Dhruva Sarja : ಚಿಕ್ಕಪ್ಪ ಧ್ರುವ ಸರ್ಜಾ ಜೊತೆ ಸಕ್ಕತ್ ಆಗಿ ಡಾನ್ಸ್ ಮಾಡಿದ ರಾಯನ್ / ಧ್ರುವ ಸರ್ಜಾ ರಿಯಾಕ್ಷನ್ ನೋಡಿ

Dhruva Sarja : ಕನ್ನಡದ ಹೆಸರಾಂತ ಯುವ ನಟ ಧ್ರುವ ಸರ್ಜಾ ಅಕ್ಟೋಬರ್ 6ರಂದು ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಾನಾ ಕಾರಣಗಳಿಂದಾಗಿ ಮೂರು ವರ್ಷಗಳಿಂದ ಧ್ರುವ ಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷ ಬೆಂಗಳೂರಿನ ಬಸವನಗುಡಿಯ ತಮ್ಮ ನಿವಾಸದಲ್ಲಿ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Traffic Fine : ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ.! ವಾಹನ ಸವಾರರಿಗೆ ಗುಡ್ ನ್ಯೂಸ್!

Rayan danced as Sakkat with uncle Dhruva Sarja

ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿದ್ದರು. ಧ್ರುವ ಸರ್ಜಾ ಅವರ ಬರ್ತ್ ಡೇಗೆ ಮೇಘನಾ ರಾಜ್ ಅವರ ಮಗ ಉಡುಗೊರೆ ಕೊಟ್ಟಿದ್ದಾನೆ ಗೊತ್ತಾ.? ಧ್ರುವ ಸರ್ಜಾ ತುಂಬಾನೇ ಖುಷಿಯಾಗಿದ್ದಾರೆ. ನೆಚ್ಚಿನ ನಟನನ್ನು ನೋಡಲು ರಾತ್ರಿಯಿಂದಲೇ ಅಭಿಮಾನಿಗಳು ಧ್ರುವ ಸರ್ಜಾ ಮನೆಯ ಮುಂದೆ ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನಿಗೆ ಶುಬಾಶಯಗಳನ್ನು ಕೋರಿ ಸಂಭ್ರಮಿಸಿದ್ದರು.

Whatsapp Group Join
Telegram channel Join

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧ್ರುವ ಸರ್ಜಾ, ಈ ಹುಟ್ಟುಹಬ್ಬಕ್ಕೆ ಅಣ್ಣ ಚಿರಂಜೀವಿ ಸರ್ಜಾ ಅವರ ರಾಜಮಾರ್ತಾಂಡ ಸಿನಿಮಾ ರಿಲೀಸ್ ಆಗುತ್ತಿರುವುದೇ ದೊಡ್ಡ ವಿಚಾರ. ಮೂರು ವರ್ಷಗಳ ನಂತರ ಅಣ್ಣನ ಸಿನಿಮಾ ತೆರೆಗೆ ಬರುತ್ತಿದೆ. ಹುಟ್ಟುಹಬ್ಬಕ್ಕಿಂತ ಅದೇ ನನಗೆ ದೊಡ್ಡದು. ಅಣ್ಣನನ್ನು ತೆರೆಯ ಮೇಲೆ ನೋಡುವುದೇ ಒಂದು ಸಂಭ್ರಮ ಎಂದಿದ್ದಾರೆ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮೀ ಎರಡನೇ ಕಂತಿನ ₹೪,೦೦೦/- ರೂಪಾಯಿ ಹಣ ಬಿಡುಗಡೆ.? ನೀವು ಈ ಕೆಲಸ ಮಾಡುವುದು ಕಡ್ಡಾಯ.!

ಈ ಹುಟ್ಟುಹಬ್ಬಕ್ಕೆ ಚಿರಂಜೀವಿ ಸರ್ಜಾ ಅವರ ಸಿನಿಮಾ ರಿಲೀಸ್ ಆಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಗಣೇಶನ ಹಬ್ಬದಂದು ಮನೆಗೆ ಧ್ರುವ ಸರ್ಜಾ ಅವರ ಪುತ್ರ ಬಂದಿದ್ದಾರೆ.ಹೀಗಾಗಿ ಡಬಲ್ ಉಡುಗೊರೆಯನ್ನೇ ಧ್ರುವ ಸರ್ಜಾ ಪಡೆದಿದ್ದಾರೆ. ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಂತರ ಅತ್ತಿಗೆ ಮೇಘನಾ ರಾಜ್ ಹಾಗು ರಾಯಣ್ ಜೊತೆಗೆ ಥೀಯೇಟರ್ ಗೆ ಬಂದು ರಾಜಮಾರ್ತಾಂಡ ಸಿನಿಮಾವನ್ನು ವೀಕ್ಷಿಸಿದ್ದಾರೆ ಧ್ರುವ ಸರ್ಜಾ. ಈ ವೇಳೆ ರಾಯನ್ ಧ್ರುವ ಸರ್ಜಾ ಅವರ ಎರಡು ಕೆನ್ನೆಗೆ ಮುತ್ತು ಕೊಟ್ಟು ಹುಟ್ಟುಹಬ್ಬದ ಶುಬಾಶಯ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply