Vehicle Scheme : ನಮಸ್ಕಾರ ಸ್ನೇಹಿತರೇ, 2023-24 ನೇ ಸಾಲಿನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಭೋವಿ ಸಮಾಜ ಅಭಿವೃದ್ಧಿ ನಿಗಮ ಹಾಗು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಒಳಪಡುವ ವಿವಿಧ ನಿಗಮಗಳ ವತಿಯಿಂದ ಇದೀಗ ಭರ್ಜರಿ ಸಂತಸದ ಸುದ್ಧಿ ನೀಡಲಾಗಿದ್ದು, ಸರಕು ಸಾಗಾಣಿಕೆ ವಾಹನ, ಟ್ಯಾಕ್ಸಿ ವಾಹನ ಖರೀದಿಸಲು ಇದೀಗ 3,50,000/- ರೂಪಾಯಿ ಉಚಿತ ಸಹಾಯಧನ ನೀಡಲಾಗುತ್ತಿದ್ದು, ನೀವು ಸುಲಭವಾಗಿ ಅರ್ಜಿ ಸಲ್ಲಿಸುವುದರ ಮೂಲಕ ಸಬ್ಸಿಡಿ ಮೊತ್ತವನ್ನ ಪಡೆದುಕೊಂಡು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಕೂಡ ಓದಿ : BPL APL AAY : ರೇಶನ್ ಕಾರ್ಡ್ ದಾರರಿಗೆ ಭರ್ಜರಿ ಸಿಹಿಸುದ್ಧಿ // ಅಕ್ಕಿಯ ಜೊತೆಗೆ ಹಣ, ರಾಗಿ, ಜೋಳ, ಗೋಧಿ ವಿತರಣೆ.!
ಹೌದು, 3,50,000/- ರೂಪಾಯಿ ಲಘು ಸರಕು ಸಾಗಣೆ ವಾಹನ ಹಾಗು ಟ್ಯಾಕ್ಸಿ ಸೇರಿದಂತೆ ದ್ವಿಚಕ್ರ ವಾಹನ ಖರೀದಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಸೇವಾಸಿಂಧು ವೆಬ್ ಪೋರ್ಟಲ್ ನಲ್ಲಿ ಹಾಗು ಆಯಾ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ಕೊಟ್ಟು ಅರ್ಜಿಯನ್ನ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರ ಹಾಗು ಡ್ರೈವಿಂಗ್ ಲೈಸೆನ್ಸ್, ನಾಲ್ಕು ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ಪ್ರತಿ, ರೇಷನ್ ಕಾರ್ಡ್ ನ್ನ ಹೊಂದಿರಬೇಕು.
ಇದನ್ನೂ ಕೂಡ ಓದಿ : Revenue Department : ಜಮೀನಿನ ಪಹಣಿಯಲ್ಲಿ ತಂದೆ, ತಾಯಿ, ಮುತ್ತಾತನ ಹೆಸರಿನಲ್ಲಿದ್ದರೆ / ದಾಖಲೆಗಳು ಇಲ್ಲದೆ ರೈತನ ಹೆಸರಿಗೆ ವರ್ಗಾವಣೆ
ಇನ್ನು ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. 18 ವರ್ಷ ವಯೋಮಿತಿ ಮೇಲ್ಪಟ್ಟಿರಬೇಕು. 1,50,000/- ರೂಪಾಯಿ ಒಳಗಾಗಿ ಆದಾಯ ವಯೋಮಿತಿಯನ್ನ ಹೊಂದಿರಬೇಕು. ಹಾಗು ಡ್ರೈವಿಂಗ್ ಲೈಸೆನ್ಸ್ ನ್ನ ಕಡ್ಡಾಯವಾಗಿ ಹೊಂದಿರಲೇಬೇಕು. ಅರ್ಜಿ ಸಲ್ಲಿಸಲು ನಿಮ್ಮ ವರ್ಗಕ್ಕೆ ಸಂಬಂಧ ಪಡುವ ನಿಗಮಕ್ಕೆ ಭೇಟಿ ಕೊಡುವುದರ ಮೂಲಕ ಸುಲಭವಾಗಿ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..