ಗಾಳಿಪಟ – 1 ಹಿಟ್ ಸಿನಿಮಾ ಆಗಿ ಕೂಡ ಕಂಡು ಬಂದಿತ್ತು. ಅಷ್ಟೇ ಅಲ್ಲ ಗಾಳಿಪಟ ಕೋಟಿ ಸಂಭಾವನೆಯನ್ನು ಪಡೆದು ಹಿಟ್ ಕಂಡಿತ್ತು. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ನೋಡುವುದೆಂದರೆ ಕಣ್ಣಿಗೆ ಹಬ್ಬವೇ ಸರಿ. ಮುಂಗಾರು ಮಳೆ, ಗಾಳಿಪಟದಂತಹ ಹಿಟ್ ಸಿನಿಮಾಗಳನ್ನು ನೋಡುಗರಿಗೆ ಅರ್ಪಿಸಿ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ
ಸದ್ಯ ಇದೀಗ ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ನಮ್ಮ ಯೋಗರಾಜ್ ಭಟ್. ಗಾಳಿಪಟ 2 ಸಿನಿಮಾ ಬೆಳ್ಳಿ ತೆರೆಯ ಮೇಲೆ ರಂಗೇರಿಸಲು ಸದ್ಯ ರೆಡಿಯಾಗಿದ್ದು, ಇತ್ತೀಚಿಗಷ್ಟೇ ಗಾಳಿಪಟ 2 ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತ್ತು. ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಅಭಿಮಾನಿಗಳಿಗೆ ಇದು ಸಂತಸದ ಸುದ್ಧಿಯಾಗಿತ್ತು. ಗಾಳಿಪಟ 2 ಸಿನಿಮಾದ ಟ್ರೈಲರ್ ಲಾಂಚ್ ಆಗಿ ಭರ್ಜರಿ ಯಶಸ್ಸು ಕಂಡಿದೆ.
ಗಾಳಿಪಟ, ಮುಂಗಾರು ಮಳೆಯ ಯಶಸ್ಸಿನ ನಂತರ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸಿದ ಮೊದಲ ಚಿತ್ರ. ಚಿತ್ರದ ಭಾರೀ ತಾರಾಗಣದಿಂದಾಗಿ ಸಿನೆಮಾವು ನಿರ್ಮಾಣ ಹಂತದಲ್ಲೇ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿತ್ತು. ಮುಂಗಾರು ಮಳೆ ಖ್ಯಾತಿಯ ಗಣೇಶ್, ದಿಗಂತ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಜೊತೆ ಮುಖ್ಯ ಪಾತ್ರದಲ್ಲಿ ಡೇಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ಜೊತೆ ಈ ಚಿತ್ರದಲ್ಲಿ ನಟಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗು ವಿಕಟ ಕವಿ ಯೋಗರಾಜ್ ಭಟ್ ಅವರ ಗಾಳಿಪಟ 2 ಗೆ ಯೋಗ ಕೂಡಿ ಬಂದಿದೆ. ರಿಲೀಸ್ ಗೂ ಮೊದಲೇ ಭಟ್ರು – ಗಣಿ ಕಾಂಬಿನೇಷನ್ ಗೆ ಸಖತ್ ಡಿಮ್ಯಾಂಡ್ ಬಂದಿದೆ. ಕೋರೋನ ಮೊದಲು ಭಟ್ರು ಗಣಪನ ಜೊತೆ ಎರಡನೇ ಗಾಳಿಪಟ ಹಾರಿಸ್ತೀನಿ ಅಂತ ಹೇಳಿದ ದಿನವೇ ಈ ಹಿಟ್ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅದರಂತೆಯೇ ಈಗ ಗಾಳಿಪಟ 2 ಚಿತ್ರ ರಿಲೀಸ್ ಗೂ ಮೊದಲೇ ನಿರ್ಮಾಪಕರ ಮುಖದಲ್ಲಿ ನಗು ತರಿಸಿದೆ.
ಗಾಳಿಪಟ 2 ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಟ್ರು ಬಳಗ ಬ್ಯುಸಿಯಾಗಿದೆ. ಇದೇ ಗ್ಯಾಪ್ ನಲ್ಲಿ ಗಾಳಿಪಟದ ಅಂಗಳದಿಂದ ಗೋಲ್ಡನ್ ಸುದ್ದಿಯೊಂದು ಗೋಲ್ಡನ್ ಸ್ಟಾರ್ ಅಭಿಮಾನಿಗಳ ಅಂಗಳ ಸೇರಿದೆ. ಇನ್ನೂ ಈ ಸುದ್ಧಿ ಕೇಳಿ ಗಣಪನ ಭಕ್ತರು ಗಾಳಿಪಟದಂತೆ ಆಕಾಶದಲ್ಲಿ ಹಾರಾಡ್ತಿದ್ದಾರೆ. ಹೌದು, ಗಾಳಿಪಟ 2 ರಿಲೀಸ್ ಗೂ ಮೊದಲೇ ಸ್ಯಾಟ್ ಲೈಟ್ ಮತ್ತು ಓಟಿಟಿ ರೈಟ್ಸ್ ಭರ್ಜರಿ ಬೆಲೆಗೆ ಸೇಲಾಗಿದೆ.
ಗಣೇಶ್ ಅವರ ಸಿನಿಮಾದ ಟೈಟಲ್ ಗಳೇ ಅಭಿಮಾನಿಗಳನ್ನು ಚಿತ್ರಮಂದಿರಗಳತ್ತ ಕರೆತರುತ್ತಿವೆ. ಅದಕ್ಕೆ ಸಾಕ್ಷಿ ಗಾಳಿಪಟ ಚಿತ್ರ ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಮತ್ತು ದಿಗಂತ್ ನಟನೆಯ ರೋಮ್ಯಾಂಟಿಕ್ ಸಿನಿಮಾ ಗಾಳಿಪಟ 2 ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. 2008 ರಲ್ಲಿ ಈ ಮೂವರು ಕಾಂಬಿನೇಷನ್ ನ ಗಾಳಿಪಟ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಸಿನಿಮಾದ ಇತ್ತೀಚಿನ ಸುದ್ಧಿ ಏನಂದ್ರೆ, ಗಾಳಿಪಟ 2 ಚಿತ್ರದ ಸ್ಯಾಟ್ ಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ 5 ಭಾರೀ ಮೊತ್ತಕ್ಕೆ ಖರೀದಿಸಿದೆ. ಅಲ್ಲದೇ ಗಾಳಿಪಟ 2 ಚಿತ್ರವನ್ನು ಭರ್ಜರಿಯಾಗಿ ಹಾರಿಸಲು ಗಣಪನ ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಗಣೇಶ್ ಜೊತೆಯಾಗಿ ದಿಗಂತ್ ಹಾಗು ಲೂಸಿಯಾ ಪವನ್ ನಟಿಸಿದ್ದಾರೆ. ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಕೋಟಿ ಸಂಭಾವನೆ ಪಡೆದುಕೊಂಡಿದ್ದು ಗಾಳಿಪಟ ಚಿತ್ರಕ್ಕೆ ಎಂದು ಹೇಳಿಕೊಂಡಿದ್ದಾರೆ. ಗಾಳಿಪಟ 2 ಹವಾ ಇನ್ನೇನು ನೋಡ್ಬೇಕು.