Ration Card : ರೇಷನ್ ಕಾರ್ಡ್ ಗಾಗಿ ಕಾದು ಸುಸ್ತಾಗಿದ್ದೀರಾ. ಇದೀಗ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.! ಅರ್ಹರು ಬೇಗ ಅರ್ಜಿ ಸಲ್ಲಿಸಿ.

Ration Card : ನಮಸ್ಕಾರ ಸ್ನೇಹಿತರೇ, ಆಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಾರ್ವಜನಿಕರಿಗೆ ಹೊಸ BPL ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಹೇಗೆ ಎಂಬುದರ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.

ಯಾವ ದಿನ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ? ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ? ಇದೆಲ್ಲದರ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.

BPL ರೇಶನ್ ಕಾರ್ಡ ಪಡೆಯಲು ಅರ್ಹತಾ ಮಾನದಂಡಗಳೇನು?
ಅರ್ಜಿದಾರರ ವಾರ್ಷಿಕ ಆದಾಯವು 1.2 ಲಕ್ಷವನ್ನು ಮೀರಿರಬಾರದು.
7.5 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಹೊಂದಿರಬಾರದು.
ಅರ್ಜಿದಾರರು ವೈಟ್ ಬೋರ್ಡ್ ಕಾರು ಹೊಂದಿರಬಾರದು.
ಯಾವುದೇ ರಾಜ್ಯ & ಕೇಂದ್ರ ಸರ್ಕಾರದ ನೌಕರ ಅಗಿರಬಾರದು.
ನಗರ ಪ್ರದೇಶ ವ್ಯಾಪ್ತಿಯಲ್ಲಿ ಮನೆಯ ವಿಸ್ತೀರ್ಣ 1000 sq.ft ಮೀರಿರಬಾರದು.
ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT Returns ಪಾವತಿದಾರರಾಗಿರಬಾರದು.

ಯಾವ ದಿನ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?
ಹೊಸ BPL ಕಾರ್ಡ್ ಪಡೆಯಲು ಅರ್ಹ ನಾಗರಿಕರಿಗೆ ಅರ್ಜಿ ಸಲ್ಲಿಸಲು ದಿನಾಂಕ: 09 ಮಾರ್ಚ 2024 ರಂದು ಸಮಯ ಬೆಳಿಗ್ಗೆ 10 ರಿಂದ 12 ಗಂಟೆ ವರೆಗೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?
ನಾಗರಿಕರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರ ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರಗಳನ್ನು ಭೇಟಿ ಮಾಡಿ ನಿಗದಿಪಡಿಸಿದ ಸಮಯದಲ್ಲಿ ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್(Aadhar card)
ಮನೆ ಯಾಜಮನಿಯ ಆದಾಯ ಪ್ರಮಾಣ ಪತ್ರ (ಆದಾಯದ ಮಿತಿ 120000/-)
ಎಲ್ಲರ ಆಧಾರ್ ಲಿಂಕ್ ಇರುವ ಮೋಬೈಲ್ ಫೋನ್ ಗಳು (mobile phone)
ಎಲ್ಲಾ ಕುಟುಂಬಸ್ಥರು ಹಾಜರಿರಬೇಕಾಗುತ್ತದೆ.
ಮನೆಯ ಕರೆಂಟ್ ಬಿಲ್ & ಕಂದಾಯ ರಶೀದಿ (ಬಾಡಿಗೆ ಮನೆ ಆಗಿದ್ದಲ್ಲಿ ಮನೆ ಬಾಡಿಗೆ ಕರಾರು & ಕರೆಂಟ್ ಬಿಲ್)

ರೇಶನ್ ಕಾರ್ಡ್ ತಿದ್ದುಪಡಿಗೂ ಅವಕಾಶ:
ಹೊಸ ರೇಶನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದರ ಜೊತೆಗೆ ರೇಶನ್ ಕಾರ್ಡ್ ತಿದ್ದುಪಡಿಗೂ ಅವಕಾಶ ನೀಡಲಾಗಿದ್ದು ದಿನಾಂಕ: 09 ಮಾರ್ಚ್ 2024 ರಂದು ಸಮಯ 2-00 – 4-00 ಗಂಟೆಯವರೆಗೆ ತಿದ್ದುಪಡಿ ಮಾಡಿಕೊಳ್ಳಲು ಅವಶ್ಯವಿರುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಹಾರ ಇಲಾಖೆಯಿಂದ ರೇಶನ್ ಕಾರ್ಡ್ ತಿದ್ದುಪಡಿ & ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಈ ಬಾರಿಯೇ ಕೊನೆಯದಾಗಿರುವುದಿಲ್ಲ ಮುಂದಿನ ದಿನದಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಸಧ್ಯ ಮಾಹಿತಿ ತಿಳಿದವರು ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ತಡವಾಗಿ ಮಾಹಿತಿ ಪಡೆದವರು ಮುಂದಿನ ದಿನಗಳಲ್ಲಿ ಮತ್ತೆ ಅವಕಾಶ ನೀಡಿದಾಗ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ಸೈಟ್ ಭೇಟಿ ನೀಡಲು: https://ahara.kar.nic.in/

Leave a Comment