ವಿಸರ್ಜನೆ ಮಾಡಿದರೆ ನೊರೆಗಳು ಉಂಟಾಗುವುದು ಸಹಜ. ಮೂತ್ರ ವಿಸರ್ಜನೆ ಡಿಟಜೆಂಟ್‍ಗಳ ಮೇಲೆ ಮಾಡಿದರೆ ಅಥವಾ ಹೆಚ್ಚು ಶಕ್ತಿ ಉಪಯೋಗಿಸಿ ವಿಸರ್ಜಿಸುವುದರಿಂದ ನೊರೆಗಳುಂಟಾಗುವುದು.

WhatsApp Group Join Now
Telegram Group Join Now

ಅದೇ ನಿತ್ಯದ ಮೂತ್ರ ವಿಸರ್ಜನೆಯಲ್ಲೂ ನೊರೆಗಳುಂಟಾಗುತ್ತದೆಯಾದರೆ ಹೆಚ್ಚಿನ ಕಾಳಜಿವಹಿಸಬೇಕಾಗುವುದು. ಅಲ್ಲದೆ ವೈದ್ಯರ ಮೊರೆ ಹೋಗಬೇಕು. ಹೀಗೆ ನೊರೆಯುಂಟಾಗಲು ಯಾವೆಲ್ಲಾ ಅನಾರೋಗ್ಯ ಸಮಸ್ಯೆಗಳಿರುತ್ತವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ….

ನಿರ್ಜಲೀಕರಣದ ಸಮಸ್ಯೆಯಿಂದ ಮೂತ್ರವು ಪ್ರೋಟೀನ್ ಮತ್ತು ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. ಹಾಗಾಗಿ ಪದೇ ಪದೇ ನೀರು ಕುಡಿಯುತ್ತಲೇ ಇರಬೇಕು.  ಗರ್ಭಾವಸ್ಥೆಯಲ್ಲಿರುವಾಗ ಈ ರೀತಿಯ ಮೂತ್ರ ವಿಸರ್ಜನೆ ಸಹಜವಾಗಿರುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ಮೂತ್ರಪಿಂಡಗಳು ಹೆಚ್ಚು ಕಾರ್ಯನಿರ್ವಹಿಸುವುದು. ಅಲ್ಲದೆ ಪ್ರೋಟೀನ್ ಮೂತ್ರದೊಳಗೆ ಸೋರಿಕೆಯಾಗುತ್ತಿರುತ್ತದೆ.

WhatsApp Group Join Now
Telegram Group Join Now

ಒತ್ತಡ ಹೆಚ್ಚಾದಾಗ ಪ್ರೋಟೀನ್ ಮೂತ್ರದಲ್ಲಿ ಸೋರಿಕೆಯಾಗುತ್ತದೆ. ಆ ಸಂದರ್ಭದಲ್ಲಿ ಮೂತ್ರವು ನೊರೆಯಿಂದ ಕೂಡಿರುತ್ತದೆ. ಮಧುಮೇಹವೂ ಸಹ ಮೂತ್ರಪಿಂಡದ ಮೇಲೆ ಪ್ರಭಾವ ಬೀರುವುದು ಮತ್ತು ನೊರೆಯುಕ್ತ ಮೂತ್ರ ಉಂಟಾಗುವುದು. ಮೂತ್ರಪಿಂಡಗಳಿಗೆ ಅಧಿಕ ಸಕ್ಕರೆಯುಕ್ತ ರಕ್ತವೂ ಮೂತ್ರದ ಮೇಲೆ ಪರಿಣಾಮ ಬೀರುವುದು.

ಮೂತ್ರದಲ್ಲಿ ಪ್ರೋಟೀನ್ ಪ್ರಮಾಣವು ಅಧಿಕವಾಗಿದ್ದರೆ ಆ ಸ್ಥಿತಿಯನ್ನು ಪ್ರೋಟೀನ್‍ಯೂರಿಯಾ ಎಂದು ಕರೆಯುತ್ತಾರೆ. ಮೂತ್ರಪಿಂಡಗಳು ಸರಿಯಾಗಿ ಪ್ರೋಟೀನ್‍ಗಳನ್ನು ಫಿಲ್ಟರ್ ಮಾಡದಿರುವಾಗ ಈ ಸಮಸ್ಯೆಯಾಗುವುದು. ವೈದ್ಯರ ಮೊರೆ ಹೋಗಬೇಕು.

WhatsApp Group Join Now
Telegram Group Join Now

ಯುಟಿಐ ಬ್ಯಾಕ್ಟೀರಿಯಾಗಳು ಮೂತ್ರದ ಪ್ರದೇಶವನ್ನು ಪ್ರವೇಶಿಸಿದಾಗ ನೊರೆ ಮೂತ್ರ ಉಂಟಾಗುವುದು.
ನೊರೆಯುಕ್ತ ಮೂತ್ರವು ಹೃದಯ ನಾಳದ ಸಮಸ್ಯೆಯ ಲಕ್ಷಣವನ್ನು ತೋರಿಸುತ್ತದೆ. ಮೂತ್ರದಲ್ಲಿ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್‍ಗಳು ಸ್ಟ್ರೋಕ್‍ನಂತಹ ಸಮಸ್ಯೆಗಳನ್ನು ಹುಟ್ಟಿಸಬಹುದು.

Leave a Reply