ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ನಟಿಯರ ಸಂಭಾವನೆ ಅಷ್ಟೊಂದಿಲ್ಲ, ಆದರೂ ಬರುವ ದುಡ್ಡನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಂಡು ಕೋಟ್ಯಾಧೀಶರಾಗಿರುವ ಕನ್ನಡದ ನಟಿಯರು ಇವರು, ಕೆಲವೊಂದು ಮೂಲಗಳಿಂದ ಸಿಕ್ಕ ಮಾಹಿತಿಯ ಪ್ರಕಾರ ಕೆಳಗೆ ಲಿಸ್ಟ್ ಮಾಡಲಾಗಿದೆ.
7. ಪ್ರಣೀತ ಸುಭಾಷ್ – ಕನ್ನಡ ಸೇರಿ ತೆಲುಗಿನಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿರುವ ಈ ನಟಿ, ಒಂದು ಚಿತ್ರಕ್ಕೆ 50 ರಿಂದ 60 ಲಕ್ಷ ಸಂಭಾವನೆ ಪಡೆಯುತ್ತಾರೆ, ಹಾಗೆ ಸುಮಾರು 15 -20 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.
6.ಪ್ರಿಯಾಮಣಿ – ಮೂರು ಭಾಷೆಗಳಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ. ಒಂದು ಚಿತ್ರಕ್ಕೆ 80 ರಿಂದ 90 ಲಕ್ಷ ಸಂಭಾವನೆ ಪಡೆಯುತ್ತಿದ್ದರು. ಮಾಲ್ ಗಳಲ್ಲಿ ಹಾಗು ಶೇರ್ ಗಳಲ್ಲಿ ಇನ್ವೆಸ್ಟ್ ಮಾಡಿರುವ ಪ್ರಿಯಾಮಣಿ 20 – 25 ಕೋಟಿ ವ್ಯವಹಾರ ಹೊಂದಿದ್ದಾರೆ.
5. ಶರ್ಮಿಳಾ ಮಾಂಡ್ರೆ – ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ನಟಿಸಿರುವ ಈ ನಟಿ ಕಡಿಮೆ ಚಿತ್ರಗಳಲ್ಲಿ ನಟಿಸಿದ್ದರೂ ಸಹ ವಂಶಪಾರಂಪರ್ಯದಿಂದ ಬಂದ ಆಸ್ತಿಯ ಜೊತೆ ತಾನು ಸಂಪಾದಿಸಿ, ಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, 20 – 25 ಕೋಟಿ ವ್ಯವಹಾರ ಹೊಂದಿದ್ದಾರೆ.
4. ರಾಗಿಣಿ ದ್ವಿವೇದಿ – ಬಾಲಿವುಡ್ ನಿಂದ ಹಿಡಿದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿರುವ ಈ ನಟಿ ಒಂದು ಚಿತ್ರಕ್ಕೆ 50 ರಿಂದ 70 ಲಕ್ಷ ಪಡೆಯುತ್ತಾರೆ, ದುಬಾರಿ ಮನೆ ಹಾಗೂ ವ್ಯಾಪಾರದಲ್ಲೂ ಹಣ ತೊಡಗಿಸಿಕೊಂಡಿದ್ದು ಸುಮಾರು 20 – 30 ಕೋಟಿ ವ್ಯವಹಾರ ಹೊಂದಿದ್ದಾರೆ.
3. ಪೂಜಾ ಗಾಂದಿ – ಸಿನಿಮಾ ಮತ್ತು ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಈ ನಟಿ ಸ್ವಂತ ಚಿತ್ರ ನಿರ್ಮಾಣದ ಸಂಸ್ಥೆಯನ್ನು ಹೊಂದಿದ್ದು 30 – 35 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.
2. ದೀಪ ಸನ್ನಿಧಿ – ಹುಟ್ಟು ಶ್ರೀಮಂತದ ಹುಡುಗಿ, ಸಿನಿಮಾ ಇವರ ಇಷ್ಟದ ರಂಗ ಅಷ್ಟೇ, ಕಾಫಿ ಎಸ್ಟೇಟ್, ಹೋಟೆಲ್ ಬ್ಯುಸಿ ನೆಸ್ ಪಾಲು ಹೊಂದಿರುವ ಈ ನಟಿಯ ವ್ಯವಹಾರ ಸುಮಾರು 40 – 60 ಕೋಟಿ.
1. ರಮ್ಯಾ – ಕನ್ನಡ ಸೇರಿ ಇತರ ಭಾಷೆಗಳಲ್ಲೂ ಸುಮಾರು ಚಿತ್ರಗಳಲ್ಲಿ ನಟಿಸಿ ನಂತರ ಒಂದು ಬಾರಿ MP ಆಗಿದ್ದ ನಟಿ ರಮ್ಯಾ, ಸಿನಿಮಾ ಮತ್ತು ವ್ಯಾಪಾರದಲ್ಲಿ ಹಣ ತೊಡಗಿಸಿದ್ದು ಇವರು 50 – 70 ಕೋಟಿ ವ್ಯವಹಾರ ಹೊಂದಿದ್ದಾರೆ.