Latest News : ಜುಲೈಯಿಂದ ಇಡೀ ದೇಶಾದ್ಯಂತ 5 ಹೊಸ ರೂಲ್ಸ್ ಜಾರಿಗೆ / ಬೆಲೆ ಇಳಿಕೆ ಸಂಭವ

Latest News : ನಮಸ್ಕಾರ ಸ್ನೇಹಿತರೇ, ಇದೇ ಬರುವ ಜುಲೈ 1 2023 ತಿಂಗಳಿನಿಂದಲೇ ಇಡೀ ದೇಶಾದ್ಯಾಂತ ಹಾಗು ಕರ್ನಾಟಕದಾದ್ಯಂತ ಹಲವು ಹೊಸ ನಿಯಮಗಳ ಬದಲಾವಣೆ, ಬ್ಯಾಂಕ್ ಖಾತೆ ಹೊಂದಿದವರಿಗೆ ಹೊಸ ನಿಯಮ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹೊಸ ನಿಯಮ, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೂಡ ಇಳಿಕೆ ಹಾಗು ಅಡುಗೆ ಎಣ್ಣೆ ಬೆಲೆ ಇಳಿಕೆ ಸೇರಿದಂತೆ, ಹಾಗು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಅಧೀಕೃತ ಜಾರಿಗೆ ಮಾಡುವುದರ ಕುರಿತಂತೆ ಹಲವು ಬದಲಾವಣೆಗಳು ಈ ಜುಲೈ ತಿಂಗಳಿನಿಂದಲೇ ಜಾರಿಗೆ ಬರುತ್ತಿದ್ದು, ಏನೆಲ್ಲಾ ಬದಲಾವಣೆಗಳು ಆಗುತ್ತಿದೆ.? ಸಾರ್ವಜನಿಕರ ಮೇಲೆ ಹೀಗೆ ಈ ನಿಯಮಗಳು ಪರಿಣಾಮ ಬೀರುತ್ತವೆ.? ಏನೆಲ್ಲಾ ಮಾಹಿತಿಯನ್ನ ನೀವು ತಿಳಿದುಕೊಳ್ಳಬೇಕು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಹೌದು, ಮೊದಲಿಗೆ ಈ ಜುಲೈ ತಿಂಗಳಿನಲ್ಲಿ ಬ್ಯಾಂಕ್ ಗಳಲ್ಲಿ ಏನೆಲ್ಲಾ ಬದಲಾವಣೆಯಿದೆ ಅಂದರೆ, ಜುಲೈ ತಿಂಗಳಿನಲ್ಲಿ ಎರಡನೇ ಹಾಗು ನಾಲ್ಕನೇಯ ಶನಿವಾರ ಹಾಗು ಭಾನುವಾರ ಸೇರಿದಂತೆ ವಿವಿಧ ಬಗೆಯ ಹಬ್ಬ-ಹರಿದಿನಗಳ ರಜೆ ಸೇರಿದಂತೆ ಒಟ್ಟು ಜುಲೈ ತಿಂಗಳಿನಲ್ಲಿ 15 ದಿನಗಳ ಕಾಲ ದೇಶಾದ್ಯಾಂತ ಬ್ಯಾಂಕ್ ಗಳು ಮುಚ್ಚಲ್ಪಡಲಿವೆ. ಇನ್ನು ಎರಡನೇಯ ಬದಲಾವಣೆ ಏನಂದರೆ, ತಮ್ಮ ಪಾನ್ ಕಾರ್ಡ್ ಗೆ ಇದುವರೆಗೂ ಯಾರು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲವೋ ಅಂತಹವರು ಲಿಂಕ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ನೀವು ಈ ವೆಬ್ ಸೈಟ್ ಮೂಲಕ ನಿಮ್ಮ ಆಧಾರ್ ಕಾರ್ಡ್ – ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ. ಆಧಾರ್ ಕಾರ್ಡ್ – ಪಾನ್ ಕಾರ್ಡ್ ಲಿಂಕ್ ಇಲ್ಲಿ ಮಾಡಿಕೊಳ್ಳಿ . ನೀವು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳದಿದ್ದರೆ, ನಿಮ್ಮ ಪಾನ್ ಕಾರ್ಡ್ ರದ್ದಾಗಲಿದೆ ಹಾಗು ಸರ್ಕಾರದ ವಿವಿಧ ಸೇವೆ, ಯೋಜನೆಗಳ ಲಾಭಗಳನ್ನ ನೀವು ಪಡೆಯುವುದಕ್ಕೆ ಅನರ್ಹರಾಗಿರುತ್ತೀರಿ.

ಇನ್ನು ಮೂರನೇಯದಾಗಿ ಜುಲೈ ತಿಂಗಳಿನಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ ಹಾಗು ಎಲ್ಲಾ ಪೆಟ್ರೋಲ್ – ಡೀಸೆಲ್ ದರದಲ್ಲಿ ಅಂದರೆ, ಪೆಟ್ರೋಲಿಯಂ ತೈಲ ಉತ್ಪನ್ನಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣುತ್ತೀವಿ. ಈಗಾಗಲೇ ಅಡುಗೆ ಎಣ್ಣೆ ದರದಲ್ಲಿ ಅಲ್ಪ ದರ ಇಳಿಕೆ ಕಂಡಿದ್ದು, ಇನ್ನು ಪೆಟ್ರೋಲ್ – ಡೀಸೆಲ್, ಗ್ಯಾಸ್ ಸಿಲಿಂಡರ್ ದರದಲ್ಲಿ ಕೂಡ ಜುಲೈ ತಿಂಗಳಿನಲ್ಲಿ ಇಳಿಕೆ ಕಾಣಬಹುದಾಗಿದೆ. ನಾಲ್ಕನೆಯದಾಗಿ ರೈತರಿಗೆ ಬಂಪರ್ ಸುದ್ಧಿ ಅಂತಾನೆ ಹೇಳಬಹುದು. ಜುಲೈ ತಿಂಗಳಿನಲ್ಲಿಯೇ ಆಸ್ತಿ ನೋಂದಣೆ ಕಾವೇರಿ ೨.೦ ಅಡಿಯಲ್ಲಿ ನೀವು ನಿಮ್ಮ ಜಮೀನು, ಆಸ್ತಿ ಪತ್ರ ನೋಂದಣಿ ಸೇರಿದಂತೆ, ಮನೆ ನೋಂದಣಿ, ಮನೆ ಖರೀದಿಸುವಿಕೆ, ಫ್ಲೋಟ್ ಸೇರಿದಂತೆ ವಿವಿಧ ಬಗೆಯ ಸಬ್ ರೆಜಿಸ್ಟರ್ ನೋಂದಣಿಗಳನ್ನ ನೀವು ಆನ್ ಲೈನ್ ಮೂಲಕ ಕಾವೇರಿ ೨.೦ ಅಡಿಯಲ್ಲಿಯೇ ಅರ್ಜಿಯನ್ನ ಸಲ್ಲಿಸುವ ವ್ಯವಸ್ಥೆಯನ್ನ ಜುಲೈ ತಿಂಗಳಿನಲ್ಲಿಯೇ ಜಾರಿಗೆ ಮಾಡಲಾಗುತ್ತಿದೆ.

Whatsapp Group Join
Telegram channel Join

ಇನ್ನು ಕೊನೆಯದಾಗಿ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಬಿಪಿಎಲ್, ಎಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ೧೦ ಕೆಜಿ ಅಕ್ಕಿ ವಿತರಣೆ ಮಾಡುವ ಅಧೀಕೃತ ಆದೇಶ ಕೂಡ ಈ ಬರುವ ಜುಲೈ ತಿಂಗಳಿನಿಂದಲೇ ಜಾರಿಗೆ ಬರುತ್ತಿವೆ. ಹೀಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..