ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಾಹಿಸುತ್ತವೆ. ರಚನೆ ಅಕಾರ ಅಂಗಗಳನ್ನು ರಚಿಸುವುದು ಸ್ಯಾಯುಗಳನ್ನು ನಿರ್ವಾಹಿಸುವುದು ಮತ್ತು ಅತಿ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು. ದೇಹದಲ್ಲಿರುವ ಎಲುಬುಗಳ ಕಾರ್ಯವನ್ನು ನಿರ್ವಾಹಿಸುವುದು. ವಯಸ್ಸಾಗುತ್ತ ಬಂದಂತೆ ಎಲುಬುಗಳು ಸಾಂದ್ರತೆಯನ್ನು ಕಳೆದುಕೊಳ್ಳಲು ಆರಂಭಿಸುತ್ತದೆ.

ಬಾಲ್ಯ ಮತ್ತು ಹದಿಹರಿಯದ ಸಮಯದಲ್ಲಿ ಬಲವಾದ ಮತ್ತು ಆರೋಗ್ಯಕರ ಎಲುಬುಗಳು ನಿಮ್ಮದಾಗಿದ್ದರು ಕೂಡ ವಯಸ್ಸು 35 ದಾಟುತ್ತಿದ್ದಂತೆ ನೀವು ಎಲುಬುಗಳ ಆರೋಗ್ಯದ ಬಗ್ಗೆ ಹಾಗೂ ಬಲಪಡಿಸುವುದರ ಬಗ್ಗೆ ಗಮನಹರಿಸಲೇಬೇಕಾಗುತ್ತದೆ. ವಯಸ್ಸು 35ದಾಟಿ 40 ಹತ್ತಿರವಾಗುತ್ತಿದಂತೆ ಕಾಲ್ಸಿಯಂ ಯುಕ್ತ ಆಹಾರ ಸೇವನೆ ಅತಿ ಅವಶ್ಯಕವಾಗಿರುತ್ತದೆ.
ಹಾಲು ಮೊಸರು ಮತ್ತು ಚೀಸ್ ನಂತಹ ಹಾಲಿನ ಉತ್ಪನ್ನಗಳಲ್ಲಿ ಕಾಲ್ಸಿಯಂ ಅಧಿಕವಾಗಿರುತ್ತವೆ. ಅಧಿಕ ಕಾಲ್ಸಿಯಂ ಹೊಂದಿರುವ ಡೇರಿ ಉತ್ಪನ್ನಗಳ ಜೊತೆಗೆ ಬ್ರೊಕೋಲಿ ಹಸಿರು ತರಕಾರಿಗಳ ಸೇವನೆಯು ಅವಶ್ಯ. ಬಾದಾಮ್ ಮತ್ತು ಸೋಯಾ ಮಿಲ್ಕ್ ಗಳನ್ನು ದಿನನಿತ್ಯ ಕುಡಿಯುವುದರಿಂದ ಕಾಲ್ಸಿಯಂ ಹೆಚ್ಚಿಸಿಕೊಳ್ಳ ಬಹುದು. ಮೀನು ಕೂಡ ಅತ್ಯಧಿಕ ಕಾಲ್ಸಿಯಂ ಯುಕ್ತ ಆಹಾರವಾಗಿದೆ.

ವಯಸ್ಸು 20 ರಿಂದ 30ರ ತನಕ ದೇಹ ಸುಮಾರು ಸಾವಿರ ಮಿಲಿಗ್ರಾಮ್ ದಿಂದ ಎರಡುಸಾವಿರ ಮಿಲಿಗ್ರಾಮ್ ವರೆಗೆ
ಕಾಲ್ಸಿಯಂ ಹೊಂದಿರುತ್ತದೆ. ಆದರೆ ವಯಸ್ಸಾಗುತ್ತ ಬಂದಂತೆ
ದೇಹದಲ್ಲಿರುವ ಕಾಲ್ಸಿಯಂ ಪ್ರಮಾಣ ತಗ್ಗಲು ಪ್ರಾರಂಭವಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಪಡೆದು ರಕ್ತದ ಪರೀಕ್ಷೆಮಾಡಿಸಿ. ನಿಮ್ಮ ದೇಹದಲ್ಲಿ ಕಾಲ್ಸಿಯಂ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ. ವಯಸ್ಸಿನ ಪ್ರಕಾರ ನಿಮ್ಮ ದೇಹದಲ್ಲಿ ಇರಬೇಕಾದ ಕಾಲ್ಸಿಯಂ ಪ್ರಮಾಣವನ್ನು ಇಲ್ಲಿ ನೀಡಲಾಗಿದೆ.
ದಿನನಿತ್ಯ ದೈಹಿಕವಾಗಿ ನಿಷ್ಕ್ರಿಯವಾಗಿರುವ ಜನರಲ್ಲಿ ಮೂಳೆ ಶಕ್ತಿ ಹೀನವಾಗಲು ಆರಂಭಿಸುತ್ತದೆ. ಹೀಗಾಗಿ ನಿಮ್ಮ ಮೂಳೆಯ ಬಲವನ್ನು ಹೆಚ್ಚಿಸಲು ದಿನನಿತ್ಯ ವ್ಯಾಯಾಮ ಮಾಡಬೇಕು. ಜಾಗಿಂಗ್ ಏರೋಬಿಕ್ಸ್ ನೃತ್ಯ ಟೆನ್ನಿಸ್ ಮತ್ತು ಬಾಸ್ಕೆಟ್ ಬಾಲ್ ಆಟಗಳು ಸಹ ಎಲುಬುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ವೈದ್ಯರು ನಿಮಗೆ ಯಾವ ವ್ಯಾಯಾಮವನ್ನು ಸೂಚಿಸುತ್ತಾರೋ ಅದನ್ನು ದಿನನಿತ್ಯ ತಪ್ಪದೆ ಮಾಡಲು ಮರೆಯದಿರಿ.

ಇನ್ನೊಂದು ಮುಖ್ಯ ವಿಚಾರ ಸಂಶೋಧನೆಯ ಪ್ರಕಾರ ತಂಬಾಕು ಮೂಳೆಯ ಶಕ್ತಿಯನ್ನು ಕುಂದಿಸುತ್ತದೆ. ಹೀಗಾಗಿ ಧೂಮಪಾನವನ್ನು ಬಿಟ್ಟುಬಿಡಿ. ದಿನನಿತ್ಯ ಕೂಡಿಯುವ ಅಭ್ಯಾಸ ಹೊಂದಿರುವುದು ಕೂಡ ಅಪಾಯ.
ಏಕೆಂದರೆ ಆಹಾರದ ಮೂಲಕ ಕಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಆಲ್ಕೋಹಾಲ್ ಕುಂದಿಸುತ್ತದೆ.
ಆದ್ದರಿಂದ ಧೂಮಪಾನವನ್ನು ಆಲ್ಕೋಹಾಲ್ ಸೇವನೆಯನ್ನು ಇಂದೇ ಬಿಟ್ಟುಬಿಡಿ. ಹಾಗು ನಿಮ್ಮ ದೇಹದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ