PM Kisan : ಕಿಸಾನ್ ಸಮ್ಮಾನ್ ನಲ್ಲಿ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿ | ರೈತರು ತಪ್ಪದೆ ಓದಿ

PM Kisan : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎಲ್ಲಾ ರೈತ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಶಾಕ್.! ಪಿ ಎಂ ಕಿಸಾನ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಜಾರಿ. ಕೇಂದ್ರ ಸರ್ಕಾರವು ಜಾರಿ ಗೊಳಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ವರ್ಷಕ್ಕೆ 6,000/- ರೂಪಾಯಿಗಳನ್ನು ರೈತರ ಖಾತೆಗಳಿಗೆ ನೀಡಲಾಗುತ್ತಿದ್ದು, ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಮೇಲಿಂದ ಮೇಲೆ ಹೊಸ ಹೊಸ ಬದಲಾವಣೆಗಳನ್ನ ಜಾರಿಗೊಳಿಸುತಿದ್ದು, ಅರ್ಹ ರೈತ ಫಲಾನುಭವಿಗಳಿಗೆ ಮಾತ್ರ ಈ ಸೌಲಭ್ಯ ದೊರೆಯಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯವಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : PM Ujjwala Yojana : ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಹೊಸ ಗ್ಯಾಸ್ ಸಂಪರ್ಕ.!

ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಹಾಗು ಇಲ್ಲಿಯವರೆಗೆ ಈ ಯೋಜನೆಯ 14 ಕಂತುಗಳನ್ನೂ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರತೀ ಕಂತಿನ ಹಣವನ್ನು ಅರ್ಹ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಕಳುಹಿಸಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ತಲಾ 2,000/- ರೂಪಾಯಿಗಳ 3 ಕಂತುಗಳನ್ನೂ, ಅಂದರೆ ವಾರ್ಷಿಕವಾಗಿ ಒಟ್ಟು 6,000/- ರೂಪಾಯಿಗಳನ್ನು ಪ್ರತಿ ಫಲಾನುಭವಿಗಳಿಗೆ ನೀಡಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ ಪಿ ಎಂ ಕಿಸಾನ್ ಯೋಜನೆ ಅಡಿ ಪ್ರಯೋಜನೆಗಳನ್ನು ಅನರ್ಹ ಫಲಾನುಭವಿಗಳು ಪಡೆಯುತ್ತಿರುವುದು ಕಂಡು ಬಂದಿದೆ. ಈ ಹಿನ್ನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Agricultural Land :ಕೃಷಿ ಭೂಮಿಯಲ್ಲಿ ಮನೆ ಕಟ್ಟಿದವರಿಗೆ / ಹೊಸ ರೂಲ್ಸ್ ಜಾರಿಗೆ / NA ಇಲ್ಲ, ಲೇಔಟ್ ಇಲ್ಲದ ಮನೆಗಳು

ಪಿಎಂ ಕಿಸಾನ್ ಯೋಜನೆಯ ಅನೇಕ ಫಲಾನುಭವಿಗಳು ಆದಾಯ ತೆರಿಗೆ ಪಾವತಿಸಿದ್ದಾರೆ. ಹಾಗೂ ಅನೇಕ ಫಲಾನುಭವಿಗಳು ಇತರ ಕಾರಣಗಳಿಗಾಗಿ ವಂಚಿತರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ದೊಡ್ಡ ಸಂಖ್ಯೆಯ ಫಲಾನುಭವಿಗಳು ಕಂತಿನ ಲಾಭವನ್ನು ಪಡೆದ ಪ್ರಕರಣ ತಪ್ಪಾಗಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಕರಣ ಆಡಳಿತವು ಹೆಚ್ಚಿನ ಪ್ರಕರಣಗಳ ತನಿಖೆ ನಡೆಸುತ್ತಿದೆ. ನಿಯಮದ ಅಡಿಯಲ್ಲಿ ಈ ಅನರ್ಹ ಫಲಾನುಭವಿಗಳಿಂದ ಪಡೆದ ಪ್ರಯೋಜನವನ್ನ ಹಿಂಪಡೆಯಲಾಗುತ್ತದೆ. ಅಂದರೆ ಕಂತಿನ ಹಣವನ್ನು ಹಿಂಪಡೆಯಲಾಗುತ್ತದೆ. ಈ ಯೋಜನೆ ಅಡಿ ಅನರ್ಹ ರೈತರಿಗೆ ಹಣ ವಸೂಲಿ ಮಾಡಲಾಗುವುದು. ಇದಕ್ಕಾಗಿ ಜನರಿಗೆ ನೋಟಿಸ್ ಕಳುಹಿಸಲಾಗುವುದು. ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬಹುದು ಮತ್ತು ಅಗತ್ಯವಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು.

ಇದನ್ನೂ ಕೂಡ ಓದಿ : Business Loan : ಸ್ವಂತ ಬಿಸಿನೆಸ್ ಮಾಡಲು ಸರ್ಕಾರದಿಂದ ನೇರಸಾಲ / ನಿರುದ್ಯೋಗಿ ಯುವಕ-ಯುವತಿಯರಿಗೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply