ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಜನರಲ್ಲಿ ಮನವಿವೊಂದನ್ನು ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರು ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜನರಿಗೆ ಕೆಲವು ಸಂದೇಶಗಳನ್ನು ನೀಡಿದ್ದಾರೆ.’ ಮುಂಬರುವ ಚುನಾವಣೆಯಲ್ಲಿ ಯುವಕರು ಹೆಚ್ಚು ಭಾಗವಹಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಒಂದು ಉತ್ತಮ ಸಮಾಜ ಮತ್ತು ಉತ್ತಮ ದೇಶವನ್ನ ಕಟ್ಟಲು ಮತದಾನ ತುಂಬ ಅವಶ್ಯಕ.
ಭ್ರಷ್ಟಚಾರವನ್ನು ತಡೆಗಟ್ಟಲು ಮತ್ತು ಒಬ್ಬ ಉತ್ತಮ ನಾಯಕನನ್ನ ಉಳಿಸಿಕೊಳ್ಳಲು ನಿಮ್ಮ ಮತ ಅತ್ಯಮೂಲ್ಯ. ಆದ್ದರಿಂದ ಮತದಾನ ಮಾಡಿ, ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳಿ.18 ವರ್ಷ ಆಗುತ್ತಿದ್ದಂತೆ ನೀವು ಮತದಾನ ಮಾಡಲು ಅರ್ಹರು. ಯಾರ ಬಳಿ ವೋಟ್ ಐಡಿ ಕಾರ್ಡ್ ಇಲ್ಲವೋ, ಅವರ ಬೇಗ ವೋಟ್ ಐಡಿ ಕಾರ್ಡ್ ಮಾಡಿಸಿಕೊಳ್ಳಿರಿ’ ಎಂದು ತಿಳಿಸಿದ್ದಾರೆ.