Annabhagya Scheme : ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೂ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಈಗಾಗಲೇ ಐದು ಕೆಜಿ ಪಡಿತರ ಅಕ್ಕಿಯ ಬದಲಾಗಿ ಹಣವನ್ನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ(Direct Benefit Transfer) ಮೂಲಕ ನೇರ ವರ್ಗಾವಣೆ ಮಾಡಲಾಗುತ್ತಿದೆ. ಆದರೂ ಫೆಬ್ರವರಿ ತಿಂಗಳಿನ ಹಣ ಇನ್ನು ಕೂಡ ರಾಜ್ಯದ ಸಾಕಷ್ಟು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಣೆಯಾಗಿಲ್ಲ. ಆದರೆ ಈ ಒಂದು ಕೆಲಸ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಪಡೆದುಕೊಳ್ಳಬಹುದಾಗಿದೆ.
ನೀವು ಕೂಡ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದ್ದರೆ, ನಿಮಗೂ ಕೂಡ ನಿಮ್ಮ ಖಾತೆಗೆ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ.? ಅಥವಾ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನವನ್ನ ಕೊನೆಯವರೆಗೂ ನೋಡಿ.
ಇದನ್ನೂ ಕೂಡ ಓದಿ : Solar Pumpset : ಉಚಿತ ಸೋಲಾರ್ ಪಂಪ್ ಸೆಟ್.! 1.5 ಲಕ್ಷ ಸಬ್ಸಿಡಿ : ಮೊಬೈಲ್ ನಲ್ಲಿಯೇ ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಸಲ್ಲಿಸಿ.!
ಅನ್ನಭಾಗ್ಯ ಯೋಜನೆಯ(Annabhagya Scheme) ಹಣವು ಇನ್ನು ಕೂಡ ಬ್ಯಾಂಕ್ ಖಾತೆಗೆ ಜಮಾ ಆಗದವರು ಈ ಕೆಲಸ ಮಾಡಿ ಸಾಕು. ಖಂಡಿತ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಐದು ಕೆಜಿ ಅಕ್ಕಿ ಬದಲಾಗಿ ಹಣ ಹಾಕಲಾಗುತ್ತಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೇ? ಹಾಗಾದ್ರೆ ಎಷ್ಟು ಹಣ ಜಮೆಯಾಗಿದೆ? ಯಾರ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂಬ ಇತ್ಯಾದಿ ಮಾಹಿತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಆಹಾರ ಇಲಾಖೆಯು ವೆಬ್ ಸೈಟ್ ಲಿಂಕ್ ಬಿಡುಗಡೆ ಮಾಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮಾವಣೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತು. ನಿಮ್ಮ ಮೊಬೈಲ್ ಫೋನ್ನಲ್ಲಿಗೆ ರೇಷನ್ ಕಾರ್ಡ್ ಸ್ಟೇಟಸ್ ಅನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ನೇರ ವರ್ಗಾವಣೆ ಅಂದರೆ ಡಿಬಿಟಿ(Direct Benefit Transfer) ಮೂಲಕ ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿಯ ಹಣವನ್ನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಹಣವನ್ನ ಫಲಾನುಭವಿಯ ಆಧಾರ್ ಸಂಖ್ಯೆ ಲಿಂಕ್ ಮಾಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ(Direct Benefit Transfer) ಮೂಲಕ ವರ್ಗಾಯಿಸಲಾಗುತ್ತದೆ.
ಇದನ್ನೂ ಕೂಡ ಓದಿ : BPL APL AAY : ರೇಷನ್ ಕಾರ್ಡ್ ವಿತರಣೆ – ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಆರಂಭ.!
ನಿಮ್ಮ ಅನ್ನಭಾಗ್ಯ ಯೋಜನೆಯ(Annabhagya Scheme) ಹಣವು ಬ್ಯಾಂಕ್ ಖಾತೆಗೆ ಜಮೆ ಆಗಿದೆಯಾ ಅನ್ನುವುದನ್ನು ಆನ್ಲೈನ್ನಲ್ಲಿಯೇ ಪರಿಶೀಲಿಸಬಹುದು. ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ಕೆಜಿಗೆ ₹34 ರೂಪಾಯಿನಂತೆ ಐದು ಕೆಜಿಗೆ ₹170 ಹಣ ನೀಡಲಾಗುತ್ತಿದೆ. ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದವರು ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ಬದಲಾಗಿ ಅನ್ನಭಾಗ್ಯ ಯೋಜನೆಯ(Annabhagya Scheme) ಹಣವು ಡಿಬಿಟಿ ಮೂಲಕ ಜಮಾವಣೆಯಾಗುತ್ತದೆ. ಅದರಂತೆಗೆ ಪ್ರತಿತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರ ಹಣ ಜಮಾವಣೆ ಮಾಡುತ್ತಿದೆ.
ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ(Annabhagya Scheme) ಹಣವು ಜನವರಿ ತಿಂಗಳಲ್ಲಿ ಹಾಗು ಜನವರಿ ತಿಂಗಳ ಹಣ ಫೆಬ್ರವರಿಯಲ್ಲಿ ಹೀಗೆ ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಹಣವು ಬ್ಯಾಂಕ್ ಖಾತೆಗೆ ಜಮಾ ಆಗದವರಿಗೆ 15 ದಿನಗಳ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ತಲುಪಲಿದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.
ಈ ವೆಬ್ ಸೈಟ್ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..