ಸ್ಯಾಂಡಲ್ವುಡ್ ನಲ್ಲಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರ ಪೈಕಿ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಕೂಡ ಒಬ್ಬರು. ಆದರೆ ಇದೀಗ ತಮಗೆ ಸಂಬಂಧಪಡದ ವಿಷಯದ ಬಗ್ಗೆ ಮಾತನಾಡಿ ಜಾದಿಸಿಕೊಂಡಿದ್ದಾರೆ.
ಹಿಂದೂ ಸಂಘಟನೆ ಮುಖ್ಯಸ್ಥ ಪ್ರವೀಣ್ ತೊಗಾಡಿಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿ, ನಂತರ ತನ್ನನ್ನು ಎನ್ ಕೌಂಟರ್ ಮಾಡಲು ಯೋಜನೆ ನಡೆದಿತ್ತು ಎಂದು ಆರೋಪಿಸಿದ್ದರು. ಇದರ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡ ಪ್ರಥಮ್ ಬಿಜೆಪಿ ಪರ ಮಾತನಾಡಿದ್ದಾರೆ.
ಪ್ರವೀಣ್ ತೊಗಾಡಿಯ ಈ ರೀತಿ ವಿನಾಕಾರಣ ಪ್ರಧಾನಿ ಮೋದಿ ವಿರುದ್ದ ಆರೋಪ ಮಾಡಿದರೆ ಕರ್ನಾಟಕದಲ್ಲಿ ಹಿಂದೂಗಳ ಮತ ವಿಭಜನೆಯಾಗುತ್ತದೆ ಎಂದು ಪ್ರಥಮ್ ಬರೆದುಕೊಂಡಿದ್ದಾರೆ. ಇದರ ಬಗ್ಗೆ ಕೆಲವರು ಕಾಮೆಂಟ್ ಮಾಡಿದ್ದು, ನಿಮಗೆ ಯಾಕೆ ಬೇಕು ಇಲ್ಲದ ಉಸಾಬರಿ ಎಂದು ಪ್ರಶ್ನಿಸಿದ್ದಾರೆ. ಈಗ ನಿಮ್ಮ ಬೆಂಬಲ ಯಾರಿಗೆ ಎನ್ನುವುದು ಸ್ಪಷ್ಟವಾಯಿತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಿಜೆಪಿಗೆ ಬಕೆಟ್ ಹಿಡಿಯುತ್ತಿರುವುದರ ಹಿಂದಿನ ಉದ್ದೇಶವೇನು ಎಂದು ಜಾಡಿಸಿದ್ದಾರೆ. ಅಲ್ಲದೇ ನಿಮಗೆ ಎಲ್ಲಾ ಪಕ್ಷದಲ್ಲೂ ಫಾಲೋ ವರ್ಸ್ ಇದ್ದು ನಿಮಗೆ ಯಾಕೆ ಬೇಕು ರಾಜಕೀಯ ಎಂದು ಪ್ರಶ್ನಿಸಿದ್ದಾರೆ.