PM Kisan Samman Yojana : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM Kisan Samman Yojana) ಅಡಿಯಲ್ಲಿ ಈಗಾಗಲೇ ಎಲ್ಲ ರೈತರ ಬ್ಯಾಂಕ್ ಖಾತೆಗೆ 14 ರಿಂದ 15 ಕಂತುಗಳು ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗಿದ್ದು, ₹2000 ರೂಪಾಯಿಯಂತೆ ವಾರ್ಷಿಕ ₹6000 ರೂಪಾಯಿಯನ್ನ ಎಲ್ಲ ರೈತ ಫಲಾನುಭವಿಗಳು ಪಡೆಯುತ್ತಿದ್ದಾರೆ.
ಈಗಾಗಲೇ ಎಲ್ಲ ರೈತರ ಬ್ಯಾಂಕ್ ಖಾತೆಗೆ 15 ಕಂತಿನವರೆಗೆ ಹಣ ಜಮಾ ಆಗಿದ್ದು, ಇದೀಗ ಹದಿನಾರನೆಯ ಕಂತಿನ ಹಣ ಜಮಾ ಕುರಿತು ಬ್ರೇಕಿಂಗ್ ಮಾಹಿತಿ ಲಭ್ಯವಾಗಿದೆ. ಹೌದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು(PM Kisan Samman Yojana) ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಮುಖ ಮಹತ್ವಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ ನಮ್ಮ ದೇಶಾದಾದ್ಯಂತ ಒಟ್ಟು 15 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳು ಈ ಯೋಜನೆಯ ಫಲಾನುಭವಿಯಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2000 ರೂಪಾಯಿ ಕಂತುಗಳು ಪಡೆಯುತ್ತಿದ್ದಾರೆ.
ಇದನ್ನೂ ಕೂಡ ಓದಿ : Solar Pumpset : ಉಚಿತ ಸೋಲಾರ್ ಪಂಪ್ ಸೆಟ್.! 1.5 ಲಕ್ಷ ಸಬ್ಸಿಡಿ : ಮೊಬೈಲ್ ನಲ್ಲಿಯೇ ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಸಲ್ಲಿಸಿ.!
ಹಣ ನಿಮ್ಮ ಖಾತೆಗೆ ಜಮಾ ಆಗುತ್ತಾ ಅಥವಾ ಇಲ್ವಾ ಎಂಬುದನ್ನ ತಿಳಿದುಕೊಳ್ಳುವ ಮುನ್ನ ನೀವು ಇದುವರೆಗೂ ಈ-ಕೆವೈಸಿಯನ್ನ ದೃಢೀಕರಿಸಿಲ್ವಾ? ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan Samman Yojana) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡುವ ಮೂಲಕ ಈ-ಕೆವೈಸಿ ದೃಢೀಕರಿಸಿಕೊಳ್ಳಿ.
ಒಂದು ವೇಳೆ ನೀವು ಈ-ಕೆವೈಸಿಯನ್ನು ದೃಢೀಕರಿಸದಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಈ ಹಿಂದಿನ ಕಂತುಗಳು ಸೇರಿ ಮುಂದಿನ ಕಂತುಗಳು ಕೂಡ ಜಮಾವಣೆ ಆಗುವುದಿಲ್ಲ. ಹೀಗಾಗಿ ತಪ್ಪದೇ ಈ-ಕೆವೈಸಿ ದೃಢೀಕರಿಸಿಕೊಳ್ಳಿ. ಇನ್ನು ಹದಿನಾರನೆಯ ಕಂತಿನ ಹಣವು ಇದೇ ಮಾರ್ಚ್ ತಿಂಗಳಿನಲ್ಲಿ ಎಲ್ಲರ ಬ್ಯಾಂಕ್ ಖಾತೆಗೆ ಸಂಪೂರ್ಣವಾಗಿ ಜಮಾ ಮಾಡುವುದಕ್ಕೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.
ಇದನ್ನೂ ಕೂಡ ಓದಿ : Annabhagya Scheme : ಜನವರಿ ಮತ್ತು ಫೆಬ್ರವರಿ ತಿಂಗಳ ಅಕ್ಕಿ ಹಣ ಬಂದಿಲ್ವಾ – ಈಗಲೇ ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ ನೋಡಿ
ಈಗಾಗಲೇ ಹಲವು ರೈತರ ಬ್ಯಾಂಕ್ ಖಾತೆಗೆ ಹಣ ಹಂತ-ಹಂತವಾಗಿ ಜಮಾ ಮಾಡುವುದಕ್ಕೆ ಆದೇಶ ನೀಡಲಾಗಿದೆ. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರು ಈ ಯೋಜನೆಯ ಲಾಭವನ್ನ ಪಡೆದು ಫಲಾನುಭವಿಯಾಗಿದ್ದರೆ, ಇದುವರೆಗೂ ನೀವು ಈ-ಕೆವೈಸಿ ಮಾಡಿಲ್ಲಾಂದ್ರೆ ಆದಷ್ಟು ಬೇಗ ಈ-ಕೆವೈಸಿಯಂನ ಮಾಡಿಸಿಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..