ಅಗ್ನಿ ಸಾಕ್ಷಿ ಸನ್ನಿದಿ ಅದೃಷ್ಟ ಖುಲಾಯಿಸಿದೆ.. ಹೊಸ ಶೋಗೆ ಈಕೆಯ ಸಂಭಾವನೆ ಎಷ್ಟು ಗೊತ್ತಾ.?

ಕಾಮಿಡಿ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುತ್ತದೆ ಅದಕ್ಕಾಗಿ ಎಲ್ಲಾ ವಾಹಿನಿಗಳು ಹೆಚ್ಚಾಗಿ ಕಾಮಿಡಿ ಶೋಗಳನ್ನು ಮಾಡುತ್ತವೆ, ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಮಿಂಚಿ ಹೊಸ ಬಂಪರ್ ಆಫರ್ ನೊಂದಿಗೆ ನಿರೂಪಕಿಯಾಗಿದ್ದಾರೆ ವೈಷ್ಣವಿ ಗೌಡ, ಯಾವ ಶೋ ಗೊತ್ತಾ.?

ಇದೇ ತಿಂಗಳ 23 ರಿಂದ ಸುವರ್ಣ ಟಿ.ವಿ ಯಲ್ಲಿ ‘ಭರ್ಜರಿ ಕಾಮಿಡಿ’ ಶೋ ಪ್ರಾರಂಭವಾಗುತ್ತಿದ್ದು, ಈ ಶೋ ತೀರ್ಪುಗಾರರಾಗಿ ದೊಡ್ಡಣ್ಣ, ಡೈರೆಕ್ಟರ್ ಗುರುಪ್ರಸಾದ್ ಹಾಗು ರಾಗಿಣಿ ಇರಲಿದ್ದಾರೆ.

ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ವಾರ ಪೂರ್ತಿ ಬಣ್ಣ ಹಚ್ಚಿದರೂ ಸಂಪಾದನೆ ಅಷ್ಟಕ್ಕಷ್ಟೇ, ಆದರೆ ಈ ಕಾಮಿಡಿ ಶೋಗೆ ವೈಷ್ಣವಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಒಂದು ಎಪಿಸೋಡ್ ಗೆ ಬರೋಬ್ಬರಿ 1.5 ಲಕ್ಷ ಎಂದು ಮಾಹಿತಿ ಸಿಕ್ಕಿದೆ.

ಒಳ್ಳೆಯ ಮಾತುಗಾರಿಕೆ, ವಾಯ್ಸ್ ಹೊಂದಿರುವ ವೈಷ್ಣವಿಗೆ ನಿರೂಪಣೆ ಹೇಳಿ ಮಾಡಿಸಿದ ಕಲೆ, ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಟ್ಟು ಆಕೆಯನ್ನು ಕರೆತಂದಿದ್ದಾರೆ ಅಂದ್ರೆ ಗೊತ್ತಾಗತ್ತೆ ಆಕೆಗಿರುವ ಬೇಡಿಕೆ ಎಷ್ಟು ಎಂದು ಅಲ್ವಾ..

Leave a Reply