ವಿಶ್ವದಾದ್ಯಂತ ಚಿತ್ರ-ವಿಚಿತ್ರ ಪದ್ಧತಿ, ಸಂಪ್ರದಾಯಗಳು ಜಾರಿಯಲ್ಲಿವೆ. ಕೆಲ ಪದ್ಧತಿಗಳು ಆಶ್ಚರ್ಯ ಹುಟ್ಟಿಸಿದ್ರೆ ಮತ್ತೆ ಕೆಲ ಪದ್ಧತಿಗಳು ದಂಗಾಗಿಸುತ್ತವೆ. ಭಯ ಹುಟ್ಟಿಸುವಂತಹ ಪದ್ಧತಿಯೊಂದು ವಿಶ್ವದ ಅನೇಕ ಕಡೆಗಳಲ್ಲಿದೆ. ಆಶ್ಚರ್ಯವೆಂದ್ರೆ ಭಾರತದ ಅನೇಕ ಕಡೆಯೂ ಮಹಿಳೆಯರ ಜನನಾಂಗ ಕತ್ತರಿಸುವ ಪದ್ಧತಿಯಿದೆ.
ಮಹಿಳೆಯರು ಮದುವೆ ನಂತ್ರ ಗಂಡನಿಗೆ ನಿಷ್ಠೆಯಿಂದ ಇರ್ತಾಳೆ. ಮನೆಯಿಂದ ಹೊರಗೆ ಹೋಗಲ್ಲ ಎಂದು ನಂಬಲಾಗಿದೆ. ರೇಸರ್ ಬ್ಲೇಡ್ ನಿಂದ ಮಹಿಳೆ ಜನನಾಂಗ ಕತ್ತರಿಸುವ ಪದ್ಧತಿ ಈಗ್ಲೂ ಚಾಲ್ತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದ್ರಿಂದ ನಾಲ್ಕು ರೀತಿಯ ಅಪಾಯ ಕಾಡುವ ಸಾಧ್ಯತೆಯಿರುತ್ತದೆ.
ರೇಸರ್ ಬ್ಲೇಡ್ ಬಳಸಿ ಈ ಕೆಲಸ ಮಾಡುವುದ್ರಿಂದ ಜನನಾಂಗ ಪೂರ್ತಿ ಕತ್ತರಿಸುವ ಸಾಧ್ಯತೆಯಿರುತ್ತದೆ. ಸ್ವಲ್ಪ ಕತ್ತರಿಸುವುದು, ಯೋನಿ ಹೊಲಿಗೆ ಹಾಗೂ ಚುಚ್ಚುವಿಕೆ ತೀವ್ರ ನೋವನ್ನುಂಟು ಮಾಡುತ್ತದೆ. ಕೆಲ ಯುವತಿಯರು ಸೋಂಕಿಗೊಳಗಾಗಿ ಜೀವನವನ್ನು ಅಪಾಯಕ್ಕೆ ದೂಡುತ್ತಾರೆ.
ವಿಶ್ವದ ಅನೇಕ ಕಡೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಬಹುತೇಕ ಭಾಗಗಳಲ್ಲಿ ಜನನಾಂಗ ಕತ್ತರಿಸುವ ಪದ್ಧತಿಗೆ ಬ್ರೇಕ್ ಬಿದ್ದಿದೆ. ಭಾರತದ ದಾವೂದಿ ಬೋಹ್ರಾ (dawoodi bohra) ಜನಾಂಗದ ಮಹಿಳೆಯರು ಈ ಪದ್ಧತಿಗೆ ಕಡಿವಾಣ ಹಾಕುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಈ ಪದ್ಧತಿಗೆ ಯಾವುದೇ ಕಾನೂನಿಲ್ಲ. ದಾವೂದಿ ಬೋಹ್ರಾ (dawoodi bohra) ಜನಾಂಗದಲ್ಲಿ ಈಗ್ಲೂ ಈ ಪದ್ಧತಿ ಜಾರಿಯಲ್ಲಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ