ಸಾರಿಕಾ, ಒಂದು ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಟಾಪ್ ನಟಿಯಾಗಿ ನೆಲೆಯೂರಿದ್ದ ನಟಿ, ಬಾರೀ ಬೇಡಿಕೆಯಲ್ಲಿರುವಾಗಲೇ ಕಮಲ್ ಹಾಸನ್ ರನ್ನು ಪ್ರೀತಿಸಿ ಮದುವೆಯಾದ ಸಾರಿಕಾ, ಚಿತ್ರರಂಗದಿಂದ ದೂರ ಆಗಿ ಸಂಸಾರದಲ್ಲಿ ತೊಡಗಿಸಿಕೊಂಡರು.
ಕಮಲ್ ಮತ್ತು ಸಾರಿಕಾಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ, ಅವರೇ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್, ಪೋಷಕರ ಮಾತಿಗೆ ಬೆಲೆ ಕೊಡದೇ ಅವರನ್ನು ಎದುರಿಸಿ ಕಮಲ್ ರನ್ನು ಮದುವೆಯಾಗಿದ್ದರು ಸಾರಿಕಾ.. ಮಕ್ಕಳು ಹುಟ್ಟಿದ ಮೇಲೆ ಈ ನಟಿಯ ಜೀವನ ಏನಾಯ್ತು ಗೊತ್ತಾ.?
ಯತಾಪ್ರಕಾರ ಕಮಲ್ ಮತ್ತು ಸಾರಿಕಾ ಮದ್ಯೆ ಬ್ರೇಕ್ ಅಪ್ ಆಗಿ, ವಿಚ್ಛೇದನ ಪಡೆದುಕೊಳ್ಳುತ್ತಾರೆ, ಇಬ್ಬರು ಮಕ್ಕಳೊಂದಿಗೆ ಮುಂಬೈಗೆ ಉದ್ಯೋಗ ಹರಸಿ ಹೋದ ಸಾರಿಕಾ, ಅಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡುತ್ತಾರೆ.
ದೊಡ್ಡವರಾದ ಹೆಣ್ಣು ಮಕ್ಕಳು ಸಾರಿಕಾ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಅವರ ಪಾಡಿಗೆ ಅವರು ಬದುಕುತ್ತಿದ್ದಾರೆ, ಕ್ಯಾರೇ ಅನ್ನುತ್ತಿಲ್ಲ. ಬಾಡಿಗೆ ಮನೆಯಲ್ಲಿರುವ ಸಾರಿಕಾಗೆ ಒಂದು ಭರವಸೆ ಇತ್ತು, ಅದು ಏನಂದ್ರೆ, ತನ್ನ ತಾಯಿಗಿರುವ ನೂರಾರು ಕೋಟಿ ಆಸ್ತಿ ತನಗೆ ಸಿಗುತ್ತದೆ ಎಂದು.
ಇತ್ತೀಚಿಗೆ ಸಾರಿಕಾ ತಾಯಿ ತೀರಿಕೊಂಡರು, ಆಗಲೇ ಗೊತ್ತಾಗಿದ್ದು, ತನ್ನನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಹೆಸರಿಗೆ ಎಲ್ಲಾ ಆಸ್ತಿಯನ್ನು ಸಾರಿಕಾ ಅವರ ತಾಯಿ ಬರೆದಿದ್ದಾರೆ ಎಂದು, ಎಲ್ಲಾ ಕಳೆದುಕೊಂಡಿರುವ ಸಾರಿಕಾ ಅವರು ತಾಯಿಯ ಆಸ್ತಿ ತನಗೆ ಬರಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಎಂತಹ ಸ್ಥಿತಿ ನೋಡಿ, ಮಾಜಿ ಗಂಡ ಮತ್ತು ಮಕ್ಕಳು ದೊಡ್ಡ ಸ್ಟಾರ್ಸ್, ಆದರೆ ಕೋರ್ಟ್ ಖರ್ಚಿಗೆ ಯಾರು ದುಡ್ಡು ಕೊಡುತ್ತಿಲ್ಲ. ಬಾಡಿಗೆ ಮನೆಯಲ್ಲಿ ವಾಸ, ಸಾರಿಕಾ ಸ್ಥಿತಿಯನ್ನು ನೋಡಿದ ಅಮೀರ್ ಖಾನ್, ಮುಂದೆ ಬಂದು ಸಾರಿಕಾ ಅವರ ಕೋರ್ಟ್ ಖರ್ಚು ಭರಿಸುವುದರ ಜೊತೆ ಸಂಧಾನದ ಮೂಲಕ ವ್ಯಾಜ್ಯವನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.