ನಾಗಾರ್ಜುನ ಪುತ್ರನ ಜತೆಗೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?


ಹೈದರಾಬಾದ್: ರಶ್ಮಿಕಾ ಮಂದಣ್ಣ ಒಂದಾದ ಮೇಲೊಂದರಂತೆ ಚಿತ್ರ ಒಪ್ಪಿಕೊಳ್ಳುತ್ತಾ ತೆಲುಗಿನಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದಾರೆ. ಇದೀಗ ರಶ್ಮಿಕಾ ಮತ್ತೊಂದು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ. ಆದರೆ ಇದಿನ್ನೂ ಕನ್ ಫರ್ಮ್ ಆಗಿಲ್ಲ.
ಮೂಲಗಳ ಪ್ರಕಾರ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಸಿನಿಮಾಗೆ ರಶ್ಮಿಕಾ ನಾಯಕಿಯಾಗುತ್ತಿದ್ದಾರಂತೆ. ಬೊಮ್ಮರಿಲು ಭಾಸ್ಕರ್ ಅವರ ಇನ್ನೂ ಹೆಸರಿಡದ ಸಿನಿಮಾಗೆ ಅಖಿಲ್ ಅಕ್ಕಿನೇನಿಗೆ ನಾಯಕಿ ಪಾತ್ರಕ್ಕಾಗಿ ಹುಡುಕಾಟ ನಡೆದಿದೆಯಂತೆ.
ಈ ಪಾತ್ರಕ್ಕೆ ಈಗ ರಶ್ಮಿಕಾ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ ರಶ್ಮಿಕಾ ಈಗಾಗಲೇ ಮಹೇಶ್ ಬಾಬು ಜತೆ ಸರಿಲೇರು ನೀಕೆವ್ವರು, ನಿತಿನ್ ಜತೆ ಇನ್ನೊಂದು ಸಿನಿಮಾ, ತಮಿಳಿನಲ್ಲಿ ಕಾರ್ತಿ ಜತೆ ಮತ್ತೊಂದು ಸಿನಿಮಾ ಒಪ್ಪಿಕೊಂಡು ಬ್ಯುಸಿಯಾಗಿದ್ದಾರೆ. ಈ ನಡುವೆ ಈ ಹೊಸ ಸಿನಿಮಾವನ್ನೂ ಒಪ್ಪಿಕೊಳ್ಳುತ್ತಾರಾ ಕಾದುನೋಡಬೇಕಿದೆ.

Leave a Reply