ಕಾಲ ಮನುಷ್ಯನ ಜೀವನ ಮತ್ತು ಗುರಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತದೆ. ನೂರಾರು ಚಿತ್ರಗಳಲ್ಲಿ ನಟಿಸಿದ ಈ ನಟಿ ಈಗ ದೊಡ್ಡ ಚಾಕಲೇಟ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಆ ನಟಿ ಯಾರು ಗೊತ್ತಾ.?
ನಟಿ ಶಾರದ, ದಕ್ಷಿಣ ಭಾರತದಲ್ಲಿ ಈ ನಟಿಯನ್ನು ನೋಡದ ವ್ಯಕ್ತಿ ಇರುವುದಿಲ್ಲ, ಅಷ್ಟು ದೊಡ್ಡ ನಟಿ ಇವರು, ಅನಂತ್ ನಾಗ್ ಜೊತೆ ‘ಮಾತು ತಪ್ಪಿದ ಮಗ’ ಚಿತ್ರ ಸೇರಿ ಸುಮಾರು 10 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಶಾರದ.
ಟಾಪ್ ನಟಿಯಾಗಿದ್ದಾಗ 3 ಮಕ್ಕಳಿರುವಾಗ ಕಾಮೆಡಿಯನ್ ಚೇಲಂ ರನ್ನು ಮದುವೆಯಾದರು ಶಾರದ, ಕುಡಿದು ಶೂಟಿಂಗ್ ಗೆ ಬರುತ್ತಿದ್ದ ಚೇಲಂ, ಈ ನಟಿಯನ್ನು ಹೊಡೆಯುತ್ತಿದ್ದ, ನರಕ ತಾಳಲಾರದೆ ವಿಚ್ಛೇದನ ಪಡೆದಳು, ಎರಡನೇ ಮದುವೆ ಕೂಡ ವಿಚ್ಛೇದನದೊಂದಿಗೆ ಕೊನೆಯಾಯಿತು.
ವಿವಾಹದ ಬಗ್ಗೆ ವೈರಾಗ್ಯ ಬೆಳೆಸಿಕೊಂಡ ಶಾರದ, ತನ್ನ ತಮ್ಮನ ಮನೆಯಲ್ಲಿದ್ದು, ಆತನ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿದರು. ಅದೇ ಸಮಯದಲ್ಲಿ LOTUS ಅನ್ನೋ ಚಾಕಲೇಟ್ ಕಂಪನಿಯನ್ನು ಪ್ರಾರಂಭಿಸಿದರು ಈ ನಟಿ.
ಈಗ ಪ್ರಸಿದ್ಧ ಚಾಕಲೇಟ್ ಗಳಲ್ಲಿ ಲೋಟಸ್ ಕೂಡ ಒಂದು, ಭಾರತ ಅಲ್ಲದೇ ವಿದೇಶಗಳಿಗೂ ರಫ್ತು ಆಗುವ ಈ ಚಾಕಲೇಟ್, ಅಲ್ಲಿ ಭಾರೀ ಬೇಡಿಕೆಯನ್ನು ಹೊಂದಿದ್ದು, 2 ಸಾವಿರ ಕಾರ್ಮಿಕರ ಜೊತೆ ನೂರಾರು ಕೋಟಿ ವ್ಯವಹಾರವನ್ನು ನಡೆಸುತ್ತಿದೆ. ವ್ಯಾಪಾರದಲ್ಲೂ ನಟಿ ಶಾರದ ಮಿಂಚುತ್ತಿದ್ದಾರೆ.