Yuvanidhi Scheme : ನಮಸ್ಕಾರ ಸ್ನೇಹಿತರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗಿ ಬಹುತೇಕ ಎಲ್ಲಾ ಯೋಜನೆಗಳು ಭಾರೀ ಯಶಸ್ಸನ್ನು ಕಂಡಿದೆ. ಈಗಾಗಲೇ ಘೋಷಿಸಿರುವ ಐದು ಗ್ಯಾರಂಟಿಗಳಲ್ಲಿ ನಾಲ್ಕು ಯೋಜನೆಗಳು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಕೊನೆಯ ಯೋಜನೆಯಾದ ಯುವ ನಿಧಿ ಯೋಜನೆ(Yuvanidhi scheme) ಮಾತ್ರ ಯುವಕರಿಗಾಗಿ ಜಾರಿಗೆ ತರಬೇಕಾಗಿದೆ. 2022-23ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿರುವ ಪದವಿ ಹಾಗು ಡಿಪ್ಲೋಮ ನಿರುದ್ಯೋಗಿ ಯುವಕ – ಯುವತಿಯರಿಗೆ ಸರ್ಕಾರದ ಕೊನೆಯ ಗ್ಯಾರಂಟಿ ಯೋಜನೆಯಾದ ಯುವನಿಧಿ ಹಣ ಸಿಗಲಿದೆ.
ಇದನ್ನೂ ಕೂಡ ಓದಿ : Gruhalakshmi Scheme : ದಾಖಲೆ ಎಲ್ಲಾ ಸರಿ ಇದೆ. ಆದರೂ ಗೃಹಲಕ್ಷ್ಮಿ ಯೋಜನೆಯ ₹2,000/- ಹಣ ಬ್ಯಾಂಕ್ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ.?
ಯುವ ನಿಧಿ ಯೋಜನೆ(Yuva Nidhi scheme) ಬಗ್ಗೆ ಸರ್ಕಾರದಿಂದ ಹೊಸ ಅಪ್ ಡೇಟ್.!
ಯುವನಿಧಿ ಯೋಜನೆಯನ್ನು ಇದೇ ಡಿಸೆಂಬರ್ ತಿಂಗಳಿನಿಂದ ಪ್ರಾರಂಭ ಮಾಡಲಾಗುತ್ತದೆ ಹಾಗು ಡಿಪ್ಲೋಮಾ ಹಾಗು ಪದವೀಧರ ನಿರುದ್ಯೋಗಿ ಯುವಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ಯುವ ನಿಧಿ ಯೋಜನೆಯ(Yuva Nidhi scheme) ಹಣ ಎಷ್ಟು ಸಿಗಲಿದೆ.?
ಡಿಪ್ಲೊಮಾ ನಿರುದ್ಯೋಗ ಯುವಕ ಯುವತಿಯರಿಗೆ ₹1,500/- ಹಾಗು ಪದವೀಧರ ನಿರುದ್ಯೋಗ ಯುವಕ ಯುವತಿಯರಿಗೆ ₹3,000/- ರೂಪಯಿಗಳನ್ನ ಯುವ ನಿಧಿ ಯೋಜನೆ(Yuvanidhi scheme) ಅಡಿಯಲ್ಲಿ ಪ್ರತೀ ತಿಂಗಳು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು
ನಿರುದ್ಯೋಗ ಯುವಕ ಯುವತಿಯರು ಉದ್ಯೋಗ ಸಿಗುವವರೆಗೆ ಈ ಹಣ ಅವರಿಗೆ ಸಹಾಯಕವಾಗಲಿದೆ ಹಾಗು ಈ ಯುವನಿಧಿ ಯೋಜನೆಯ ಹಣವನ್ನ ದೀರ್ಘಕಾಲದವರೆಗೆ ಪಡೆಯಲು ಸಾಧ್ಯವಿಲ್ಲ. ಹೆಚ್ಚೆಂದರೆ ಈ ಯೋಜನೆಯ ಅವಧಿ ಸುಮಾರು ಎರಡು ವರ್ಷ. ಎರಡು ವರ್ಷದೊಳಗೆ ನಿಮಗೆ ಉದ್ಯೋಗ ಸಿಕ್ಕ ತಕ್ಷಣ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ.
ಇದನ್ನೂ ಕೂಡ ಓದಿ : Dhruva Sarja : ಮಗಳ ನಾಮಕರಣ ಮಾಡಿದ ಧ್ರುವ ಸರ್ಜಾ.! ಮೇಘನಾ ರಾಜ್ ಧ್ರುವ ಸರ್ಜಾ ಮಗಳಿಗೆ ಇಟ್ಟ ಹೆಸರೇನು ಗೊತ್ತಾ.?
ಯುವ ನಿಧಿ ಯೋಜನೆಗೆ(Yuva Nidhi scheme) ಈ ರೀತಿ ಅರ್ಜಿ ಸಲ್ಲಿಸಿ :-
ರಾಜ್ಯ ಸರ್ಕಾರದಿಂದ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಬಹುತೇಕ ವರ್ಗಾವಣೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಯುವನಿಧಿ ಯೋಜನೆಯ ಜಾರಿಗೆ ತರುವ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಡಿಸೆಂಬರ್ ತಿಂಗಳಿನಿಂದಲೇ ಯುವ ನಿಧಿ ಯೋಜನೆಯ ಹಣವನ್ನ ಅರ್ಹ ಫಲಾನುಭವಿ ನಿರುದ್ಯೋಗಿ ಯುವಕ ಯುವತಿಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕಾಗಿ ಫಲಾನುಭವಿ ಯುವಕ ಯುವತಿಯರು ಬೆಂಗಳೂರು ಒನ್, ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿಗಳನ್ನ ಸಲ್ಲಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಯುವ ನಿಧಿ ಯೋಜನೆಯ(Yuvanidhi scheme) ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಯಾವಾಗ ಚಾಲನೆ ನೀಡಲಾಗುತ್ತದೆ ಎನ್ನುವ ಅಧೀಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಲಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..