PM Kisan 14th Installment Date : ನಮಸ್ಕಾರ ಸ್ನೇಹಿತರೇ, ಎಲ್ಲಾ ರೈತರಿಗೆ ಸಂತಸದ ಸುದ್ದಿ, ಪಿಎಂ ಕಿಸಾನ್ 14ನೇ ಕಂತಿನ ಹಣ ಇನ್ನೂ ಬಂದಿಲ್ಲ ಅಂತ ಕಾಯುತ್ತಿದ್ದಿರಾ.? ಇನ್ನು ಮುಂದೆ ನೀವು ಕಾಯುವ ಅವಶ್ಯಕತೆ ಇಲ್ಲ. ಏಕೆಂದರೆ ಮುಂದಿನ ತಿಂಗಳು ಎಲ್ಲಾ ರೈತರ ಖಾತೆಗೆ ₹2,000/- ರೂಪಾಯಿ ಹಣ ಜಮಾ ಆಗಲಿದೆ. ಪಿಎಂ ಕಿಸಾನ್ 14ನೇ ಕಂತು ಬಿಡುಗಡೆ ಡೇಟ್ ಫಿಕ್ಸ್ ಆಗಿದೆ. ಯಾವ ದಿನ ಬಿಡುಗಡೆ ಆಗಲಿದೆ ಯಾರಿಗೆಲ್ಲಾ ಸಿಗುತ್ತೆ ಎಂದು ಸಂಪೂರ್ಣ ಮಾಹಿತಿಯನ್ನ ನೀಡಲಾಗಿದೆ.
ಇದನ್ನೂ ಕೂಡ ಓದಿ : ಆಧಾರ್ ಕಾರ್ಡ್ ಇದ್ದವರ ಗಮನಕ್ಕಾಗಿ // Aadhar Card Latest Updates 2023
ಪಿಎಂ ಕಿಸಾನ್ ನಿಧಿ :- ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತು 26 ಫೆಬ್ರವರಿ 2023 ರಂದು ಬಿಡುಗಡೆಯಾಗಿದೆ. ಇದೀಗ 14 ನೇ ಕಂತಿನ ಹಣವನ್ನ ರೈತರ ಖಾತೆಗೆ ಕಳುಹಿಸಲಾಗುವುದು. ಇತ್ತೀಚಿನ ನವೀಕರಣದ ಪ್ರಕಾರ ಮೇ ಅಥವಾ ಜೂನ್ ತಿಂಗಳಲ್ಲಿ ರೈತರ ಖಾತೆಗೆ ₹2000/- ಮೊತ್ತವನ್ನ ಕಳುಹಿಸಬಹುದು. 14 ನೇ ಕಂತು ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ. ವೇಳಾಪಟ್ಟಿಯ ಪ್ರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆ ಆಗಲಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ ಸ್ವೀಕರಿಸಿದ 11ನೇ ಕಂತನ್ನು 31 ಮೇ 2022 ಕ್ಕೆ ವರ್ಗಾಯಿಸಲಾಯಿತು. ಆದರೆ ಈ ಬಾರಿ 14 ನೇ ಕಂತು ಶೀಘ್ರವೇ ಖಾತೆಗೆ ಬರುವ ಸಾಧ್ಯತೆಯಿದೆ. ಈ ಬಾರಿ ಮೇ15 ರ ಸುಮಾರಿಗೆ ಸರ್ಕಾರ ರೈತರ ಖಾತೆಗೆ ಕಂತಿನ ಹಣ ಕಳುಹಿಸುವ ನೀರಿಕ್ಷೆಯಿದೆ ಎಂದು ಮೂಲಗಳು ಹೇಳಿವೆ.
ವಾಸ್ತವಾಗಿ ಈ ಬಾರಿ ಅಕಾಲಿಕ ಮಳೆಯಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿರುವ ಕಾರಣ ಕಂತಿನ ಹಣ ಬೇಗ ಬರುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಹಣ ಬಂದರೆ ರೈತರು ಆರ್ಥಿಕ ಸಹಾಯ ಪಡೆಯಬಹುದು. ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಇದನ್ನೂ ಕೂಡ ಓದಿ : ಆಧಾರ್ ಕಾರ್ಡ್ ಇದ್ದವರ ಗಮನಕ್ಕಾಗಿ // Aadhar Card Latest Updates 2023
ನೋಂದಾಯಿಸುವುದು ಹೇಗೆ.? :- ನೀವು ಯೋಜನೆಗೆ ಅರ್ಹರಾಗಿದ್ದರೆ, ಮತ್ತು ನೀವು ನೋಂದಾಯಿಸಿಕೊಳ್ಳಬೇಕಾದರೆ ನೀವು ಆನ್ಲೈನ್ ಅಥವಾ ಆಫ್ ಲೈನ್ ನಲ್ಲಿ ನೊಂದಾಯಿಸಿಕೊಳ್ಳ ಬಹುದು. ಇದಕ್ಕಾಗಿ ನೀವು ನಿಮ್ಮ ಪ್ರದೇಶದ ಪಿಎಂ ಕಿಸಾನ್ ಯೋಜನೆಗೆ ಆಯ್ಕೆಯಾದ ನೋಡಲ್ ಅಧಿಕಾರಿಯನ್ನ ಸಂಪರ್ಕಿಸಬೇಕು. ಇಲ್ಲಿ ಸಂಬಂಧಿತ ಫಾರ್ಮ್ ನ ಭರ್ತಿ ಮಾಡುವ ಮೂಲಕ ನಿಮ್ಮ ದಾಖಲೆಗಳನ್ನ ಸಲ್ಲಿಸಿ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರ ಅಂದರೆ CSC ಕೇಂದ್ರಕ್ಕೂ ನೀವು ಸಂಪರ್ಕಿಸ ಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..