ಮುಂಬೈನಲ್ಲಿ ಪ್ರಾಧ್ಯಾಪಕನೊಬ್ಬನ ಹೇಯ ಕೃತ್ಯ ಬಹಿರಂಗವಾಗಿದೆ. ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಮುತ್ತು ನೀಡುವಂತೆ ಕೇಳಿದ್ದಾನೆ. ಪೊಲೀಸರು 35 ವರ್ಷದ ಪ್ರಾಧ್ಯಾಪಕನನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.
ಪರೀಕ್ಷೆಯಲ್ಲಿ ಹೆಚ್ಚು ಅಂಕ ನೀಡಬೇಕಾದ್ರೆ ಮುತ್ತು ಕೊಡು ಎಂದು ಪ್ರಾಧ್ಯಾಪಕ 17 ವರ್ಷದ ವಿದ್ಯಾರ್ಥಿನಿಗೆ ಕೇಳಿದ್ದ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಹೆಚ್ಚು ಅಂಕ ಬೇಕಾದಲ್ಲಿ ಕಿಸ್ ಕೊಡು ಎಂದಿದ್ದನಂತೆ. ಇದ್ರಿಂದ ವಿದ್ಯಾರ್ಥಿನಿ ಒತ್ತಡಕ್ಕೊಳಗಾಗಿದ್ದಳಂತೆ. ಮಗಳ ವರ್ತನೆ ನೋಡಿ ಆತಂಕಕ್ಕೊಳಗಾದ ಕುಟುಂಬಸ್ಥರು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ವಿದ್ಯಾರ್ಥಿನಿ ತನ್ನ ನೋವನ್ನು ಪಾಲಕರ ಮುಂದೆ ಹೇಳಿದ್ದಾಳೆ. ಮಗಳ ಮಾತು ಕೇಳಿ ಕಂಗಾಲಾದ ಪಾಲಕರು ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಮಾರ್ಚ್ 8ರಂದು ನಡೆದಿದೆ. ಶನಿವಾರ ಪೊಲೀಸರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.