PM Kisan : 14 ನೇಯ ಕಂತಿನ ಹಣ ಎಲ್ಲಾ ರೈತರ ಖಾತೆಗೆ ಜಮಾ / ಭರ್ಜರಿ ಗುಡ್ ನ್ಯೂಸ್!

PM Kisan : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಇದೀಗ 14 ನೇಯ ಕಂತಿನ ಹಣ ಜಮಾವಣೆ ಕುರಿತಂತೆ ಆಂತರಿಕ ಮಾಹಿತಿ ಲಭ್ಯವಾಗಿದ್ದು, ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇಯ ಯಾವಾಗ ಜಮಾವಣೆಯಾಗುತ್ತೆ.? ಹಾಗು ಈ ಹಿಂದಿನ ಕಂತು ಇನ್ನೂ ಜಮಾವಣೆಯಾಗಿಲ್ವಾ.? ಹಾಗಾದ್ರೆ ಏನು ಮಾಡಬೇಕು.? ಯಾವ ರೈತರ ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗುತ್ತೆ ಹಾಗು ಜಮಾವಣೆಯಾಗಿಲ್ಲ ಎಂದು ಹೇಗೆ ಚೆಕ್ ಮಾಡುವುದು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL APL AAY ರೇಶನ್ ಕಾರ್ಡ್ ಹೊಂದಿರುವ ಜನತೆಗೆ ಬಂಪರ್.! ಹೊಸ ಕೊಡುಗೆ ಘೋಷಣೆ

ಹೌದು, ಇದುವರೆಗೂ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12 ರಿಂದ 13 ಕಂತುಗಳು ಜಮಾವಣೆಯಾಗಿದೆ. ಇದೀಗ 14 ನೇಯ ಕಂತಿನ ಹಣ ವರ್ಗಾವಣೆ ಮಾಡುವ ಕುರಿತಂತೆ ಈಗಾಗಲೇ ಎಲ್ಲಾ ರೀತಿಯಿಂದ ತಯಾರಿ ಮಾಡಲಾಗಿದ್ದು, ಆದರೆ ಕೆಲವು ರಿಯೇತರ ಬ್ಯಾಂಕ್ ಖಾತೆಗಳಿಗೆ ಈ ಹಿಂದಿನ ಕಂತುಗಳು ಜಮಾವಣೆಯಾಗಿಲ್ಲ. ಅದಕ್ಕೆ ಕಾರಣ ನೀಡಿದ ಕೇಂದ್ರ ಸರ್ಕಾರ ಯಾವ ರೈತರು ಇದುವರೆಗೂ ಪಿಎಂ ಕಿಸಾನ್ ನ ಈ ಕೆವೈಸಿಯನ್ನ ದೃಢೀಕರಿಸಲ್ಲವೋ ಅಂತಹ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಅಧೀಕೃತ ವೆಬ್ಸೈಟ್ ಗೆ ಭೇಟಿಕೊಟ್ಟು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗು ನಿಮ್ಮ ಮೊಬೈಲ್ ನಂಬರ್ ಹಾಕಿ ಈ ಕೆವೈಸಿ ದೃಢೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಕೆವೈಸಿ ದೃಢೀಕರಿಸಿದ ಬಳಿಕವೇ ನಿಮ್ಮ ಖಾತೆಗೆ ಈ ಹಿಂದಿನ ಕಂತುಗಳು ಹಾಗು ಮುಂಬರುವ ಕಂತುಗಳು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ಜಮಾವಣೆಯಾಗಲಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Loan Waiver Scheme : ಕರ್ನಾಟಕ ರೈತರ ಸಾಲಮನ್ನಾ ಘೋಷಣೆ 2023

ಇನ್ನು ನೀವು ಪಿಎಂ ಕಿಸಾನ್ ವೆಬ್ಸೈಟ್ ನ ಫಲಾನುಭವಿಯ ಆಯ್ಕೆಯನ್ನ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಹಾಗು ಗ್ರಾಮಗಳನ್ನ ಸೆಲೆಕ್ಟ್ ಮಾಡಿ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದ್ದರೆ, ನಿಮಗೂ ಕೂಡ ಎಲ್ಲ ಕಂತಿನ ಹಣ ಜಮಾವಣೆಯಾಗುತ್ತೆ. 14 ನೆಯ ಕಂತಿನ ಹಣ ಯಾವಾಗ ರೈತರ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತೆ ಅಂದರೆ ಆಂತರಿಕ ಮಾಹಿತಿಯ ಪ್ರಕಾರ ಇದೇ ಜೂನ್ ತಿಂಗಳ ಕೊನೆಯ ವಾರ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿಯೇ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗಲಿದೆ. ಹಾಗಾಗಿ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..