Spandana Vijay : ಅಳುತ್ತಾ ಕುಳಿತಿದ್ದ ರಾಘು ಮನೆಗೆ ಬಂದ ಸುದೀಪ್ ಮಾಡಿದ ಕೆಲಸ ಕಂಡು ರಾಘು ಶಾಕ್.!

Spandana Vijay : ಇತ್ತೀಚಿಗಷ್ಟೇ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ನಟ ವಿಜಯ ರಾಘವೇಂದ್ರ ಅವರನ್ನು ನಿನ್ನೆ ಕಿಚ್ಚ ಸುದೀಪ್ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ವಿಜಯ ರಾಘವೇಂದ್ರ ಅವರ ಜಕ್ಕೂರಿನ ಮನೆಗೆ ಸುದೀಪ್ ಭೇಟಿ ನೀಡಿದ್ದಾರೆ. ವಿಜಯ ರಾಘವೇಂದ್ರ ಅವರೊಂದಿಗೆ ಕೆಲಕಾಲ ಮಾತನಾಡಿ ಅವರಿಗೆ ಹಾಗು ಅವರ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ. ಸಹನಟನನ್ನು ಗಟ್ಟಿಯಾಗಿ ಅಪ್ಪಿಕೊಂಡು ಧೈರ್ಯ ತುಂಬುವ ಪ್ರಯತ್ನವನ್ನ ಕಿಚ್ಚ ಸುದೀಪ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ ರಾಘವೇಂದ್ರ ಅವರ ಸಹೋದರ ಹಾಗು ನಟ ಶ್ರೀಮುರಳಿ ಸಹ ಜೊತೆಗಿದ್ದರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gold Rate Today : ಇತಿಹಾಸ ನಿರ್ಮಿಸುತ್ತಾ ಚಿನ್ನ.! ರೆಕಾರ್ಡ್ ಉಡೀಸ್ ಮಾಡಿದ ಬಂಗಾರ.!

ಜಕ್ಕೂರಿನಲ್ಲಿರುವ ವಿಜಯ ರಾಘವೇಂದ್ರ ಅವರ ಮನೆಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯ, ನಿರ್ಮಾಪಕ ಕಾರ್ತಿಕ್ ಗೌಡ ಕೂಡ ಆಗಮಿಸಿ ಶ್ರೀಮುರಳಿ ಹಾಗು ವಿಜಯ ರಾಘವೇಂದ್ರ ಅವರನ್ನ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸ್ಪಂದನ ಅವರು ನಿಧನರಾದಾಗ ಸುದೀಪ್ ಅವರು ಶೂಟಿಂಗ್ ನಿಮಿತ್ತ ವಿದೇಶದಲ್ಲಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಆದರೆ ನಿನ್ನೆ ವಿಜಯ ರಾಘವೇಂದ್ರ ಅವರ ಮನೆಗೆ ಪತ್ನಿ ಸಮೇತ ಭೇಟಿ ನೀಡಿ, ಗೆಳೆಯನನ್ನು ತಬ್ಬಿಕೊಂಡು ಸಮಾಧಾನ ಹೇಳಿದ್ದಾರೆ. ಕಿಚ್ಚನ ಈ ಗುಣ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯ ಹಾಗು ಸ್ಪಂದನ ಪ್ರೀತಿಸಿ, ಗುರು ಹಿರಿಯರ ಸಮ್ಮತಿ ಪಡೆದು ವಿವಾಹವಾಗಿದ್ದರು. ಕಳೆದು ತಿಂಗಳು ಕುಟುಂಬದ ಆಪ್ತರ ಜೊತೆಗೆ ಥೈಲ್ಯಾಂಡ್ ಗೆ ಹೋಗಿದ್ದಾಗ ಹಾರ್ಟ್ ಅಟ್ಯಾಕ್ ನಿಂದಾಗಿ ವಿಜಯ್ ಪತ್ನಿ ನಿಧನರಾದರು. ಸ್ಪಂದನ ಅಗ್ಗಳಿಕೆ ವಿಜಯ್ ಕುಟುಂಬಕ್ಕೆ ದೊಡ್ಡ ಶಾಕ್ ನೀಡಿತ್ತು.

Whatsapp Group Join
Telegram channel Join

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..