ಸಾಗರಿಕಾಗೆ ಕ್ಲೀನ್ ಬೋಲ್ಡ್ ಆಗಿದ್ದ ಜಹೀರ್ ಮದುವೆಗೆ ಒಪ್ಪಿಸಿದ್ಹೇಗೆ? – ಕ್ರಿಕೆಟ್ ನ್ಯೂಸ್

 

ಜಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಗೆ ವಿವಾಹ ಕೂಡ ಸಾಕಷ್ಟು ಸುದ್ದಿಯಾಗಿತ್ತು. ಇತ್ತೀಚೆಗಷ್ಟೆ ತಮ್ಮ ಲವ್ ಸ್ಟೋರಿ ಬಗ್ಗೆ ಸಾಗರಿಕಾ ಹಾಗೂ ಜಹೀರ್ ಹೇಳಿಕೊಂಡಿದ್ದಾರೆ. ಮೊದಲು ಲವ್ವಲ್ಲಿ ಬಿದ್ದವರು ಜಹೀರ್ ಖಾನ್, ತಾವೇ ಸರಿಯಾದ ಜೋಡಿ ಅನ್ನೋದನ್ನು ಸಾಗರಿಕಾಗೆ ಮನವರಿಕೆ ಮಾಡಲು ಸಾಕಷ್ಟು ಕಸರತ್ತು ಕೂಡ ಮಾಡಿದ್ದಾರಂತೆ.

ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಜಹೀರ್ ಖಾನ್, ಸಾಗರಿಕಾಗೆ ಪ್ರಪೋಸ್ ಮಾಡಿದ ಬಳಿಕ ಜಾಲತಾಣಗಳಲ್ಲಿ ಇವರ ಪ್ರೀತಿ ವಿಷಯ ಜಗಜ್ಜಾಹೀರಾಗಿತ್ತು. ಇಬ್ಬರ ಕುಟುಂಬದಲ್ಲೂ ಸಮ್ಮತಿ ಇದ್ದಿದ್ರಿಂದ ಮದುವೆಗೆ ಯಾವುದೇ ಅಡ್ಡಿಯಾಗಿರಲಿಲ್ಲ.

ಆದ್ರೂ ಇಬ್ಬರಲ್ಲೂ ಸಾಕಷ್ಟು ಒತ್ತಡವಿತ್ತು ಎನ್ನುತ್ತಾರೆ ಜಹೀರ್-ಸಾಗರಿಕಾ ದಂಪತಿ. ಜಹೀರ್ ಕುಟುಂಬದವರ ಜೊತೆ ಸಾಗರಿಕಾಗೆ ಮೊದಲ ಭೇಟಿಯಲ್ಲಿ ಉತ್ತಮ ಒಡನಾಟ ಏರ್ಪಟ್ಟಿತ್ತಂತೆ. ಅಸಲಿಗೆ ಜಹೀರ್ ಖಾನ್ ರನ್ನು ಟೀಂ ಇಂಡಿಯಾದ ಲವ್ ಗುರು ಎಂದೇ ಕರೆಯಲಾಗುತ್ತಿತ್ತು.

ಅನುಷ್ಕಾ ಜೊತೆ ಲವ್ವಲ್ಲಿ ಬಿದ್ದಿದ್ದ ವಿರಾಟ್ ಕೊಹ್ಲಿಗೂ ಜಹೀರ್ ಟಿಪ್ಸ್ ಕೊಟ್ಟಿದ್ದರಂತೆ. ಹಾಗಾಗಿ ನಮ್ಮಿಬ್ಬರ ಸಂಬಂಧ ಇನ್ನಷ್ಟು ಸುಧಾರಿಸಲು ಸಾಧ್ಯವಾಯ್ತು ಅಂತಾ ಖುದ್ದು ಕೊಹ್ಲಿ ಹೇಳಿದ್ದರು. ಜಹೀರ್ ಖಾನ್ ಮದುವೆಗೆ ಸಹ ವಿರುಷ್ಕಾ ಜೊತೆಯಾಗಿಯೇ ಬಂದಿದ್ದರು.

Leave a Reply