PM Matra Vandana Scheme : ಗರ್ಭಿಣಿ ಹಾಗು ಬಾಣಂತಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಸರ್ಕಾರ

PM Matra Vandana Scheme : ನಮಸ್ಕಾರ ಸ್ನೇಹಿತರೇ, ಎಲ್ಲ ವರ್ಗದ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನ್ನ ಇದೀಗ ರಾಜ್ಯ ಸರ್ಕಾರ ನೀಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಮಾತೃ ವಂದನ ಯೋಜನೆ ಅಡಿಯಲ್ಲಿ ಇದೀಗ ₹6,000/- ಪಡೆಯಲು ಹೀಗೆ ನೋಂದಣಿ ಮಾಡಿಕೊಳ್ಳಿ ಎಂದು ಅಧಿಕೃತವಾಗಿ ಇದೀಗ ರಾಜ್ಯ ಸರಕಾರ ಮಾಹಿತಿ ನೀಡಿದೆ.

Whatsapp Group Join
Telegram channel Join

ಹೌದು, ಒಟ್ಟು ₹11,000/- ಸೇರಿದಂತೆ ಇನ್ನು ವಿವಿಧ ರೀತಿಯ ಬಾಣಂತಿ ಕಿಟ್ ಹಾಗು ಹಲವು ಲಾಭಗಳು ಈ ಯೋಜನೆಯ ಮೂಲಕ ಸಿಗುತ್ತಿದ್ದು, ಏನಿದು ಮಾಹಿತಿ? ಮಾತೃ ವಂದನ ಯೋಜನೆ ಹೇಗೆ ಅರ್ಜಿ ಸಲ್ಲಿಸುವುದು? ಏನೆಲ್ಲಾ ದಾಖಲಾತಿಗಳು ಬೇಕಾಗುತ್ತವೆ.? ಹಾಗೂ ಎಲ್ಲಿ ಅರ್ಜಿ ಸಲ್ಲಿಸುವುದು? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Property Loan : ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ / ಹೊಸ ನಿಯಮ ಜಾರಿಗೊಳಿಸಿದ ಆರ್ ಬಿಐ.!

Whatsapp Group Join
Telegram channel Join

ಕೇಂದ್ರ ಸರ್ಕಾರದ ಈ ಮಾತೃ ವಂದನ ಯೋಜನೆ ಅಡಿಯಲ್ಲಿ ಅರ್ಹ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧೀನದಲ್ಲಿ ಒಟ್ಟು ₹11,000/- ನೀಡಲಾಗುತ್ತಿದೆ. ಹೌದು, ಈ ಯೋಜನೆಯ ಅಡಿ ಮೊದಲ ಪ್ರಸವದ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ₹5,000/- ರೂ. ಹಣವನ್ನ ಡಿಬಿಟಿ ಮೂಲಕ ನೀಡಲಾಗುತ್ತಿದ್ದು, ಇನ್ನು ಎರಡನೆಯ ಪ್ರಸವ ದಲ್ಲಿ ₹6,000/- ರೂ. ಪ್ರೋತ್ಸಾಹಧನವನ್ನ ಡಿಬಿಟಿ ಮೂಲಕ ನೀಡಲಾಗುತ್ತಿದೆ.

ಗರ್ಭಿಣಿ ಬಾಣಂತಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಪಡೆಯಲು ಹಾಗೂ ಆರೋಗ್ಯವಂತ ಮಗುವಿನ ಜನನ ಪಾಲನೆಗೆ ಈ ಸಹಾಯಧನ ಸಹಕಾರಿಯಾಗಲಿದೆ. ಈ ಯೋಜನೆಯ ಲಾಭವನ್ನು ಹೇಗೆ ಪಡೆಯುವುದೆಂದರೆ, ನಿಗದಿತ ನಮೂನೆಯ ಅರ್ಜಿಯನ್ನ ಭರ್ತಿ ಮಾಡಿ ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್ ಅಂದ್ರೆ ತಾಯಿ ಕಾರ್ಡ್ ಪಡೆದುಕೊಂಡು ಫಲಾನುಭವಿಯ ಆಧಾರ್ ಕಾರ್ಡ್ ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಇನ್ನು ವಿವಿಧ ಬಗೆಯ ದಾಖಲಾತಿ, ಫೋಟೋ ಅಟ್ಯಾಚ್ ಮಾಡುವ ಮೂಲಕ ಈ ಯೋಜನೆಯ ಲಾಭ ಪಡೆಯಿರಿ.

ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಈ ಕೆಲಸ ಮಾಡುವುದು ಕಡ್ಡಾಯ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!

ಇನ್ನೂ ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ಮಾಡಿ ಅಥವಾ ನಿಮ್ಮ ವಲಯದ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ. ಹೀಗಾಗಿ ಆದಷ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ, ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply