Yuvanidhi Scheme : ಯುವನಿಧಿಯ ₹3,000 ಗೆ ಅರ್ಜಿ ಸಲ್ಲಿಕೆ ಪ್ರಾರಂಭ.! / ಹೇಗೆ ಸಲ್ಲಿಸುವುದು ಗೊತ್ತಾ.?

Yuvanidhi Scheme : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಯುವನಿಧಿ ಯೋಜನೆಯನ್ನ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನ ಒಂದೇ ಹಂತದಲ್ಲಿ ಜಾರಿಗೊಳಿಸಿ ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಅಧೀಕೃತ ತೀರ್ಮಾನ ತೆಗೆದುಕೊಂಡಿದ್ದರು.

Whatsapp Group Join
Telegram channel Join

ಈ ಸಂಬಂಧ ಇಂದು ಕೌಶಲ್ಯ ಅಭಿವೃದ್ಧಿ ಹಾಗು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉಪ ಕಾರ್ಯದರ್ಶಿ ಸುತ್ತೋಲೆಯನ್ನ ಹೊರಡಿಸಿದ್ದು, ಅದರಲ್ಲಿ ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ತೇರ್ಗಡೆಯಾದ ಎಲ್ಲಾ ಪದವೀಧರರ ನಿರುದ್ಯೋಗಿಗಳಿಗೆ ಪ್ರತೀ ತಿಂಗಳು ₹3,000/- ಹಾಗು ಡಿಪ್ಲೊಮಾ ಪದವೀಧರರ ನಿರುದ್ಯೋಗಿಗಳಿಗೆ ಪ್ರತೀ ತಿಂಗಳು ₹1,500/- ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನ ಸರ್ಕಾರವು ಅಧೀಕೃತ ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ. ಹೇಗೆ ಅರ್ಜಿ ಸಲ್ಲಿಸುವುದು.? ಎಲ್ಲಿ ಅರ್ಜಿ ಸಲ್ಲಿಸುವುದು.? ಅರ್ಹತೆಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : LPG Gas Cylinder : ಎಲ್ ಪಿಜಿ ಗ್ಯಾಸ್ ಬಳಕೆದಾರರಿಗೆ ಸರ್ಕಾರದಿಂದ ೩ ಬಂಪರ್ ಗುಡ್ ನ್ಯೂಸ್! ಸಬ್ಸಿಡಿ ಹಣ ಜಮಾ.?

Whatsapp Group Join
Telegram channel Join

ಏನೆಲ್ಲಾ ಷರತ್ತುಗಳಿವೆ ಅಂತ ನೋಡುವುದಾದರೆ, 2022-23 ರ ಸಾಲಿನಲ್ಲಿ ತೇರ್ಗಡೆಯಾಗಿರಬೇಕು. ತೇರ್ಗಡೆ ಹೊಂದಿದ ದಿನದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರರಿಗೆ ನಿರುದ್ಯೋಗಿಗಳು ಎಂದು ಪರಿಗಣಿಸಿ, ಪ್ರತೀ ತಿಂಗಳು ₹3,000/- ರೂಪಾಯಿ ನಿರುದ್ಯೋಗ ಭತ್ಯೆ ಹಾಗು ಡಿಪ್ಲೊಮಾ ಪಾಸ್ ಆದವರಿಗೆ ಪ್ರತೀ ತಿಂಗಳು ₹1,500/- ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಗರಿಷ್ಟ 2 ವರ್ಷಗಳ ಅವಧಿಗೆ ಯುವನಿಧಿ ಯೋಜನೆಯನ್ನ ಜಾರಿಗೊಳಿಸುವುದಾಗಿ ಈಗಾಗಲೇ ಮಾಹಿತಿ ಬಂದಿದ್ದು, ಈ ಸೌಲಭ್ಯವು 2 ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. 2 ವರ್ಷಗಳ ಆವಧಿಯೊಳಗಾಗಿ ಉದ್ಯೋಗ ದೊರಕಿದ್ದಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನ ಸ್ಥಗಿತಗೊಳಿಸಲಾಗುವುದು.

ಇದನ್ನೂ ಕೂಡ ಓದಿ : LPG Gas Cylinder : ಎಲ್ ಪಿಜಿ ಗ್ಯಾಸ್ ಬಳಕೆದಾರರಿಗೆ ಸರ್ಕಾರದಿಂದ ೩ ಬಂಪರ್ ಗುಡ್ ನ್ಯೂಸ್! ಸಬ್ಸಿಡಿ ಹಣ ಜಮಾ.?

ಇನ್ನು ಈ ಯುವನಿಧಿ ಯೋಜನೆಯ ಪ್ರಯೋಜನವನ್ನ ಪಡೆಯಲು ಬಯಸುವ ಎಲ್ಲಾ ನಿರುದ್ಯೋಗಿಗಳು, ತಮ್ಮ ಬ್ಯಾಂಕ್ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು. ನೇರವಾಗಿ ಹಣ DBT ಮೂಲಕ ನಿಮ್ಮ ಖಾತೆಗೆ ಬರುತ್ತೆ. ಫಲಾನುಭವಿಗಳು ನೇರವಾಗಿ ಸೇವಾಸಿಂಧು ಪೋರ್ಟಳಲ್ಲಿ ಲಾಗಿನ್ ಮಾಡಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ. ನಿರೋದ್ಯೋಗಿಗಳು ಇದರ ಪ್ರಯೋಜನವನ್ನ ಪಡೆದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..