Pedicure : ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ, ಸುಂದರವಾದ ಪಾದ ನಿಮ್ಮದಾಗಿಸಿಕೊಳ್ಳಿ

Pedicure : ನಮಸ್ಕಾರ ಸ್ನೇಹಿತರೇ, ಸೌಂದರ್ಯ ಅಂದ್ರೆ ದೇಹದ ಎಲ್ಲಾ ಅಂಗಗಳು(full body) ಕೂಡ ಸುಂದರವಾಗಿ ಕಾಣಿಸಬೇಕು ಎಂದುಕೊಳ್ಳುತ್ತೇವೆ. ಆದ್ರೆ ನಾವು ಹೆಚ್ಚಾಗಿ ಮುಖದ ಸೌಂದರ್ಯಕ್ಕೆ ಒತ್ತು ನೀಡುತ್ತೇವೆ. ಮುಖಕ್ಕೆ ಸರಿ ಹೊಂದುವ ಕ್ರೀಮ್ ಹಚ್ಚುತ್ತೇವೆ. ಹಾಗೆ ಮುಖದ ಮೇಲೆ ಕಲೆಗಳು ಆಗದಂತೆ ನೋಡಿಕೊಳ್ಳುತ್ತೇವೆ. ಮುಖದ ಕಾಳಜಿ ಇನ್ನಿಲ್ಲದಂತೆ ಮಾಡುತ್ತೇವೆ.ಪಾರ್ಲರ್‌ಗೆ ತೆರಳುತ್ತೇವೆ. ಮಲಗುವಾಗ, ಬಿಸಿಲಿಗೆ ಹೋಗುವಾಗ, ಚಳಿಗಾಲಕ್ಕೆ, ಬೇಸಿಗೆಯಲ್ಲಿ ಮುಖದ ಕಾಂತಿಯ ಕುರಿತು ಎಚ್ಚರಿಕೆ ವಹಿಸುತ್ತೇವೆ.

ಇನ್ನು ನಮ್ಮ ಮುಖದಂತೆ ಉಳಿದ ಅಂಗದ ಕಡೆಗೂ ನಾವು ಗಮನವಿಡಬೇಕಾಗುತ್ತದೆ. ಕಾಲು-ಕೈ ಸಹ ಸುಂದರವಾಗಿ ಕಾಣಿಸಬೇಕು ಎಂಬುದು ಎಲ್ಲರ ಆಲೋಚನೆಯ ಭಾಗವಾಗಿರುತ್ತೆ. ಆದ್ರೆ ನಾವು ಪೆಡಿಕ್ಯೂರ್ ಮಾಡಲು ಪಾರ್ಲರ್‌ಗೆ ತೆರಳಿದರೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗುತ್ತದೆ. ಆದರೆ ಮನೆಯಲ್ಲೇ ಪೆಡಿಕ್ಯೂರ್ ಮಾಡಿಕೊಳ್ಳುವ ಸುಲಭದ ಉಪಾಯಗಳು ಸಹ ಇವೆ.

ಆದರೆ ಮನೆಯಲ್ಲೇ ನಾವು ಪೆಡಿಕ್ಯೂರ್ ಮಾಡುವ ಸರಿಯಾದ ವಿಧಾನ ತಿಳಿದರೆ ಹಣ ವ್ಯಯಿಸದೆಯೇ ಮಾಡಿಕೊಳ್ಳಬಹುದು. ಪಾದಗಳ ಪೆಡಿಕ್ಯೂರ್ ಮಾಡಿಸುವುದರಿಂದ ಸುಂದರವಾಗಿ, ಕೋಮಲವಾಗುತ್ತವೆ. ಹಾಗೆ ನಮ್ಮ ಪಾದಗಳಲ್ಲಿ ಕ್ರ್ಯಾಕ್, ಗಾಯ ಇದ್ದರೆ ಪೆಡಿಕ್ಯೂರ್ ಮೂಲಕ ಸರಿಪಡಿಸುವ ಯತ್ನ ಮಾಡಬಹುದು. ನಿಮ್ಮ ಪಾದಗಳು ಕಪ್ಪಾಗಿದ್ದರೆ ಅಥವಾ ಮುಖದ ಬಣ್ಣಕ್ಕಿಂತಲೂ ಪಾದ ಕಪ್ಪಾಗಿದ್ದರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.

ಹೀಗಾಗಿ ಹಲವರು ಪಾರ್ಲರ್‌ಗೆ ತೆರಳಿ ಪೆಡಿಕ್ಯೂರ್ ಮಾಡಿಸಿಕೊಳ್ಳುತ್ತಾರೆ. ಈಗಂತು ಹಲವರು ಮುಖದಲ್ಲಿ ಮೇಕಪ್ ಇದೆ ಎಂಬ ಕಾರಣಕ್ಕೆ ಅವರ ಕಾಲುಗಳನ್ನು ನೋಡಿಯೇ ಅವರ ನಿಜವಾದ ಬಣ್ಣ ಗುರುತು ಹಿಡಿಯುವ ಸಾಧನವನ್ನಾಗಿ ಮಾಡಿಕೊಂಡಿರುತ್ತಾರೆ. ಏಕೆಂದರೆ ಕಾಲಿನ ಬಣ್ಣ ನಮ್ಮ ದೇಹದ ನೈಜ ಬಣ್ಣ ಎಂದು ನಂಬಲಾಗುತ್ತದೆ.

ಪೆಡಿಕ್ಯೂರ್ ಮಾಡಿದರೆ ಪಾದದ ಬಣ್ಣ ಕೂಡ ಹೊಳೆಯುತ್ತದೆ. ಮುಖದಂತೆ ಪಾದಗಳು ಕೂಡ ಸುಂದರವಾಗುತ್ತವೆ, ಹಾಗಾದ್ರೆ ಮನೆಯಲ್ಲಿ ನಾವು ಪೆಡಿಕ್ಯೂರ್ ಮಾಡಿಕೊಳ್ಳುವುದು ಹೇಗೆ? ಮನೆಯಲ್ಲಿ ಪೆಡಿಕ್ಯೂರ್ ಮಾಡಿಕೊಳ್ಳುವ ಸರಿಯಾದ ರೀತಿ ತಿಳಿದುಕೊಳ್ಳೋಣ.

ಪೆಡಿಕ್ಯೂರ್ (pedicure)ಮಾಡುವ ವಿಧಾನ :-

ಪೆಡಿಕ್ಯೂರ್ ಮಾಡುವ ಮುನ್ನ ಒಂದಿಷ್ಟು ಮುಂಜಾಗೃತೆ ತೆಗೆದುಕೊಳ್ಳಬೇಕು. ಮೊದಲು ಕಾಲನ್ನು ಚೆನ್ನಾಗಿ ತೊಳೆದುಕೊಳ್ಳಿ. ಅನಂತರ ಕಾಲಿನ ಬೆರಳಿಗೆ ಬಣ್ಣ (nail polish)ಹಚ್ಚಿದ್ದರೆ ಅದನ್ನು ನೈಲ್ ಪೇಯಿಂಟ್ ರಿಮೂವಲ್‌ನಿಂದ ತೆಗೆದುಕೊಳ್ಳಿ. ಈ ವೇಳೆ ಕಾಲಿನ ಚರ್ಮಕ್ಕೆ ರಿಮೂವರ್ ಹಿಡಿಯದಂತೆ ನೋಡಿಕೊಳ್ಳಿ. ಅನಂತರ ಒಂದು ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಕಾಲು ಅದ್ದಿ ಅದರಲ್ಲಿ ಇಟ್ಟುಕೊಳ್ಳಬೇಕು.
ಈ ನೀರಿಗೆ ಅರ್ಧ ನಿಂಬೆ, ಅಡುಗೆ ಸೋಡಾ ಹಾಕಿ 10 ನಿಮಿಷದ ವರೆಗೆ ಕಾಲನ್ನು ನೀರಿನಲ್ಲಿ ನೆನಸಿಟ್ಟುಕೊಳ್ಳಬೇಕು. ಅನಂತರ ಕಾಲನ್ನು ನೀರಿನಿಂದ ತೆಗೆದು ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಕಾಲಿಗೆ ನಿಂಬೆ ಹಾಗೂ ಅಡುಗೆ ಸೋಡಾ ಹಾಕಿ ಕಾಲಿನ್ನು ಚೆನ್ನಾಗಿ ಉಜ್ಜಿಕೊಳ್ಳಬೇಕು. ನಂತರ ಬೆಚ್ಚಗಿನ ನೀರಿನಿಂದ ಕಾಲನ್ನು ತೊಳೆದುಕೊಳ್ಳಬೇಕು. ಹೀಗಾಗಿ ನೀರಿನಲ್ಲಿ ಕಾಲು ಇಟ್ಟು ಒಂದು ಚಿಕ್ಕ ಕಲ್ಲು ಅಥವಾ ಬ್ರಷ್‌ನಿಂದ ಉಜ್ಜಿಕೊಳ್ಳಬೇಕು ನಂತರ ಬಟ್ಟೆಯಿಂದ ಕಾಲನ್ನು ಬಟ್ಟೆಯಿಂದ ಒರೆಸಿಕೊಳ್ಳಬೇಕು.

ಈಗ ಕಾಲಿಗೆ ಹಚ್ಚಲು ಮಾಡಿಕೊಂಡಿರುವ ಪೇಸ್ಟ್ ಅನ್ನು ಹಚ್ಚಿಕೊಳ್ಳಬೇಕು. ನಿಧಾನವಾಗಿ ಬೆರಳು ಸಂಧಿ, ಉಗುರು, ಹಿಮ್ಮಡಿ ಮೇಲೆ ಮಸಾಜ್ ಮಾಡಿಕೊಳ್ಳಬೇಕು. ಮಸಾಜ್ ಮಾಡಿ 10 ನಿಮಿಷ ಬಿಟ್ಟು ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಿ. ತದನಂತರ ಉಗುರುಗಳ ಸ್ವಚ್ಛ ಮಾಡಲು ನೈಲ್ ಕಟರ್‌ನಲ್ಲಿ ನೀಡುವ ಚೂಪಾದ ವಸ್ತುವಿನಿಂದ ತೆಗೆದುಬಿಡಿ. ನಂತರ ಮತ್ತೆ ಕಾಲು ತೊಳೆದುಕೊಳ್ಳಿ. ಕೊನೆಯದಾಗಿ ಕಾಲಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿದರೆ ಪೆಡಿಕ್ಯೂರ್ ಮುಗಿಯುತ್ತದೆ.

ಪೆಡಿಕ್ಯೂರ್‌ಗೆ ಪೇಸ್ಟ್ ಅನ್ನು ಮಾಡುವ ವಿಧಾನ :-

ಮೊದಲು ಒಂದು ಬೌಲ್‌ ತೆಗೆದುಕೊಂಡು ಅದಕ್ಕೆ ಲೋಳೆ ರಸ (alovera)ಹಾಕಿಕೊಳ್ಳಿ. ಹಾಗೆ ಸ್ವಲ್ಪ ಅರಶಿನ, ಮೊಸರು, ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಕ್ಸ್ (mix)ಮಾಡಿಕೊಳ್ಳಿ. ಗಟ್ಟಿಯಾದರೆ ಸ್ವಲ್ಪ ಉಗುರು ಬೆಚ್ಚಗಿನ ತೆಂಗಿನ ಎಣ್ಣೆ ಕಾಯಿಸಿ ಹಾಕಿಕೊಳ್ಳಿ. ಇದನ್ನು ಚೆನ್ನಾಗಿ ಕಲಸಿಕೊಂಡರೆ ಪೇಸ್ಟ್ ರೆಡಿಯಾಗುತ್ತದೆ.

Leave a Reply