ಇಲ್ಲಿದೆ ನೀತಾ ಅಂಬಾನಿ ಗ್ಲಾಮರ್ ಗುಟ್ಟು – ಜೀವನಶೈಲಿ

ಉದ್ಯಮಿ ಮುಖೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮದುವೆ ತಯಾರಿಯಲ್ಲಿದ್ದಾರೆ. ಮುಖೇಶ್ ಅಂಬಾನಿ ಸೊಸೆ, ಮಗನ ಜೊತೆ ಪತ್ನಿ ನೀತಾ ಅಂಬಾನಿ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇದೆ. ಉದ್ಯಮಿ ನೀತಾ ಅಂಬಾನಿ ಅನೇಕರ ರೋಲ್ ಮಾಡೆಲ್. 54ನೇ ವರ್ಷದಲ್ಲೂ ನೀತಾ ಅಂಬಾನಿ ಇಷ್ಟು ಫಿಟ್ ಆಗಿರಲು ಏನು ಕಾರಣ ಎಂಬುದು ಅನೇಕರ ಪ್ರಶ್ನೆ.
ನೀತಾ ಅಂಬಾನಿ ತೂಕ ಇಳಿಸಿಕೊಳ್ಳುವ ಜೊತೆಗೆ ಮೊದಲಿಗಿಂತ ಸುಂದರವಾಗಿ ಕಾಣ್ತಿದ್ದಾರೆ. ಹೆಂಗಳೆಯರು ಒಮ್ಮೆ ನೀತಾ ನೋಡಿ ಹೊಟ್ಟೆ ಉರಿದುಕೊಳ್ಳುವುದಂತೂ ಸುಳ್ಳಲ್ಲ. ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ನೀತಾ ಬೆಳಿಗ್ಗೆನಿಂದ ರಾತ್ರಿಯವರೆಗೆ ಕೆಲವೊಂದು ನಿಯಮಗಳನ್ನು ಪಾಲಿಸ್ತಾರೆ.

ಇದ್ರಲ್ಲಿ ಡಯೆಟ್ ಹಾಗೂ ವ್ಯಾಯಾಮ ಸೇರಿದೆ. ಮದುವೆಗೂ ಮುನ್ನ ನೀತಾ 47 ಕೆ.ಜಿ. ಇದ್ದರಂತೆ. ಮಕ್ಕಳಾದ್ಮೇಲೆ ನೀತಾ 90 ಕೆ.ಜಿ.ಗೆ ಏರಿದ್ದರಂತೆ. ಈಗ ತೂಕ ಹೇಗೆ ಇಳಿಸಿಕೊಂಡ್ರಿ ಎನ್ನುವ ಪ್ರಶ್ನೆಗೆ ನೀತಾ, ಮಗ ಅನಂತ್ ಹೆಸರು ಹೇಳಿದ್ದಾರೆ. ಕಿರಿ ಮಗ ಅನಂತ್ ಪ್ರೇರಣೆಯೇ ತೂಕ ಇಳಿಸಿಕೊಳ್ಳಲು ಕಾರಣ ಎಂದಿದ್ದಾರೆ.
ಬೆಳಿಗ್ಗೆ ಎದ್ದ ನಂತ್ರ 40 ನಿಮಿಷ ವ್ಯಾಯಾಮ, ಯೋಗ ಮತ್ತು ಸ್ವಿಮ್ಮಿಂಗ್ ಮಾಡ್ತಾರೆ. ಇದ್ರಿಂದ ಕೊಬ್ಬು ಬೇಗ ಕರಗುವುದಲ್ಲದೆ ವೇಗವಾಗಿ ತೂಕ ಇಳಿಯುತ್ತದೆ. ಜೊತೆಗೆ ನೀತಾ ಡಾನ್ಸ್ ಕೂಡ ಮಾಡ್ತಾರಂತೆ. ಕೆಲಸ ಮುಗಿದ ನಂತ್ರ ಸಂಜೆ 40 ನಿಮಿಷ ವ್ಯಾಯಾಮ ಹಾಗೂ ಯೋಗ ಮಾಡ್ತಾರಂತೆ ನೀತಾ.
ನೀತಾ ಬೆಳಿಗ್ಗೆ ಬಾದಾಮಿ ಹಾಗೂ ವಾಲ್ನೆಟ್ ತಿನ್ನುತ್ತಾರೆ. ಎಗ್ ವೈಟ್ ಆಮ್ಲೆಟ್ ಬೆಳಿಗ್ಗಿನ ಉಪಹಾರವಾಗಿ ಸೇವನೆ ಮಾಡ್ತಾರೆ. ಜೊತೆಗೆ ಇಡೀ ದಿನ ಆರೋಗ್ಯಕರ ಡಯೆಟ್ ಆಹಾರವನ್ನು ತಿನ್ನುತ್ತಾರೆ. ಮಧ್ಯಾಹ್ನ ಊಟಕ್ಕೆ ಹಸಿರು ತರಕಾರಿ ಹಾಗೂ ಸೂಪ್ ಸೇವಿಸುತ್ತಾರೆ. 4.30ಕ್ಕೆ ಸರಿಯಾಗಿ ಪನ್ನೀರ್ ಅಥವಾ ಆರೋಗ್ಯಕರ ಸ್ನ್ಯಾಕ್ಸ್ ತಿನ್ನುತ್ತಾರೆ. ರಾತ್ರಿ ಊಟದ ಜೊತೆ ತರಕಾರಿ, ಸೂಪ್ ಸೇವನೆ ಮಾಡ್ತಾರೆ.
ವ್ಯಾಯಾಮ, ಡಯೆಟ್ ಜೊತೆ ಒತ್ತಡವಿಲ್ಲದ ಜೀವನ ಬಹಳ ಮುಖ್ಯ. ಇದು ತೂಕ ಇಳಿಸಿಕೊಳ್ಳಲು ಸಹಕಾರಿ ಎಂದು ನೀತಾ ಹೇಳುತ್ತಾರೆ.

Leave a Reply