Shakti Smart Card : ಮಹಿಳೆಯರ ಉಚಿತ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ / ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ

Shakti Smart Card : ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ತಿಳಿಸಿರುವಂತೆ ಜೂನ್ 11 ರಿಂದ ಇಡೀ ರಾಜ್ಯಾದ್ಯಂತ ಮಹಿಳೆಯರು ಉಚಿತವಾದ ಪ್ರಯಾಣವನ್ನ ಮಾಡಬಹುದು ಎನ್ನುವ ಆದೇಶ ಹೊರಡಿಸಿತ್ತು. ಮಹಿಳೆಯರೆಲ್ಲರೂ ಜೂನ್ 11 ರಿಂದ ರಾಜ್ಯಾದ್ಯಂತ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಅಂತ ಕಾಯುತ್ತ ಇದ್ದರು. ಆದರೆ ಕಾಂಗ್ರೆಸ್ ಸರ್ಕಾರ ಈ ಉಚಿತ ಪ್ರಯಾಣ ಯೋಜನೆಗೆ ಮಾರ್ಗಸೂಚಿ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಏನೆಲ್ಲಾ ತಿಳಿಸಲಾಗಿದೆ? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Congress Guarantee : ಗೃಹಲಕ್ಷ್ಮಿ ಹಣ ಅತ್ತೆಗಾ.? ಸೊಸೆಗಾ.? ಈ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತೆ.

ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಇರುತ್ತದಾ.? ಅಥವಾ ಇಲ್ವಾ.?

Whatsapp Group Join
Telegram channel Join

ಮಾರ್ಗಸೂಚಿ ಪ್ರಕಾರ ಎಲ್ಲಾ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನ ಪರಿಶೀಲಿಸಿದ ನಂತರ ನಿಮಗೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ನೀವು ಅರ್ಜಿಯನ್ನ ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನಿಮಗೆ ನೀಡಿದ ಶಕ್ತಿ ಸ್ಮಾರ್ಟ್ ಕಾರ್ಡ್ ನ್ನ ನೀವು ಪ್ರಯಾಣಿಸುವಾಗ ಅದನ್ನ ಜೊತೆಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದ ನಂತರ ನೀವು ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣವನ್ನ ಮಾಡಬಹುದು.

ಇದನ್ನೂ ಕೂಡ ಓದಿ : Congress Guarantee : ಗೃಹಲಕ್ಷ್ಮಿ ಹಣ ಅತ್ತೆಗಾ.? ಸೊಸೆಗಾ.? ಈ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತೆ.

ಹಾಗಾದ್ರೆ, ಜೂನ್ 11 ರಿಂದ ಉಚಿತ ಪ್ರಯಾಣ ಇದೆಯಾ.? ಅಥವಾ ಇಲ್ವಾ.? ಅನ್ನುವ ಗೊಂದಲದಲ್ಲಿದ್ದಾರೆ ಮಹಿಳೆಯರು. ನೀವು ಜೂನ್ ೧೧ ರಿಂದ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಅರ್ಜಿ ಸಲ್ಲಿಸಿದ ಮೂರು ತಿಂಗಳ ಕಾಲ ಅಂದರೆ, ನಿಮಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಸಿಗುವ ತನಕ ನಿಮ್ಮ ಅಡ್ರೆಸ್ ಪ್ರೂಫ್ ಇರುವಂತಹ ದಾಖಲೆಗಳನ್ನ ನೀವು ಜೊತೆಯಲ್ಲಿಟ್ಟುಕೊಳ್ಳಬೇಕಾಗಬಹುದು. ವೋಟರ್ ಐಡಿ, ಅಥವಾ ಆಧಾರ್ ಕಾರ್ಡ್ ನ್ನ ತೋರಿಸಿ ಬಸ್ಸಿನಲ್ಲಿ ನೀವು ಉಚಿತ ಪ್ರಯಾಣ ಮಾಡಬಹುದು ಅನ್ನುವ ಮಾಹಿತಿ ಮಾರ್ಗಸೂಚಿಯಲ್ಲಿ ನೀಡಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply