Spandana : ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಬದುಕಿನಲ್ಲಿ ವಿಧಿಯು ಆಟವಾಡಿದೆ. ಜೀವಕ್ಕೆ ಜೀವ ಆಗಿದ್ದ ಪತ್ನಿ ಸ್ಪಂದನ ಅವರನ್ನ ಕ್ರೂರ ವಿಧಿ ಕಿತ್ತುಕೊಂಡಿದ್ದಾನೆ. ಕುಟುಂಬ ಸದಸ್ಯರು ಹಾಗು ಸ್ನೇಹಿತರ ಜೊತೆ ಥೈಲ್ಯಾಂಡ್ ನ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸ್ಪಂದನ ಅವರು ಅಲ್ಲಿಯೇ ಬದುಕಿನ ಯಾತ್ರೆ ಮುಗಿಸಿದ್ದಾರೆ. ರಾತ್ರಿ ಮಲಗಿದ್ದ ಸ್ಪಂದನ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಮತ್ತೆ ಮೇಲೆ ಏಳಲೇ ಇಲ್ಲ. ಈ ಸುದ್ಧಿಯು ಅವರ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ. ಇದೀಗ ವಿಜಯ ರಾಘವೇಂದ್ರ ಅವರು ಪತ್ನಿಯನ್ನ ಕಳೆದುಕೊಂಡು ದುಃಖದ ಸಾಗರದಲ್ಲಿ ಮುಳುಗಿದ್ದಾರೆ. ಆಸ್ಪತ್ರೆ ಬಳಿ ಎಲ್ಲಿಯೂ ಹೋಗದೇ ಪತ್ನಿಯ ಪಕ್ಕದಲ್ಲೇ ಅಳುತ್ತಾ ಕುಳಿತಿದ್ದಾರಂತೆ. ಯಾರು ಎಷ್ಟೇ ಹೇಳಿದ್ರೂ ಸಮಾಧಾನ ಆಗುತ್ತಿಲ್ಲ. ನೀರು ಸಹ ಕುಡಿಯುತ್ತಿಲ್ಲ. ಆದರೆ ಪತ್ನಿ ಹೇಳಿದ ಕೊನೆಯ ಆಸೆಯನ್ನ ನೆನೆದು ವಿಜಯ ರಾಘವೇಂದ್ರ ಅವರು ತುಂಬಾನೇ ಕುಗ್ಗಿ ಹೋಗಿದ್ದಾರೆ. ಹಾಗಾದ್ರೆ ಸ್ಪಂದನ ಅವರ ಕೊನೆ ಏನಾಗಿತ್ತು ಗೊತ್ತಾ.?
ಇದನ್ನೂ ಕೂಡ ಓದಿ : Spandana : ಪತ್ನಿಯ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿ, ಬಿಕ್ಕಿ ಬಿಕ್ಕಿ ಅತ್ತ ವಿಜಯ ರಾಘವೇಂದ್ರ / ಪತ್ನಿಗೆ ಹೇಳಿದ್ದೇನು.?
ಸ್ಪಂದನ ಇನ್ನಿಲ್ಲ.! ಅನ್ನುವುದನ್ನು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇದು ಸುಳ್ಳಾಗಲಿ ಅಂತ ಬಯಸ್ತೀನಿ. ಆದರೆ ವಾಸ್ತವವನ್ನ ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಅವಳು ಸ್ಪಂದನ. ಆದರೆ ನನಗೆ ಅವಳು ಅಚ್ಚು. ಸ್ಪಂದನ ಮೇಲೆ ಅವಳ ತಂದೆ ಪ್ರಾಣವನ್ನೇ ಇಟ್ಟುಕೊಂಡಿದ್ದಾರೆ. ಈ ವಿಷಯವನ್ನು ಅವರು ಹೇಗೆ ತಡೆದುಕೊಳ್ಳುತ್ತಾರೋ ಅಂತ ಗೊತ್ತಿಲ್ಲ ಎಂದು ಗೆಳತಿ ಹಾಗು ನಿರ್ದೇಶಕಿ ರೇಖಾ ರಾಣಿ ಕಶ್ಯಪ್ ಅವರು ಬೇಸರ ಹೊರ ಹಾಕಿದ್ದಾರೆ. ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾಗೆ ಕುಟುಂಬದ ಜೊತೆ ತುಂಬಾ ಚೆನ್ನಾಗಿರಬೇಕು, ಖುಷಿಯಿಂದ ಬಾಳಬೇಕು, ತನ್ನ ಪತಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮದು ಸುಂದರ ಕುಟುಂಬ ಆಗಿರಬೇಕು ಎನ್ನುವ ಮಹದಾಸೆಯಿತ್ತಂತೆ. ಇದೀಗ ತನ್ನ ಜೀವ ಆಗಿದ್ದ ಪತ್ನಿ ಇನ್ನಿಲ್ಲ ಎನ್ನುವುದನ್ನ ನೆನೆದು ವಿಜಯ ರಾಘವೇಂದ್ರ ಕಣ್ಣೀರು ಹಾಕುತ್ತಿದ್ದಾರೆ. ವಿಜಯ ರಾಘವೇಂದ್ರ ಹಾಗು ಅವರ ಕುಟುಂಬಕ್ಕೆ ಸ್ಪಂದನ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..