Pan Card Rules : ಪಾನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ 2023 ಎಲ್ಲರಿಗೂ ಅನ್ವಯ

Pan Card Rules : ನಮಸ್ಕಾರ ಸ್ನೇಹಿತರೇ, ಆಧಾರ್ ಕಾರ್ಡ್ ನ್ನು ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಇನ್ನು ಕೇವಲ 15 ದಿನಗಳು ಮಾತ್ರವೇ ಬಾಕಿಯಿದೆ. ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ ಮಾಡಲು 2023 ರ ಜೂನ್ 30 ಕೊನೆಯ ದಿನವಾಗಿದೆ. ಜೂನ್ 30 ರೊಳಗೆ ₹1,000/- ರೂಪಾಯಿ ದಂಡ ಪಾವತಿ ಮೂಲಕ ಪಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನವಾಗಿದೆ. ಈ ದಿನಾಂಕದೊಳಗೆ ಲಿಂಕ್ ಮಾಡದೇ ಇದ್ದರೆ, ನಿಮ್ಮ ಪಾನ್ ಕಾರ್ಡ್ ನಿಷ್ಕ್ರೀಯವಾಗುತ್ತದೆ. ಆದಾಯ ತೆರಿಗೆ ಇಲಾಖೆ ಈ ಕುರಿತು ಟ್ವೀಟ್ ಮಾಡಿದ್ದು, ಯಾವುದೇ ಕೆಲಸವಿದ್ದರೂ ಜೂನ್ 30ರ ಮೊದಲು ಆಧಾರ್ ಕಾರ್ಡ್ – ಪಾನ್ ಕಾರ್ಡ್ ಲಿಂಕ್ ಮಾಡಲು ಜನರಿಗೆ ಸಲಹೆ ನೀಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!

ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ವಿನಾಯಿತಿ ಪಡೆದ ವರ್ಗದಲ್ಲಿ ಬರದ ಎಲ್ಲಾ ಪಾನ್ ಕಾರ್ಡ್ ಹೊಂದಿರುವವರು ಜೂನ್ 30 ರೊಳಗೆ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಕೊನೆಯ ದಿನಾಂಕದವರೆಗೆ ಕಾಯದೇ, ಇಂದೇ ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡಿ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

Whatsapp Group Join
Telegram channel Join

ಲಿಂಕ್ ಮಾಡದಿದ್ದಲ್ಲಿ ಪಾನ್ ಕಾರ್ಡ್ ನಿಷ್ಕ್ರೀಯ :- ಜೂನ್ 30 ರೊಳಗೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ನಂತರ ಪಾನ್ ಕಾರ್ಡ್ ನಿಷ್ಕ್ರೀಯವಾಗುತ್ತದೆ. ಇದರಿಂದ ಹಲವು ಸಮಸ್ಯೆಗಳನ್ನ ಎದುರಿಸಬೇಕಾಗಬಹುದು. ಒಂದು ವೇಳೆ ನೀವು ತೆರಿಗೆದಾರರಾಗಿದ್ದು, ನಿಮ್ಮ ಪಾನ್ ಕಾರ್ಡ್ ನಿಷ್ಕ್ರೀಯವಾದರೆ, ನಿಮಗೆ ತೆರಿಗೆ ಮರುಪಾವತಿ ನೀಡಲಾಗುವುದಿಲ್ಲ. ಪಾನ್ ಕಾರ್ಡ್ ನಿಷ್ಕ್ರೀಯವಾಗಿರುವ ಅವಧಿಗೆ ಮರುಪಾವತಿಗೆ ಯಾವುದೇ ಬಡ್ಡಿಯನ್ನ ಪಾವತಿಸಲಾಗುವುದಿಲ್ಲ. ಅಂತಹ ತೆರಿಗೆದಾರರಿಂದ ಹೆಚ್ಚಿನ ಟಿಡಿಎಸ್(TDS) ಮತ್ತು ಟಿಸಿಎಸ್(TCS)ನ್ನು ವಿಧಿಸಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..