ಎಷ್ಟು ದೊಡ್ಡ ಸ್ಟಾರ್ಸ್ ಆದರೂ ಅವರೂ ಮನುಷ್ಯರೇ ಅಲ್ಲವೇ, ಅದಕ್ಕೇ ಅನಿಸುತ್ತೆ ಅವರವರ ಮದ್ಯೇನೆ ಜಗಳ, ಅವಮಾನಗಳು ನಡೆಯುವುದು, ಈ ಒಂದು ಅವಮಾನ ನಡೆದದ್ದು ಸೌತ್ ಇಂಡಸ್ಟ್ರಿ ಟಾಪ್ ನಟಿ ಶ್ರೇಯಾಗೆ, ತುಂಬಾ ದೊಡ್ಡ ಅವಮಾನಾನೇ ನಡೆಯಿತು ಆಕೆಗೆ.
Mr. ನೂಕಯ್ಯ ತೆಲುಗು ಚಿತ್ರಕ್ಕೆ ಮೊದಲು ನಟಿಯಾಗಿ ಶ್ರೇಯಾ ಆಯ್ಕೆಯಾಗಿದ್ದರು. ಈ ಚಿತ್ರಕ್ಕೆ 40 ಲಕ್ಷ ಸಂಭಾವನೆ ಪಡೆದ ಶ್ರೇಯಾ, ನಿರ್ಮಾಪಕರಿಗೆ ಒಂದು ಕಂಡೀಷನ್ ಇಟ್ಟಿದ್ದರು. ಅದೇನಂದ್ರೆ, ಚಿತ್ರದಲ್ಲಿ ನನ್ನ ಕಾಸ್ಟ್ಯೂಮ್ಸ್ ನಾನೇ ಖರೀದಿ ಮಾಡುತ್ತೇನೆ ಎಂದು..
ದೊಡ್ಡ ನಟಿಯಾಗಿದ್ದರಿಂದ ನಿರ್ಮಾಪಕರೂ ಓಕೆ ಅಂದರು, ಈ ಚಿತ್ರದ ನಾಯಕ ಮಂಚು ಮನೋಜ್ ಪ್ರೊಡಕ್ಷನ್ ನಲ್ಲೂ ತಲೆ ಹಾಕಿ ಎಲ್ಲಾ ಜವಾಬ್ದಾರಿಯನ್ನು ತಾನೇ ನೋಡಿಕೊಳ್ಳುತ್ತಿದ್ದರು, ಕೊನೆಗೆ ಚಿತ್ರದ ಶೂಟಿಂಗ್ ಶುರುವಾಯಿತು.
ನಟಿ ಶ್ರೇಯಾ ಕಾಸ್ಟ್ಯೂಮ್ಸ್ ನ್ನು ಡೆಲ್ಲಿಯಿಂದ ಖರೀದಿ ಮಾಡಿ ತಂದರು, ಶ್ರೇಯಾ ತಂದ ಕಾಸ್ಟ್ಯೂಮ್ ರೇಟ್ ಕೇಳಿ ಚಿತ್ರತಂಡ ಶಾಕ್, ಒಂದೊಂದು ಸಲ್ವಾರ್ ದರ 30 ಸಾವಿರ, ಆದ್ರೆ, ಅವೆಲ್ಲಾ ಕಾಟನ್ ಬಟ್ಟೆ, ನೋಡಕ್ಕೆ ಎಲ್ಲೋ ಫುಟ್ ಪಾತ್ ನಲ್ಲಿ ಖರೀದಿ ಮಾಡಿದಂಗೆ ಇತ್ತು.
ನಮ್ಮ ತಾಯಿ ನಿಂತು ಡಿಸೈನ್ ಮಾಡಿಸಿದ್ದು ಎಂದು ಹೇಳಿ ದೊಡ್ಡ ಮೊತ್ತದ ಬಿಲ್ ಹಾಕಿದಳು ಶ್ರೇಯಾ, ‘ರೋಡ್ ಮೇಲೆ ಖರೀದಿ ಮಾಡಿಕೊಂಡು ಬಂದ ಬಟ್ಟೆಯನ್ನು ತೋರಿಸಿ ಲಕ್ಷಗಟ್ಟಲೆ ಬೆಲೆ ತೋರಿಸಿದರೆ ಹಣ ಕೊಡಕ್ಕೆ ನಾನೇನು ಹುಚ್ಚಾನಾ ಎಂದರು ಮನೋಜ್.
ಅಷ್ಟೇ ಅಲ್ಲದೇ, ಶ್ರೇಯಾ ಮತ್ತು ಆಕೆಯ ಸಿಬ್ಬಂದಿಯನ್ನು ಸುಳ್ಳು ಹೇಳುವ ಕಳ್ಳರಂತೆ ನೋಡಿದರು ನಾಯಕ ಮತ್ತು ಪ್ರೊಡಕ್ಷನ್ ಸಿಬ್ಬಂದಿ, ಈ ವಿಷಯಕ್ಕೆ ತುಂಬಾ ನೋವು ಮಾಡಿಕೊಂಡ ಶ್ರೇಯಾ, ‘ಸುಳ್ಳು ಲೆಕ್ಕಗಳನ್ನು ತೋರಿಸುವಂತಹ ಸ್ಥಿತಿ ನನಗೆ ಬಂದಿಲ್ಲ’ ಎಂದು ಮನೋಜ್ ಜೋತ್ ಜಗಳಕ್ಕೆ ಇಳಿದಳು.
ಇಬ್ಬರ ಮದ್ಯೆ ದೊಡ್ಡ ಜಗಳವೇ ನಡೆಯಿತು, ಕೊನೆಗೆ ತಾನು ತೆಗೆದುಕೊಂಡಿದ್ದ ಅಡ್ವಾನ್ಸ್ ವಾಪಾಸ್ ಕೊಟ್ಟ ಶ್ರೇಯಾ, ಚಿತ್ರದಲ್ಲಿ ನಾನು ನಟಿಸಲ್ಲ ಎಂದು ಹೇಳಿ ಈ ವಿಷಯವಾಗಿ ಫಿಲಂ ಚೇಂಬರ್ ನಲ್ಲಿ ಕೇಸ್ ಹಾಕಿದರು, ಆದ್ರೆ ಅದರಿಂದ ಏನು ಪ್ರಯೋಜನ ಆಗಲಿಲ್ಲ.