PM Ujjwala Yojana : ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಹೊಸ ಗ್ಯಾಸ್ ಸಂಪರ್ಕ.!

PM Ujjwala Yojana : ಸರ್ಕಾರದಿಂದ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಪಡೆಯದೇ ಇರುವ ದೇಶದ ಎಲ್ಲ ಬಡ ಜನರಿಗೆ ಕೇಂದ್ರ ಸರ್ಕಾರದಿಂದ ಭಾರೀ ದೊಡ್ಡ ಶುಭ ಸುದ್ದಿ ನೀಡಿದೆ. ನಿಮ್ಮ ಬಳಿ ಈಗಾಗಲೇ ಬಿಪಿಎಲ್, ಅಂತ್ಯೋದಯ ಅಥವಾ ಎಪಿಎಲ್ ರೇಷನ್ ಕಾರ್ಡ್ ಇರುವ ಹೊಂದಿರುವವರಿಗೆ ಸರ್ಕಾರದಿಂದ ಇಲ್ಲಿಯವರೆಗೂ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಸಿಕ್ಕಿಲ್ಲ ಅಂದರೆ ತಪ್ಪದೆ ಈ ಮಾಹಿತಿಯನ್ನ ನೋಡಿ. ಈ ಬಾರಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಗಳನ್ನ ನೀಡಲಾಗುತ್ತಿದ್ದು, ಇದರಲ್ಲಿ ದೊರೆಯುವ ವಸ್ತುಗಳೆಂದರೆ ತುಂಬಿದ ಸಿಲೆಂಡರ್, ಒಂದು ಒಲೆ, ಒಂದು ರೇಗುಲೇಟರ್, ಒಲೆ ಹಚ್ಚುವ ಲೈಟರ್, ಬಳಕೆ ಮಾಡುವ ಕೈಪಿಡಿ ಪುಸ್ತಕ ಸೇರಿದಂತೆ ಇನ್ನೂ ಇತರೆ ಸಾಮಗ್ರಿಗಳು ಒಳಗೊಂಡಿರುವ ಸಂಪೂರ್ಣ ಗ್ಯಾಸ್ ಕಿಟ್ ದೊರೆಯುತ್ತದೆ.

Whatsapp Group Join
Telegram channel Join
PM Ujjwala Yojana
PM Ujjwala Yojana

ಇದನ್ನೂ ಕೂಡ ಓದಿ : Vehicle Scheme : 2023-24ನೇ ಸಾಲಿನ ಸರಕು ಸಾಗಾಣಿಕೆ ವಾಹನ / ಟ್ಯಾಕ್ಸಿ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.!

ದೇಶದ 75 ಲಕ್ಷ ಮನೆಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕಕ್ಕಾಗಿ 1650 ಕೋಟಿ ರೂಪಾಯಿ ಮೀಸಲಿಡಲು ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ದೇಶಾದ್ಯಂತ ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಅಡಿಯಲ್ಲಿ ಕೇಂದ್ರ ಸರ್ಕಾರವು 2016 ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೊಳಿಸಿದೆ. ಇದೇ ಯೋಜನೆ ಅಡಿಯಲ್ಲಿ ಎಲ್ಪಿಜಿ ಸಿಲೆಂಡರ್ ಗೆ ಸಬ್ಸಿಡಿಯನ್ನ ನೀಡಲಾಗುತ್ತಿದೆ. ಈಗ ಉಜ್ವಲ ಯೋಜನೆ ಅನ್ವಯ ದೇಶದ 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಹೆಚ್ಚಿನ ಹಣ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಉಜ್ವಲ ಯೋಜನೆ ಅಡಿಯಲ್ಲಿ ಒಂದು ಸಿಲಿಂಡರ್ ಗೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಯು 400 ರೂಪಾಯಿ ಗೆ ಏರಿಕೆಯಾಗಿದೆ. ಇದೆ ವೇಳೆ 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಕುರಿತು ಕೇಂದ್ರ ಸರ್ಕಾರ ಘೋಷಿಸಿದೆ.

Whatsapp Group Join
Telegram channel Join
PM Ujjwala Yojana
PM Ujjwala Yojana

ಇದನ್ನೂ ಕೂಡ ಓದಿ : Vehicle Scheme : 2023-24ನೇ ಸಾಲಿನ ಸರಕು ಸಾಗಾಣಿಕೆ ವಾಹನ / ಟ್ಯಾಕ್ಸಿ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.!

ನೀವು ಇನ್ನೂ ಕೂಡ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಾಗಿ ಉಚಿತ ಎಲ್ ಪಿಜಿ ಗ್ಯಾಸ್ ಪಡೆದುಕೊಂಡಿಲ್ಲ ಅಂದರೆ ನಿಮ್ಮ ಹತ್ತಿರದ ಭಾರತ್ ಗ್ಯಾಸ್ ಅಥವಾ ಇಂಡಿಯನ್ ಗ್ಯಾಸ್ ಅಥವಾ ಹೆಚ್.ಪಿ ಗ್ಯಾಸ್ ಸೇರಿದಂತೆ ಯಾವುದೇ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ. ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಪ್ರತಿ, ಒಂದು ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರ ದೊಂದಿಗೆ ಏಜೆನ್ಸಿಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಈ ಅರ್ಜಿಗಳು ಮುಂದಿನ ತಿಂಗಳಿನಿಂದ ಆರಂಭಗೊಳ್ಳುತ್ತಿದ್ದು, ಇದಕ್ಕೆ ಎಲ್ಲರೂ ಸಹ ಅರ್ಜಿಯನ್ನ ಸಲ್ಲಿಸ ಬಹುದಾಗಿದೆ. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯನ್ನ ಸಂಪರ್ಕಿಸಿ. ಸರ್ಕಾರದಿಂದ ಗ್ಯಾಸ್ ಪಡೆಯುವುದರ ಇನ್ನೊಂದು ಲಾಭವೇನೆಂದರೆ ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್ ಗಳಿಗೆ ಸಬ್ಸಿಡಿ ಹಣ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾವಾಗುತ್ತವೆ. ಸದ್ಯಕ್ಕೆ ಗ್ಯಾಸ್ ಸಿಲಿಂಡರ್ ಗೆ 4೦೦ ರೂಪಾಯಿ ಹಣ ಸಬ್ಸಿಡಿಯನ್ನಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು ಮುಂದೆ ಕೇಂದ್ರ ಸರ್ಕಾರ ಹೆಚ್ಚಿಸುವ ಸಾಧ್ಯತೆ ಇದೆ.

PM Ujjwala Yojana

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..