Vijaya Raghavendra : ಪತ್ನಿ ಸ್ಪಂದನ ನಿಧನದ ಬಳಿಕ ಅನುಶ್ರೀ ಹೇಳಿದ ಮಾತಿಗೆ ಕಣ್ಣೀರಿಟ್ಟ ವಿಜಯ ರಾಘವೇಂದ್ರ.!

Vijaya Raghavendra : ಸಿನಿಮಾ ಹಾಗು ಕಿರುತೆರೆ, ಎರಡರಲ್ಲಿಯೂ ನಟ ವಿಜಯ ರಾಘವೇಂದ್ರ ಅವರು ಆಕ್ಟಿವ್ ಆಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ ೭ ರಲ್ಲಿ ಮತ್ತೆ ಜಡ್ಜ್ ಆಗಿ ಭಾಗವಹಿಸಿದ್ದಾರೆ. ಆಂಕರ್ ಅನುಶ್ರೀ, ವಿಜಯ ರಾಘವೇಂದ್ರ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಹಠಾತ್ ನಿಧನದ ಬಳಿಕ ಮತ್ತೆ ಡಿಕೆಡಿ ಶೋನಲ್ಲಿ ಭಾಗಿಯಾಗಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ :

ಪತ್ನಿಯ ಅಗಲಿಕೆಯ ನೋವಿನಲ್ಲಿಯೇ ಮತ್ತೆ ಕೆಲಸಗಳತ್ತ ಆಕ್ಟಿವ್ ಆಗಿದ್ದಾರೆ. ಸಿನಿಮಾ, ಕಿರುತೆರೆ ಎರಡರಲ್ಲಿಯೂ ವಿಜಯ ರಾಘವೇಂದ್ರ ಆಕ್ಟಿವ್ ಆಗಿದ್ದಾರೆ. ಡಿಕೆಡಿಯಲ್ಲಿ ಶಿವರಾಜ್ ಕುಮಾರ್, ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಜೊತೆ ವಿಜಯ್ ಕೂಡ ಜಡ್ಜ್ ಆಗಿ ಗಮನ ಸೆಳೆದಿದ್ದರು. ಈ ಶೋ ಅನ್ನ ಆಂಕರ್ ಅನುಶ್ರೀ ನಡೆಸಿಕೊಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಜಯ ರಾಘವೇಂದ್ರ ಜೊತೆಗಿನ ಫೋಟೋವನ್ನ ಹಂಚಿಕೊಂಡಿದ್ದಾರೆ. ಸಧ್ಯ ಈ ಫೋಟೋ ಸಖತ್ ವೈರಲ್ ಆಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ :

ಕೆಲವು ಭಾವಚಿತ್ರಗಳು, ಭಾವಗಳನ್ನು ತಾನಾಗಿಯೇ ನುಡಿಯುತ್ತೆ. ಸ್ನೇಹ ಬಾಳನ್ನ ಬೆಳಗುತ್ತೆ. ಬೆಸ್ಟ್ ಮೂಮೆಂಟ್ ವಿಥ್ ಬೆಸ್ಟಿ ವಿಜಯ ರಾಘವೇಂದ್ರ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ನೆಟ್ಟಿಗರು ಮರೆಯಲಾಗದ ಬಂಧ, ನೆನಪುಗಳು ಶಾಶ್ವತ ಚಿನ್ನಾರಿ ಮುತ್ತ… ಹೀಗೆ ನಗು ನಗುತ್ತಾ ಇರಿ. ದುಃಖದಿಂದ ಸುಖದ ನಿಲ್ದಾಣಕ್ಕೆ ಹಾಗು ಬಿಗ್ ಬಾಸ್ ಸೀಸನ್ ೧ ರಿಂದ ಡಿಕೆಡಿ ವರೆಗೆ ನಿಮ್ಮ ಸ್ನೇಹವು ಅಂತ್ಯವಿಲ್ಲ. ಮತ್ತು ಲೆಕ್ಕವಿಲ್ಲದಷ್ಟು ನೆನಪುಗಳು ನಿಮ್ಮ ಜೀವನದುದ್ದಕ್ಕೂ ಇರುತ್ತದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಕೂಡ ಓದಿ :

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply