Kisan Credit Card : ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ / 3ಲಕ್ಷ ಹಣ ಸಹಾಯಧನ ಘೋಷಣೆ.!

Kisan Credit Card : ಕುರಿ, ಕೋಳಿ, ಹಸು ಸಾಕಲು ಬಯಸುವವರಿಗೆ ಸರ್ಕಾರದಿಂದ 3 ಲಕ್ಷ ರೂಪಾಯಿಗಳವರೆಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.! ಅಥವಾ ಮನೆಯಲ್ಲಿ ಕುರಿ, ಹಸು, ಮೇಕೆ ಹೀಗೆ ಯಾವುದೇ ಪಶುಪಾಲನೆ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರದಿಂದ 3 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡಲಾಗುತ್ತಿದೆ.

Whatsapp Group Join
Telegram channel Join

ಈಗಾಗಲೇ ರಾಜ್ಯದಲ್ಲಿ ಹೊಸ ಅರ್ಜಿಗಳನ್ನ ಕರೆಯಲಾಗಿದ್ದು, ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಈ ಸೌಲಭ್ಯ ನೀಡಲಾಗುತ್ತದೆ. ಆದರೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರಬೇಕು. ಈ ಎರಡು ದಾಖಲಾತಿಗಳು ಇರುವ ಎಲ್ಲಾ ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ವಿಶೇಷವಾಗಿ ರೈತರಿಗೂ ಸಹ ಈ ಮೂರು ಲಕ್ಷ ರೂಪಾಯಿಗಳ ಸಂಪೂರ್ಣ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಕೂಡ ಓದಿ : Drought Relief : 2023-24ನೇ ಸಾಲಿನ ರಾಜ್ಯದ ರೈತರ ಬರ ಪರಿಹಾರ ಹಣ ಬಿಡುಗಡೆ / ಹಣ ಪಡೆಯಲು ಈ ದಾಖಲೆ ಇದ್ದರೆ ಸಾಕು

Whatsapp Group Join
Telegram channel Join

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ರೈತರಿಗಾಗಿ ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದು, ಇದು ಇನ್ನೂ ಕೂಡ ಸಾಕಷ್ಟು ಜನರಿಗೆ ತಲುಪಿಲ್ಲ. ಮಾಹಿತಿ ನೀಡುವ ಮಧ್ಯಮ ವರ್ಗದ ಕೊರತೆ ಇದೆ. ಅದಕ್ಕಾಗಿ ಈ ಮಾಹಿತಿ ಎಲ್ಲಾ ರೈತರಿಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ

ನೀವು ಕೂಡ ಈ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿದುಕೊಂಡು ಸರ್ಕಾರದಿಂದ 3 ಲಕ್ಷ ರೂಪಾಯಿಗಳವರೆಗೆ ಕುರಿ ಸಾಕಾಣಿಕೆ ಅಥವಾ ಕೋಳಿ ಸಾಕಾಣಿಕೆ ಅಥವಾ ಮೇಕೆ ಸಾಕಾಣಿಕೆ ಅಥವಾ ಹಸು ಸಾಕಾಣಿಕೆ ಅಥವಾ ಪಶು ಸಂಗೋಪನೆ ಸೇರಿದಂತೆ ಯಾವುದೇ ಎಮ್ಮೆ ಹೀಗೆ ಹೈನುಗಾರಿಕೆಯನ್ನು ಸಹ ಮಾಡಲು ಬಯಸುವವರ ಪ್ರತಿಯೊಬ್ಬರಿಗೂ ಕೂಡ ಇದು ತುಂಬಾನೇ ಉಪಯುಕ್ತವಾದ ಯೋಜನೆಯಾಗಿದೆ.

ಇದನ್ನೂ ಕೂಡ ಓದಿ : PM-Kisan Samman Nidhi : ರೈತರಿಗೆ ಗುಡ್ ನ್ಯೂಸ್.! ಪಿಎಂ ಕಿಸಾನ್ 15ನೇ ಕಂತು ಇನ್ನು ಮೂರು ದಿನಗಳಲ್ಲಿ ರೈತರ ಖಾತೆಗೆ ಜಮಾ.!

ಹಸು ಕುರಿ ಮೇಕೆ ಸಾಕು ಅವರಿಗೆ ಸರ್ಕಾರದಿಂದ ಸಿಗಲಿದೆ ಮೂರು ಲಕ್ಷ ರೂಪಾಯಿ ಸಹಾಯಧನ.!

ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಉದ್ಯಮ ಮಾಡಲು ಬಯಸುವವರಿಗೆ ಸರ್ಕಾರದಿಂದ ಪ್ರಮುಖ ಸೌಲಭ್ಯ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಮಾಡಲು ಬಯಸುವವರಿಗೆ ಸರ್ಕಾರದಿಂದ ಪ್ರಮುಖ ಸೌಲಭ್ಯ ಸಿಗಲಿದೆ.

ಹಸು ಸಾಕಾಣಿಕೆ :-

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಸಿಗುವ ಸಾಲ ಹೈನುಗಾರಿಕೆ, ಮಿಶ್ರ ತಳಿ ದನಗಳ ನಿರ್ವಹಣೆಗೆ ಸಹಾಯಧನ ನೀಡಲಾಗುತ್ತಿದೆ. ಒಂದು ಹಸುವಿಗೆ 18,000/- ಹಾಗೂ 2 ಹಸುವಿಗೆ 36,000/- ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು. ಅದೇ ರೀತಿ ಎಮ್ಮೆ ನಿರ್ವಹಣೆಗೆ, ಒಂದು ಎಮ್ಮೆಗೆ 21,000/- ಹಾಗೂ ಎರಡು ಎಮ್ಮೆ ಸಾಕಾಣಿಕೆಗೆ 42,000/- ರೂಪಾಯಿಗಳವರೆಗೆ ಸಾಲವಾಗಿ ಸಿಗಲಿದೆ.

ಇದನ್ನೂ ಕೂಡ ಓದಿ : Pension Scheme : ವೃದ್ಧರಿಗೆ, ಅಂಗವಿಕಲರಿಗೆ, ವಿಧವಾ ಮಹಿಳೆಯರಿಗೆ ಹಾಗು ಹಿರಿಯ ನಾಗರಿಕರಿಗಾಗಿ ಹೊಸ ನಿಯಮ

ಕುರಿ ಸಾಕಾಣಿಕೆ :-

10 ಮತ್ತು ಒಂದು ಕುರಿಗಳನ್ನು ಕಟ್ಟಿ ಸಾಕಿದರೆ 29,950/- ರೂಪಾಯಿ ಹಾಗೂ ಬಯಲಿನಲ್ಲಿ ಬಿಟ್ಟು ಸಾಕುವ ಕುರಿಗಳಿಗೆ 28,200/- ಗಳ ಸಾಲ ಸೌಲಭ್ಯ ಸಿಗಲಿದೆ. ಇದೇ ರೀತಿ ಮೇಕೆ ಸಾಕಾಣಿಕೆಗೂ ಕೂಡ ಕಟ್ಟಿ ಸಾಕುವ ಮೇಕೆಗೆ 2,950/- ಹಾಗೂ ಬಿಟ್ಟು ಸಾಕುವ ಮೇಕೆ ನಿರ್ವಹಣೆಗೆ 14,700/- ರೂಪಾಯಿಗಳನ್ನ ಸಾಲವಾಗಿ ಪಡೆಯಬಹುದು.

ಕೋಳಿ ಸಾಕಾಣಿಕೆ :-

ಮಾಂಸದ ಕೋಳಿ ಸಾಕುವುದಾದರೆ ಒಂದು ಕೋಳಿಗೆ 80/- ರೂಪಾಯಿಯಂತೆ, ಸಾವಿರ ಕೋಳಿಗೆ 80,000/- ರೂಪಾಯಿ ಸಾಲ ಪಡೆಯಬಹುದು. ಅದೇ ರೀತಿ ಮೊಟ್ಟೆ ಕೋಳಿ ಸಾಕಾಣಿಕೆ ನಿರ್ವಹಣಾ ವೆಚ್ಚ ಒಂದು ಕೋಳಿಗೆ 180/- ರೂಪಾಯಿಯಂತೆ, ಸಾವಿರ ಕೋಳಿಗೆ 1,80,000/- ಸಾಲವಾಗಿ ಪಡೆಯಬಹುದು.

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್.! ಹಣ ಬರದೇ ಇದ್ದರೆ ಈ ಕೆಲಸ ಕಡ್ಡಾಯವಾಗಿ ಮಾಡಿ

ಅರ್ಜಿ ಯಾವಾಗ ಸಲ್ಲಿಸಬೇಕು.?

ಅರ್ಹ ಫಲಾನುಭವಿಗಳು ಮಾರ್ಚ್ 31, 2024ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ನಿಮ್ಮ ಉದ್ಯಮದ ಬಗ್ಗೆ ಮಾಹಿತಿ, ಬ್ಯಾಂಕ್ ಖಾತೆಯ ವಿವರ, ಅರ್ಜಿ ನಮೂನೆ ಸೇರಿದಂತೆ ಅಗತ್ಯ ದಾಖಲೆಗಳನ್ನ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ 8277100200 ಈ ಸಹಾಯವಾಣಿಗೆ ಕರೆ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply