Ration Card Updates : ರೇಷನ್ ಕಾರ್ಡ್ ರದ್ದು.! ಬಿಪಿಎಲ್ ಕಾರ್ಡ್ ಇದ್ದವರು ಈ ಕೆಲಸವನ್ನ ಕಡ್ಡಾಯವಾಗಿ ಮಾಡಿಕೊಳ್ಳಿ

Ration Card Updates : ನಿಮ್ಮ ಮನೆಯಲ್ಲಿ ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಈ ಮೂರು ರೇಷನ್ ಕಾರ್ಡ್ ನಲ್ಲಿ ಯಾವುದೇ ಒಂದು ನೀವು ಪಡೆದಿದ್ದರೆ ನಿಮಗೂ ಕೂಡ ಸರ್ಕಾರದಿಂದ ದೊರಕುವಂತಹ ಎಲ್ಲ ಯೋಜನೆಗಳ ಪ್ರಯೋಜನ ಸಿಗುತ್ತದೆ. ನಿಮ್ಮ ಹತ್ತಿರ ಇರುವ ರೇಷನ್ ಕಾರ್ಡ್ ನಿಂದ ನಿಮಗೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೆಲಸ ಆಗಬೇಕಾದರೆ ನಿಮಗೆ ತುಂಬಾ ಈ ಕಾರ್ಡ್ ಪ್ರಯೋಜನವಾಗುತ್ತದೆ.

Whatsapp Group Join
Telegram channel Join

ಈ ರೇಷನ್ ಕಾರ್ಡ್ ಪಡಿತರ ಪಡೆದುಕೊಳ್ಳಲು ಮಾತ್ರವಲ್ಲದೇ ಒಬ್ಬ ವ್ಯಕ್ತಿಯ ಗುರುತಿನ ಚೀಟಿಯಾಗಿ ಈ ಕಾರ್ಡ್ ಕೆಲಸ ಮಾಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗೆ ರೇಷನ್ ಕಾರ್ಡ್ ಬೇಕೆಂದು ಸರ್ಕಾರ ಕಡ್ಡಾಯವಾಗಿ ತಿಳಿಸಿದೆ.

ಇದನ್ನೂ ಕೂಡ ಓದಿ : Govt New Update : ಭರ್ಜರಿ ಕೊಡುಗೆ.! ಇನ್ಮುಂದೆ ಗ್ರಾಮೀಣ ಜನತೆಗೆ ಗ್ರಾಮ ಪಂಚಾಯತ್ ನಲ್ಲಿಯೇ ಎಲ್ಲಾ ಸೇವೆ ಸೌಲಭ್ಯ ಸಿಗುತ್ತೆ.!

Whatsapp Group Join
Telegram channel Join

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ

ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಬೇಕಾದರೆ ಅವರ ಹೆಸರಿನಲ್ಲಿ ರೇಷನ್ ಕಾರ್ಡ್ ಇರಬೇಕು. ಇದರಿಂದಾಗಿ ಮೂರು ಬಾರಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರ ಅವಕಾಶ ಮಾಡಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡುವವರಿಗೆ ಸರ್ಕಾರ ನವೆಂಬರ್ ತಿಂಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದೆ.

ರೇಷನ್ ಕಾರ್ಡ ನಲ್ಲಿ ಮಹಿಳೆಯರ ಹೆಸರನ್ನು ಮೊದಲನೇ ಜಾಗದಲ್ಲಿ ಸೇರಿಸುವುದು, ಹೆಸರು ಬದಲಾವಣೆ ಮಾಡುವುದು, ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ ಮಾಡುವುದು ಸೇರಿದಂತೆ ಹೀಗೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಯನ್ನು ಸರಿ ಮಾಡಿಸಿಕೊಳ್ಳುವುದು. ರೇಷನ್ ಕಾರ್ಡ್ ತಿದ್ದುಪಡಿಯ ಸಂದರ್ಭದಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ಸರ್ಕಾರದ ಅರಿವಿಗೆ ಬಂದಿದೆ.

ಇದನ್ನೂ ಕೂಡ ಓದಿ : Shivarajkumar : ಶಿವಣ್ಣ ಮತ್ತೆ ಆಸ್ಪತ್ರೆಗೆ ದಾಖಲು / ಶಿವಣ್ಣನಿಗೆ ಏನಾಯ್ತು ಗೊತ್ತಾ.? ಆತಂಕದಲ್ಲಿ ಅಭಿಮಾನಿಗಳು

ನಕಲಿ ರೇಷನ್ ಕಾರ್ಡ್ ಗೆ ಬ್ರೇಕ್ ಹಾಕಲು ಸರ್ಕಾರದ ಸಿದ್ಧತೆ

ಕೆಲವು ಜನರು ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಳ್ಳಲು ನಕಲಿ ರೇಷನ್ ಕಾರ್ಡ್ ಅನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮ ರೇಷನ್ ಕಾರ್ಡ್ ನಲ್ಲಿ ರಕ್ತ ಸಂಬಂಧಿಗಳಲ್ಲದೇ ಇರುವ ಹಾಗೂ ಕುಟುಂಬದಲ್ಲಿ ಸಂಬಂಧಿವಿಲ್ಲದೇ ಇರುವ ಸದಸ್ಯರ ಹೆಸರನ್ನು ಕೂಡ ಸೇರಿಸುತ್ತಿದ್ದಾರೆ. ಹಾಗೂ ಒಂದೇ ಮನೆಯಲ್ಲಿ ಮಕ್ಕಳು ಬೇರೆ ಬೇರೆ ರೇಷನ್ ಕಾರ್ಡ್ ಪಡೆದಿರುವ ಹೆಸರನ್ನು ಕೂಡ ತೆಗೆದು ಹಾಕುತ್ತಿದ್ದಾರೆ. ರೇಷನ್ ಕಾರ್ಡ್ ತಿದ್ದುಪಡಿಯ ಮುಖ್ಯ ಉದ್ದೇಶ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು. ಆಹಾರ ಇಲಾಖೆಯ ಗಮನಕ್ಕೆ ಕೂಡ ಇದು ಬಂದಿದ್ದು, ನಕಲಿ ರೇಷನ್ ಕಾರ್ಡ್ ನ ವಂಚನೆ ದಾಖಲಾಗಿದ್ದಲ್ಲಿಯೇ ಅಂತವರಿಗೆ ಯಾವುದೇ ನೋಟಿಸ್ ನೀಡದೆ ಸರ್ಕಾರ ರದ್ದು ಪಡಿಸುವುದೆಂದು ತೀರ್ಮಾನಿಸಿದೆ.

ಇದನ್ನೂ ಕೂಡ ಓದಿ : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

ಡೆಡ್ ಲೈನ್ ನೀಡಿದ ಸರ್ಕಾರ

ಸರ್ಕಾರದ ಡೇಟಾ ಬೇಸ್ ನಲ್ಲಿ ರೇಷನ್ ಕಾರ್ಡ್ ಅಪ್ಡೇಟ್ ಆಗಿರಬೇಕು. ಯಾವುದು ನಕಲಿ ಯಾವುದು ಅಸಲು ಎಂದು ತಿಳಿಯಲು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು. ರೇಷನ್ ಕಾರ್ಡ್ ಸಂಪೂರ್ಣ ಬಯೋಮೆಟ್ರಿಕ್ ಆಧಾರಿತವಾಗಿದ್ದು, ನ್ಯಾಯ ಬೆಲೆಯ ಅಂಗಡಿಯಲ್ಲಿ ರೇಷನ್ ಪಡೆದುಕೊಳ್ಳಲು ನಿಮ್ಮ ಬೆರಳಚ್ಚು ಇಲ್ಲದೆ ರೇಷನ್ ನೀಡುವುದಿಲ್ಲ.

ಕೆವೈಸಿಯನ್ನು ಮಾಡಲು ಸರ್ಕಾರ ಸೆಪ್ಟೆಂಬರ್ 30ರ ಒಳಗೆ ಅವಕಾಶ ನೀಡಿತ್ತು. ಹಾಗೂ ಬಯೋಮೆಟ್ರಿಕ್ ಸಾಕಷ್ಟು ಕಡೆಯಲ್ಲಿ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಎಲ್ಲರ ಕೆವೈಸಿ ಆಗಿಲ್ಲ. ಇದಕ್ಕಾಗಿ ಡಿಸೆಂಬರ್ 30ರ ವರೆಗೆ ಸರ್ಕಾರ ಮತ್ತೆ ಪುನ ಅವಕಾಶ ಮಾಡಿಕೊಟ್ಟಿದೆ. ನೀವು ಈ ವರ್ಷದಲ್ಲಿ ರೇಷನ್ ಕಾರ್ಡ್ ನ ಕೆವೈಸಿ ಮಾಡದೇ ಇದ್ದಲ್ಲಿ ನಿಮಗೆ ಸರ್ಕಾರದ ಯೋಜನೆಯಿಂದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಹಾಗು ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು.

ಇದನ್ನೂ ಕೂಡ ಓದಿ : ಲುಂಗಿ ಹಾಕಿಕೊಂಡು 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ ಮ್ಯಾನೇಜರ್ ಬೈದು ಆಚೆ ತಳ್ಳಿದ / ಆಗ ರೈತ ಮಾಡಿದ್ದೇನು ನೋಡಿ.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply