ರಾಜಮೌಳಿ ನಿರ್ದೇಶನದ ಆರ್ಆರ್ಆರ್(RRR) ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆಯನ್ನ ಗಳಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಕೂಡ ಆರ್ಆರ್ಆರ್(RRR)ಗೆ ಸಕಾರಾತ್ಮಕವಾದ ಕಾಮೆಂಟ್ಗಳು ಬಂದಿವೆ. ಹಾಲಿವುಡ್(Hollywood) ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ಆರ್ಆರ್ಆರ್ ಅನ್ನು ಹಾಡಿ ಹೊಗಳಿದ್ದಾರೆ.
ನಮ್ಮ ದೇಶದಿಂದ ಆರ್ಆರ್ಆರ್ ಸಿನಿಮಾ ಆಸ್ಕರ್ ಪ್ರವೇಶಕ್ಕೆ ಆಯ್ಕೆಯಾಗದಿದ್ದರೂ, ಯುಎಸ್ (US) ವಿತರಣಾ ಕಂಪನಿ ನಮ್ಮ ಆರ್ಆರ್ಆರ್ ಸಿನಿಮಾವನ್ನ ಆಸ್ಕರ್ ನಾಮನಿರ್ದೇಶನಕ್ಕೆ ಕಳುಹಿಸಿದೆ.
ಒಟ್ಟಾರೆಯಾಗಿ ಆರ್ಆರ್ಆರ್(RRR) ಚಿತ್ರ ಎಲ್ಲಾ ವಿಭಾಗಗಳಲ್ಲಿ ಆಸ್ಕರ್ಗೆ ಸ್ಪರ್ಧಿಸಲಿದೆ. ಅವರು ಅತ್ಯುತ್ತಮ ನಟ ಹಾಗೂ ನಿರ್ದೇಶಕರ ವಿಭಾಗದಲ್ಲಿ ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತಾರೆಯೇ ಎಂದು ನೋಡೋಣ. ಇದೀಗ ಆರ್ಆರ್ಆರ್(RRR) ಸಿನಿಮಾದ ಬಗ್ಗೆ ಮತ್ತೊಂದು ಹೊಸ ಚರ್ಚೆಯೊಂದು ಶುರುವಾಗಿದೆ. ಸಿನಿಮಾತಂಡ ಇತ್ತೀಚೆಗೆ ಈ ಸಿನಿಮಾವನ್ನ ಜಪಾನ್ನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದೆ. ರಾಜಮೌಳಿ, ಎನ್ಟಿಆರ್, ಹಾಗು ರಾಮ್ ಚರಣ್ ತಮ್ಮ, ತಮ್ಮ ಕುಟುಂಬ ಸಮೇತ ಅಲ್ಲಿಗೆ ತೆರಳಿ ಅಲ್ಲಿಯೇ ಉಳಿದು ಪ್ರಚಾರ ನಡೆಸಿದ್ದಾರೆ. ಚಿತ್ರ ಕೂಡ ಹಿಟ್ ಆಗಿದ್ದು, ಉತ್ತಮ ಕಲೆಕ್ಷನ್ ಮಾಡುತ್ತಿದೆಯಂತೆ. ಈಗ ಆರ್ಆರ್ಆರ್(RRR) ಭಾಗ 2 ಕುರಿತಾದ ಮಾತುಗಳು ಕೇಳಿ ಬರುತ್ತಿವೆ.
ಇನ್ನು ನನ್ನ ಎಲ್ಲಾ ಸಿನಿಮಾಗಳಿಗೆ ನನ್ನ ತಂದೆಯೇ ಕಥೆಗಳನ್ನು ಬರೆಯುತ್ತಾರೆ. ಆರ್ಆರ್ಆರ್(RRR)-2 ಗಾಗಿ ನಾವಿಬ್ಬರೂ ಚರ್ಚಿಸಿದ್ದೇವೆ. ಈ ಕಥೆಯ ಮೇಲೆ ತಂದೆಯವರು ಗಮನಹರಿಸಿದ್ದಾರೆ ಎಂದು ರಾಜಮೌಳಿ ಸೀಕ್ವೆಲ್ ಬಗ್ಗೆ ಸುಳಿವು ನೀಡಿದ್ದಾರೆ. ಆರ್ಆರ್ಆರ್(RRR) ಚಿತ್ರದಲ್ಲಿ ರಾಮ್-ಭೀಮ್ ಇಬ್ಬರೂ ಗೆಳೆಯರು. ಇಬ್ಬರೂ ಒಬ್ಬರಿಗೊಬ್ಬರು ಜೀವ ಕೊಡುವಂತಹ ಗೆಳೆಯರು. ಆದರೆ ಒಬ್ಬರನ್ನೊಬ್ಬರು ಸೋಲಿಸಲೇಬೇಕಾದ ಸನ್ನಿವೇಶಗಳು ಈ ಚಿತ್ರದಲ್ಲಿ ಬರುತ್ತವೆ. ಕೊಲ್ಲುವ ಹಂತಕ್ಕೆ ಬರುತ್ತಾರೆ. ಮತ್ತೊಬ್ಬರನ್ನು ಮಾಡಬೇಕೆಂದರೆ. ಸಿನಿಮಾ.. ಎರಡನ್ನೂ ತೋರಿಸೋದು ಹೇಗೆ.. ಹೇಗೆ ಕನ್ವಿನ್ಸ್ ಮಾಡೋದು.. ಮತ್ತೆ ಯಾವ ಕಾರಣಕ್ಕೆ ಒಬ್ಬರನ್ನೊಬ್ಬರು ಹೊಡೆದುಕೊಳ್ಳೋದು.. ಇನ್ನು ನಾಟು ನಾಟು ಹಾಡಿನ ರೀತಿ ಇನ್ನೊಂದು ಹಾಡನ್ನು ಹೇಗೆ ಹಾಕಲಿ ಎಂದಿದ್ದಾರೆ.
ಆದರೆ ನಿರ್ದೇಶಕ ರಾಜಮೌಳಿ ಈಗ ಖ್ಯಾತ ನಟ ಮಹೇಶ್ ಬಾಬು ಜೊತೆ ಚಿತ್ರ ಮಾಡಲು ರೆಡಿಯಾಗಿದ್ದಾರೆ. ಈ ಕಥೆ ಇನ್ನೂ ಅಂತಿಮಗೊಳಿಸಲಾಗಿಲ್ಲ. ಆರ್ಆರ್ಆರ್(RRR) ಅಂತಹ ಕಥೆ ಈಗ ಬರುವುದಿಲ್ಲ ಎನ್ನುತ್ತಾರೆ ನೆಟಿಜನ್ಗಳು. ರಾಜಮೌಳಿ ಯಾವ ರೀತಿಯ ಪ್ಲಾನ್ ಮಾಡುತ್ತಾರೋ ಕಾದು ನೋಡೋಣ. ಏನಂತೀರಾ.?
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
- Pedicure : ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ, ಸುಂದರವಾದ ಪಾದ ನಿಮ್ಮದಾಗಿಸಿಕೊಳ್ಳಿ
- Donkey Milk : ಕತ್ತೆ ಹಾಲು ಒಂದು ಲೀಟರ್ಗೆ ₹5,000/-..? ಕತ್ತೆ ಹಾಲು ಏಕೆ ಇಷ್ಟೊಂದು ದುಬಾರಿ.? ಕತ್ತೆ ಹಾಲಿನ ಉಪಯೋಗವೇನು.?
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate : ಇಂದಿನ ಗೋಲ್ಡ್ ರೇಟ್ ಇಳಿಕೆ ಕಂಡಿದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ಬೆಲೆ.?
- MGNREGA : ರೈತರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ 2 ಲಕ್ಷ ಸಹಾಯಧನಕ್ಕಾಗಿ ಅರ್ಜಿ | ಗ್ರಾಮೀಣ ರೈತರಿಗೆ ಗುಡ್ ನ್ಯೂಸ್.!