ಪ್ರೇಮಿಗಳ ದಿನದಂದು ಪ್ರಿಯತಮ ತನ್ನ ಪ್ರಿಯತಮೆಗೆ ಹೂ, ರಿಂಗ್, ವಾಚು, ಮೊಬೈಲ್ ಗಿಫ್ಟ್ ಕೊಡುವುದನ್ನು ನೋಡಿರುತ್ತಿರಿ. ಆದರೆ ಇಲ್ಲೊಬ್ಬ ತನ್ನ ಪ್ರಿಯತಮಗೆ ಪ್ರೇಮಿಗಳ ದಿನದಂದು ಒಳುಡುಪನ್ನು ಉಡುಗೊರೆಯಾಗಿ ನೀಡಿದ್ದಾನೆ.
ಪ್ರಿಯತಮ ಕೊಟ್ಟ ಒಳುಡುಪನ್ನು ತೊಟ್ಟು ವಿಡಿಯೋ ಮಾಡಿ ಪ್ರಿಯತಮೆ ಕಳುಹಿಸಿಕೊಟ್ಟಿದ್ದಾಳೆ. ಅದೇ ಈಗ ಅವಳ ಪಾಲಿಗೆ ಮುಳುವಾಗಿದೆ. ಪ್ರಿಯಕರನ ಒತ್ತಾಯಕ್ಕೆ ಮಣಿದು ಒಳಉಡುಪು ತೊಟ್ಟು ವಿಡಿಯೋ ಮಾಡಿ ಕಳುಹಿಸಿಕೊಟ್ಟಿದ್ದಾಳೆ ಪ್ರಿಯತಮೆ.
ಆದರೆ ಆ ಪ್ರಿಯಕರ ವಿಡಿಯೋವನ್ನು ಇಟ್ಟುಕೊಂಡು ಪ್ರಿಯತಮೆ ಪೋಷಕರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೇ ಇದ್ದರೆ ನಿಮ್ಮ ಮಗಳ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಯುವತಿ ಪೋಷಕರು ಸೈಬರ್ ಪೊಲೀಸಿನವರಿಗೆ ದೂರು ನೀಡಿದ್ದಾರೆ.