Spandana Vijay : ಡಿಕೆಡಿ ವೇದಿಕೆ ಮೇಲೆ ಸ್ಪಂದನ ನೆನೆದು ಕಣ್ಣೀರಿಟ್ಟ ವಿಜಯ ರಾಘವೇಂದ್ರ.! ಮಗನ ಬಗ್ಗೆ ಹೇಳಿದ್ದೇನು.?

Spandana Vijay : ಕನ್ನಡ ಚಿತ್ರರಂಗದ ಚಿನ್ನಾರಿ ರಾಘವೇಂದ್ರ ಅವರ ಪತ್ನಿ ಸ್ಪಂದನ ಆಗಸ್ಟ್ 7 ರಂದು ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಲೋ ಬಿಪಿಯಾಗಿ ಅಗಲಿದರು. ಪತ್ನಿಯ ಅಗಲಿಕೆಯಿಂದ ತುಂಬಾನೇ ನೊಂದಿರುವ ರಾಘು ಇದೀಗ ಡಿಕೆಡಿ ವೇದಿಕೆಗೆ ಮತ್ತೆ ಬಂದಿದ್ದಾರೆ. ಪತ್ನಿಯ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯವೊಂದನ್ನ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಸ್ಪಂದನ ಅವರು ತುಂಬ ಆರೋಗ್ಯವಾಗಿ ಇದ್ದರು. ನಿಜ ಹೇಳಬೇಕು ಅಂದರೆ ನಿಜಕ್ಕೂ, ಈ ಕ್ಷಣಕ್ಕೂ ಏನಾಗಿದೆ ಎಂದು ಆಕೆಗೆ ಪಾಪ ಗೊತ್ತಿದೆಯೋ ಇಲ್ಲವೋ ಎಲ್ಲರ ಮನೆಯಲ್ಲೂ ಈ ರೀತಿ ಘಟನೆ ನಡೆಯುತ್ತದೆ. ಈಗ ನಮ್ಮ ಮನೆಯಲ್ಲಿ ನಡೆದಿದೆ. ಆ ಜಾಗದಲ್ಲಿ ನಿಂತು ನೋಡಿದಾಗ ಆಗುವ ಅನುಭವ ಬೇರೆ ಆ ನೋವು ನಾನೇ ನುಂಗುತ್ತಿರುವೆ. ಮತ್ತೆ ಮತ್ತೆ ಮಾತನಾಡಿ ಅಳುವುದಕ್ಕೆ ನೋವು ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲ. ನನ್ನ ಮಗ ನನ್ನನ್ನು ಗಮನಿಸುತ್ತಿರುತ್ತಾನೆ. ನಾನು ಏನೇ ಮಾಡಿದರು ಅಪ್ಪ- ಅಮ್ಮ ನೋಡುತ್ತಾರೆ. ಹಾಗೂ ನನ್ನ ಅತ್ತೆ ಮಾವ ನೋಡುತ್ತಾರೆ. ಪದೇ ಪದೇ ಹೆಂಡತಿ ಬಗ್ಗೆ ಮಾತನಾಡುವುದಕ್ಕೆ ಬೇಸರವಾಗುತ್ತದೆ ಎಂದು ಭಾವುಕರಾಗಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಅಳುತ್ತಾ ಕುಳಿತಿದ್ದ ರಾಘು ಮನೆಗೆ ಬಂದ ಸುದೀಪ್ ಮಾಡಿದ ಕೆಲಸ ಕಂಡು ರಾಘು ಶಾಕ್.!

ಸ್ಪಂದನ ಬಗ್ಗೆ ಮಾತನಾಡುತ್ತಿದ್ದರೆ, ಮಾತನಾಡುತ್ತಲೇ ಇರಬಹುದು. ಆಕೆ ಇಲ್ಲದೇ ೩ ದಿನ ಕಷ್ಟವಾಯಿತು. ಅಲ್ಲಿ ನಡೆದ ಘಟನೆ ಅಲ್ಲಿಂದ ಇಲ್ಲಿ ಬಂದ ಮೇಲೆ ಆದಂತಹ ಕೆಲಸಗಳು ಆಕೆಗೆ ಜನರು ಆಶೀರ್ವಾದ ಮಾಡಿದ್ದು ನೋಡಿದರೆ, ನಾನು ಜೀವನದಲ್ಲಿ ಬಹಳ ದೊಡ್ಡದು ಏನೋ ಮಿಸ್ ಮಾಡಿಕೊಳ್ಳುತ್ತಿರುವೆ ಅನಿಸುತ್ತದೆ. ಕಳೆದ 2 ವರ್ಷಗಳಿಂದ ನಾವು ಇದ್ದಂತ ರೀತಿ ಯೋಚನೆಗಳು ಮತ್ತು ಯೋಜನೆಗಳು ಚೆನ್ನಾಗಿ ಕೆಲಸ ರೂಪಕ್ಕೆ ಬರುತ್ತಿತ್ತು. ಇನ್ನು ಮುಂದೆ ನಾನು ಒಬ್ಬನೇ ಅದನ್ನು ಪೂರ್ತಿ ಮಾಡಬೇಕು ಎಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ. ಸ್ಪಂದನ ಅವರಿಗೆ ತಂದೆ ಅಂದರೆ ತುಂಬಾನೇ ಇಷ್ಟ. ಅವರ ತಂದೆಗೂ ಮಗಳೇ, ಮಗಳೇ ಎಂದೇ ಕರೆಯುತ್ತಿದ್ದರು. ತಂದೆ ತಾಯಿ ಸಂಬಂಧ ಯಾರು ಓವರ್ ಟೇಕ್ ಮಾಡಬಾರದು. ಕೊನೆಯದಾಗಿ ತಂದೆಯ ಜೊತೆ ಡಿಪಿ ಹಾಕಿದ್ದರು. ಅದನ್ನು ಕೂಡ ಬದಲಾಯಿಸಿರಲಿಲ್ಲ. ಸ್ಪಂದನ ತಂದೆ ಜೊತೆ ಸೇರಿಕೊಂಡು ಮಗ ಶೌರ್ಯನನ್ನ ಚೆನ್ನಾಗಿ ರೇಗಿಸುತ್ತಿದ್ದರು. ಆ ನೆನಪುಗಳು ಇನ್ನು ಮುಂದೆ ಹಾಗೇ ಇರುತ್ತದೆ ಎಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Ashwini Puneeth Rajkumar : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..