ಶ್ರೀ ದೇವಿ ದುಬೈನಲ್ಲಿ ಅಕಾಲಿಕ ಮರಣಕ್ಕೆ ತುತ್ತಾದಾಗ ತಕ್ಷಣ ಪಾರ್ಥಿವ ಶರೀರವನ್ನು ಇಂಡಿಯಾಗೆ ತರಲು ಅನಿಲ್ ಅಂಬಾನಿ ತನ್ನ ಪ್ರೈವೇಟ್ ವಿಮಾನವನ್ನು ಕಳುಹಿಸಿದ್ದರು. ಆಗ ಎಲ್ಲರಿಗೂ ಆಶ್ಚರ್ಯ, ಇವರಿಬ್ಬರ ಕುಟುಂಬದ ಮದ್ಯೆ ಅಷ್ಟೊಂದು ಆತ್ಮೀಯ ಸಂಬಂಧ ಇದೆಯಾ ಅನಿಸಿತ್ತು.
ಶ್ರೀದೇವಿ ಮೃತ ದೇಹ ಇಂಡಿಯಾಗೆ ಬಂದಾಗ ಕುದ್ದು ಹೆಂಡ್ತಿ ಜೊತೆ ಏರ್ಪೋರ್ಟ್ ಗೆ ಹೋಗಿದ್ದ ಅನಿಲ್ ಅಂಬಾನಿ, ತಾವೇ ಕಾರ್ ಚಾಲನೆ ಮಾಡಿಕೊಂಡು ಪಾರ್ಥಿವ ಶರೀರ ಮನೆಗೆ ಸೇರುವಂತೆ ಮಾಡಿದ್ದರು, ಅಷ್ಟೇ ಅಲ್ಲ ಅಂತ್ಯ ಸಂಸ್ಕಾರದಲ್ಲಿ ಮುಖ್ಯ ಪಾತ್ರವಹಿಸಿದ್ದರು.
ಇವರಿಬ್ಬರ ಕುಟುಂಬಗಳ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಲು ಕೆಲವು ಹಿತೈಷಿಗಳು ಮುಂದಾಗಿದ್ದು, ವಿಷಾದವಿರುವ ಮನೆಯಲ್ಲಿ ಶುಭ ಸಮಾರಂಭ ಮಾಡಲು ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮೂಲಗಳಿಂದ ತಿಳಿದುಬಂದಿದೆ.
ಅನಿಲ್ ಅಂಬಾನಿಗೆ ಇಬ್ಬರು ಗಂಡು ಮಕ್ಕಳಿದ್ದು, ಶ್ರೀದೇವಿ ದೊಡ್ಡ ಮಗಳು ಜಾನ್ವಿಯನ್ನು ಹಿರಿಯ ಮಗನಿಗೆ ಕೊಟ್ಟು ಮದುವೆ ಮಾಡಲು ಹಿರಿಯ ತಲೆಗಳು ಚಿಂತಿಸುತ್ತಿದ್ದಾರೆ, ಆದ್ರೆ ದೊಡ್ಡ ಮಗಳು ಜಾನ್ವಿ ಈಗಷ್ಟೇ ಮೊದಲ ಚಿತ್ರದಲ್ಲಿ ನಟಿಸುತ್ತಿದ್ದಾಳೆ.
ಅಲ್ಲದೇ, ಇಷ್ಟು ಚಿಕ್ಕ ವಯಸ್ಸಿಗೆ ಮದುವೆ ಅಷ್ಟು ಸಮಂಜಸವಲ್ಲ, ಹಾಗಾಗಿ ಮೊದಲು ನಿಶ್ಚಿತಾರ್ಥ ಮಾಡಿ ಕೆಲವು ವರ್ಷಗಳ ನಂತರ ಮದುವೆ ಮಾಡಿದರೆ, ಜಾನ್ವಿ ಸಿನೆಮಾಗಳಲ್ಲಿ ತೊಡಗಿಸಿಕೊಳ್ಳಲು ಕಾಲಾವಕಾಶ ಸಿಕ್ಕಂತೆ ಆಗುತ್ತದೆ ಅನ್ನೋದು ಹಿರಿಯರ ಚಿಂತನೆ.