Spandana Vijay : ಪತ್ನಿ ಸ್ಪಂದನ ನಿಧನದ ಬಳಿಕ ವಿಜಯ ರಾಘವೇಂದ್ರ ಜಾತಕ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಜ್ಯೋತಿಷ್ಯರು.!

Spandana Vijay : ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಜೀವನದಲ್ಲಿ ದೊಡ್ಡ ಬಿರುಗಾಳಿಯೊಂದು ಬೀಸಿದೆ. ಅವರ ಮುದ್ದಿನ ಮಡದಿಯನ್ನ ಇತ್ತೀಚಿಗಷ್ಟೇ ಕಳೆದುಕೊಂಡಿದ್ದಾರೆ. ಜ್ಯೋತಿಷ್ಯದ ಪ್ರಕಾರ ಅವರ ಮುಂದಿನ ಜೀವನ ಹೇಗಿರಬಹುದು ಎನ್ನುವುದನ್ನ ಖ್ಯಾತ ಜ್ಯೋತಿಷಿಗಳೊಬ್ಬರು ತಿಳಿಸಿದ್ದಾರೆ. ಜ್ಯೋತಿಷಿಗಳು ಹೇಳಿದ ಮಾತು ಕೇಳಿ ವಿಜಯ ರಾಘವೇಂದ್ರ ಅವರು ಮತ್ತೆ ಕಣ್ಣೀರಿಟ್ಟಿದ್ದಾರೆ. ಹಾಗಾದ್ರೆ ವಿಜಯ ರಾಘವೇಂದ್ರ ಅವರ ಜಾತಕದಲ್ಲಿ ಏನಾಗಿದೆ.? ಅವರ ಮುಂದಿನ ಭವಿಷ್ಯ ಹೇಗಿದೆ.? ಅದರ ಬಗ್ಗೆ ಸಂಪೂರ್ಣವಾಗಿ ನೋಡೋಣ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Laptop Scheme : 2023-24 ರ ಎಲ್ಲಾ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ಉಚಿತ ಲ್ಯಾಪ್ ಟಾಪ್

ಕೆಲ ದಿನಗಳ ಹಿಂದಷ್ಟೇ ಪತ್ನಿ ಸ್ಪಂದನ ಅವರನ್ನು ದೂರ ಮಾಡಿಕೊಂಡ ನಟ ವಿಜಯ ರಾಘವೇಂದ್ರ ಬಹಳ ನೋವಿನಲ್ಲಿದ್ದು, ಒಂದು ರೀತಿಯಲ್ಲಿ ಅವರ ಜೀವನವೇ ಅಲ್ಲೋಲ ಕಲ್ಲೋಲವಾಗಿದೆ ಅನ್ನಬಹುದು. ಚಂದನವನದಲ್ಲಿ ವಿಜಯ ರಾಘವೇಂದ್ರ ಅವರಿಗೆ ಬಹಳ ಒಳ್ಳೆಯ ಹೆಸರಿದೆ. ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಇತ್ತೀಚಿಗಷ್ಟೇ ಅವರ ಹೊಸ ಚಿತ್ರ ಸಹ ಬಿಡುಗಡೆಯಾಗಿದೆ. ಆದರೆ ಅವರಿನ್ನೂ ನೋವಿನಲ್ಲಿಯೇ ಇದ್ದಾರೆ.

Whatsapp Group Join
Telegram channel Join

ಇನ್ನು ಜ್ಯೋತಿಷ್ಯದ ಪ್ರಕಾರ ವಿಜಯ ರಾಘವೇಂದ್ರ ಅವರ ಜಾತಕ ಹಾಗು ಭವಿಷ್ಯವನ್ನ ಅವಲೋಕಿಸುತ್ತಾ ಹೋದರೆ, ಅವರ ಜಾತಕದಲ್ಲಿ ಕೆಲ ಸಮಸ್ಯೆಗಳಿತ್ತು ಎನ್ನಲಾಗುತ್ತದೆ. ಆದರೆ ಅವರ ಜನ್ಮ, ಸಮಯದ ಅನುಸಾರ ಎಲ್ಲವೂ ನಿರ್ಧಾರವಾಗುತ್ತದೆ. ಇನ್ನು ವಿಜಯ ರಾಘವೇಂದ್ರ ಅವರು ಹುಟ್ಟಿದ್ದು ಮೇ 26 1979ರಂದು. ಅವರ ಹುಟ್ಟಿದ ದಿನದ ಪ್ರಕಾರ ಅವರ ರಾಶಿ ಮಿಥುನ. ಹಾಗೆಯೇ ಅವರು ವಿವಾಹವಾದ ದಿನಾಂಕ 26 ಆಗಸ್ಟ್ 2007. ಇವರಿಗೆ ಶೌರ್ಯ ಎನ್ನುವ ಮಗ ಸಹ ಇದ್ದಾನೆ. ಸಂಖ್ಯಾಶಾಸ್ತ್ರದ ಪ್ರಕಾರ 26, 8, 7 ಹೀಗೆ ಈ ದಿನಾಂಕವನ್ನು ಮದುವೆಗೆ ಸೂಕ್ತವಲ್ಲ ಎನ್ನಲಾಗುತ್ತದೆ. ಆದರೆ, ಯಾವುದೇ ಮದುವೆ ಸಂಖ್ಯೆ ಸೇರಿಸಿದಾಗ 4, 7 ಮತ್ತು 8 ಬಂದರೆ ಅದು ಸಹ ಅಶುಭ ಎನ್ನಲಾಗುತ್ತದೆ. ಇನ್ನು ಅವರ ಜನ್ಮ ದಿನಾಂಕದ ಅನುಸಾರ ಅವರ ಭವಿಷ್ಯವನ್ನು ಊಹಿಸುವುದಾದರೆ, ಅವರಿಗೆ ಶನಿಯಿಂದ ಇಷ್ಟು ದಿನ ಸಮಸ್ಯೆಗಳಾಗಿತ್ತು.

ಇದನ್ನೂ ಕೂಡ ಓದಿ : PM Ujjwala Yojana : ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಹೊಸ ಗ್ಯಾಸ್ ಸಂಪರ್ಕ.!

ಆದರೆ, ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗುತ್ತದೆ. ನವೆಂಬರ್ ನಂತರ ಗೃಹಗತಿಗಳು ಬಹಳ ಚೆನ್ನಾಗಿರುವುದರಿಂದ, ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗುತ್ತದೆ. ಇದರಿಂದ ಬದುಕಿನಲ್ಲಿ ಸಂತೋಷ ಸಹ ಮೂಡುತ್ತದೆ ಎನ್ನುವ ಮಾತನ್ನು ಜ್ಯೋತಿಷ್ಯರು ತಿಳಿಸಿದ್ದಾರೆ ಎನ್ನುವ ಸುದ್ಧಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೋವಿನಲ್ಲಿರುವ ವಿಜಯ ರಾಘವೇಂದ್ರ ಅವರ ಜೀವನದಲ್ಲಿ ಇನ್ನಾದರೂ ಒಳ್ಳೆಯದಾಗಲಿ.. ಅವರ ಜೀವನದಲ್ಲಿ ಖುಷಿ ತುಂಬಿರಲಿ ಎಂದು ನಾವೆಲ್ಲಾ ಕೇಳಿಕೊಳ್ಳೋಣ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply