Yuvanidhi Scheme : ಯುವಕರಿಗೆ ಗುಡ್ ನ್ಯೂಸ್! ಯುವನಿಧಿ ಯೋಜನೆಯಡಿ 3000/- ನೇರ ಖಾತೆಗೆ ಜಮೆ

Yuvanidhi Scheme : ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಚುನಾವಣಾ ಪ್ರಣಾಳಿಕೆಯಲ್ಲೂ ಇದನ್ನು ಘೋಷಿಸಲಾಗಿತ್ತು. ಅದರಂತೆ ನಿರುದ್ಯೋಗಿ ಪದವೀಧರರು, ಡಿಪ್ಲೋಮಾದಾರರಿಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Pan Card Link : ಜಾಗ್ರತೆ.! ಪಾನ್ ಕಾರ್ಡ್ ಇದ್ದವರ ಗಮನಕ್ಕೆ

ನೂತನ ಸರ್ಕಾರ ರಚನೆಯ ಬಳಿಕ ಮೊದಲ ಕ್ಯಾಬಿನೆಟ್ ಮೀಟಿಂಗ್ ನ ನಂತರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಘೋಷಿಸಿರುವಂತಹ ಐದು ಗ್ಯಾರಂಟಿ ಯೋಜನೆಗಳಿಗೆ ₹50,000/- ಕೋಟಿಯಾಗಬಹುದು ಎನ್ನುವುದಾಗಿ ಅಂದಾಜಿಸಲಾಗಿದೆ. ಅದೆಷ್ಟೇ ಆದರೂ ನಾವು ಘೋಷಿಸಿರುವಂತಹ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

Whatsapp Group Join
Telegram channel Join

ಈ ವರ್ಷ ಪದವಿ, ಡಿಪ್ಲೊಮೋದಾರರಾಗಿ ನಿರುದ್ಯೋಗಿಗಳಾದಂತವರಿಗೆ ಯುವನಿಧಿ ಯೋಜನೆಯಡಿಯಲ್ಲಿ ಪದವೀಧರರಿಗೆ ₹3,000/- ರೂಪಾಯಿಯನ್ನ ಪ್ರತೀ ತಿಂಗಳು ಹಾಗು ಡಿಪ್ಲೊಮೋದಾರರಿಗೆ ಪ್ರತಿ ತಿಂಗಳು ₹1,500/- ರೂಪಾಯಿ ನೀಡಲಾಗುತ್ತದೆ. ಎರಡು ವರ್ಷಗಳವರೆಗೆ ಮಾತ್ರ ಈ ಯೋಜನೆಯಲ್ಲಿ ನಿರುದ್ಯೋಗ ಭತ್ಯೆಯನ್ನ ನೀಡಲಾಗುತ್ತದೆ. ಎರಡು ವರ್ಷದ ಅವಧಿಯ ಒಳಗೆ ಪದವೀಧರರು ಹಾಗು ಡಿಪ್ಲೊಮೋದಾರರಿಗೆ ಉದ್ಯೋಗ ಸಿಕ್ಕರೆ ಯುವನಿಧಿ ಯೋಜನೆಯಡಿ ನೀಡುವಂತಹ ಭತ್ಯೆಯನ್ನ ನಿಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಕೂಡ ಓದಿ : Pan Card Link : ಜಾಗ್ರತೆ.! ಪಾನ್ ಕಾರ್ಡ್ ಇದ್ದವರ ಗಮನಕ್ಕೆ

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತೀ ಮನೆಯ ಯಜಮಾನಿಗೆ ದಿನೇದಿನೇ ಅಗತ್ಯ ವಸ್ತುಗಳ ಬೆಳೆಯಿಂದ ತತ್ತರಿಸಿರುವಂತಹ ಮನೆಯೊಡತಿಗೆ ಪ್ರತೀ ತಿಂಗಳು ₹2,000/- ರೂಪಾಯಿ ಅಕೌಂಟ್ ಗೆ ಡೆಪಾಸಿಟ್ ಮಾಡಲಾಗುತ್ತದೆ ಎಂದರು. ನಮ್ಮ ಐದು ಯೋಜನೆಗಳಿಗೆ ಯಾವುದಕ್ಕೆ ಎಷ್ಟು ಖರ್ಚು ಆಗಲಿದೆ ಎನ್ನುವ ಬಗ್ಗೆ ಇನ್ನೂ ಚರ್ಚಿಸಲಾಗಿಲ್ಲ. ಮುಂದಿನ ಸಚಿವ ಸಂಪುಟ ಸಭೆಯ ವೇಳೆಗೆ ಎಲ್ಲಾ ಸಂಪೂರ್ಣ ಮಾಹಿತಿಯೊಂದಿಗೆ ಯೋಜನೆಗಳನ್ನ ಅಧೀಕೃತವಾಗಿ ಜಾರಿಗೊಳಿಸುವ ಆದೇಶವನ್ನ ಹೊರಡಿಸಲಾಗುತ್ತದೆ. ಈಗಾಗಲೇ ಈ ಐದು ಯೋಜನೆಗಳ ಜಾರಿಗೆ ತಾತ್ವಿಕ ಒಪ್ಪಿಗೆ ಸೂಚಿಸಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply