Scholarship Scheme : ₹10,000/- ರೂಪಾಯಿ ಸ್ಕಾಲರ್ ಶಿಪ್ / 6 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ

Scholarship Scheme : ಕಲಿಯಲು ಆಸಕ್ತಿ ಹೊಂದಿರುವ ಮನೆಯಲ್ಲಿ ಬಡತನವಿರುವ ಮಕ್ಕಳಿಗೆ ಶಾಲಾ-ಕಾಲೇಜುಗಳ ಶುಲ್ಕ ಭರಿಸಲು ಹಾಗು ಇನ್ನಿತರ ಚಟುವಟಿಕೆಗಳಿಗೆ ನೆರವಾಗಲು ವಿದ್ಯಾರ್ಥಿ ವೇತನ(Scholarship)ವು ಸಹಾಯಕವಾಗುತ್ತದೆ. ಅದರಲ್ಲಿಯೂ ಅರ್ಹ ಪ್ರತಿಭಾವಂತ ಹಾಗು ಬಡ ಮಕ್ಕಳಿಗೆ ಸಾಕಷ್ಟು ಸಂಘ ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ವಿದ್ಯಾರ್ಥಿ ವೇತನವನ್ನ ನೀಡುತ್ತದೆ.

Whatsapp Group Join
Telegram channel Join

ಹಾಗೆಯೇ ಎಸ್ ಬಿಐ ಕೂಡ ಎಸ್ ಬಿಐ ಫೌಂಡೇಶನ್ ವತಿಯಿಂದ ಆಶಾ ಸ್ಕಾಲರ್ಶಿಪ್ ಎನ್ನುವ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಅರ್ಹ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳು ಆಶಾ ಸ್ಕಾಲರ್ ಶಿಪ್ ನ ಪ್ರಯೋಜನವನ್ನು ಪಡೆದುಕೊಳ್ಳಿ. ಎಸ್ ಬಿಐ ಫೌಂಡೇಶನ್ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ₹10,000/- ರೂಪಾಯಿಗಳಷ್ಟು ವಿದ್ಯಾರ್ಥಿವೇತನವನ್ನು(Scholarship)ನೀಡುತ್ತಿದೆ. ಎಸ್ ಬಿಐ ಫೌಂಡೇಶನ್ ೨೦೨೩ರ ಆಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ತಕ್ಷಣವೇ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಎಸ್ ಬಿಐ ಫೌಂಡೇಶನ್ ನ ಆಶಾ ಸ್ಕಾಲರ್ ಶಿಪ್ ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.?
  • ಆಶಾ ಸ್ಕಾಲರ್ ಶಿಪ್ ಆರನೇ ತರಗತಿಯಿಂದ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 75% ಕ್ಕೂ ಅಧಿಕ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಆಶಾ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಹರು.
  • ಅರ್ಜಿ ಹಾಕಲು ಇಚ್ಛಿಸುವ ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕ ₹3,00,000/- ರೂ. ಮೀರಿರಬಾರದು.
  • ಅರ್ಹ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಈ ಶೈಕ್ಷಣಿಕ ವರ್ಷ ಶಾಲೆಗೆ ಪಾವತಿಸಿರುವ ಶುಲ್ಕದ ಪುರಾವೆ.
  • ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯ ಪೋಷಕರ ಬ್ಯಾಂಕ್ ಖಾತೆಯ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಗು ವಿದ್ಯಾಥಿಯ ಭಾವಚಿತ್ರ.

ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನೀವು ಆನ್ ಲೈನ್ ಮೂಲಕ ಅಥವಾ ಹತ್ತಿರದ ಸೈಬರ್ ಸೆಂಟರ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಆನ್ ಲೈನ್ ನಲ್ಲಿ ಅರ್ಜಿಯನ್ನ ಭರ್ತಿ ಮಾಡಿದ ಬಳಿಕ ಮೇಲೆ ತಿಳಿಸಿಲಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬೇಕು. ಎಸ್ ಬಿಐ ಫೌಂಡೇಶನ್ ನ ಆಶಾ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಇದೇ ನವೆಂಬರ್ 30, 2023 ಕೊನೆಯ ದಿನಾಂಕವಾಗಿದೆ. ಆದಷ್ಟು ಬೇಗ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಿ ಈ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದುಕೊಳ್ಳಿ.

Whatsapp Group Join
Telegram channel Join

ಈ ವೆಬ್ ಸೈಟ್ ಲಿಂಕ್ ಮೂಲಕವೂ ವಿದ್ಯಾರ್ಥಿವೇತನಕೆ ಅರ್ಜಿಯನ್ನ ಸಲ್ಲಿಸಬಹುದು :-SBIF Asha Scholarship for School Students 2023

SBIF Asha Scholarship Program for School Students 2023

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply