ಅಚ್ಛೇ ದಿನ್…! ಯಾರಿಗೆ?..
ಮೋದಿಯ ಆಗಮನ… ದಲಿತ ಮತ್ತು ಅಲ್ಪಸಂಖ್ಯಾತರ ಧಮನ ಗುಜರಾತ್, ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಬುರ್ಹಾನ್ ವನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಸತ್ತವರು ಎಷ್ಟು ಮಂದಿಯೋ, ಯಾರಿಗೂ ಲೆಕ್ಕ ಸಿಗುತ್ತಿಲ್ಲ. ಮಾಧ್ಯಮಗಳನ್ನು ಪೊಲೀಸರು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು ಬಂದ್ ಆಗಿವೆ.ಗುಜರಾತ್ನಲ್ಲಿ ಸತ್ತ ದನದ ಚರ್ಮ ತೆಗೆಯುತ್ತಿದ್ದ ದಲಿತ ಯುವಕರನ್ನು ಕಟ್ಟಿ ಹಾಕಿ ನಾಯಿಗೆ ಹೊಡೆಯುವಂತೆ ಹೊಡೆಯಲಾಗಿದೆ. ದಲಿತರು ದಂಗೆಯೆದ್ದಿದ್ದಾರೆ. ಸತ್ತ ದನದ ಮೂಳೆ ಮಾಂಸಗಳನ್ನೆಲ್ಲ ತಂದು ಸರ್ಕಾರಿ ಕಚೇರಿಗಳಲ್ಲಿ ಎಸೆದು ನೀವೇ ಸಂಸ್ಕಾರ ಮಾಡಿಕೊಳ್ಳಿ ಎಂದು ಸವಾಲೆಸೆದಿದ್ದಾರೆ. ಪ್ರತಿರೋಧನೆ ಮಾಡುವ ಪ್ರತಿಪಕ್ಷ ಯಾವುದೊ … Read more